ಡಿ.13 ರಂದು ಸುವರ್ಣ ಸೌಧ ಮುತ್ತಿಗೆ




ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ರೈತರನ್ನ‌ ಕಡೆಗಣಿಸುತ್ತಿದ್ದು ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಬೆಳಗಾವಿ ಚಲೋ ಮಾಡಲಾಗುತ್ತಿದೆ. ಡಿ‌13 ರಂದು ಬೆಳಗಾವಿಯ ಸುವರ್ಣ ಸೌಧವನ್ನ ಮುತ್ತಿಗೆಹಾಕಲಾಗುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಣ ಎಚ್ಚರಿಸಿದೆ.

ಬಣದ ರೈತ ಮುಖಂಡ ಮಂಜುನಾಥ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲೆಕ್ಟ್ರಿಸಿಟಿ ಮತ್ತು ಭೂ ಕಾಯ್ದೆ ಬಗ್ಗೆ ಆಶ್ವಾಸನೆ ನೀಡುತ್ತಿದ್ದರೂ ಅಧಿಕಾರಕ್ಕೆ ಬಂದ ಮೇಲೆ ರೈತರನ್ನ ಕಡೆಗಣಿಸಿದ್ದಾರೆ. ಎದೆ ಸೊಕ್ಕಿನ ಸರ್ಕಾರವಾಗಿದೆ. ಭೂ ಸುಧಾರಣೆ ಕಾಯ್ದೆಯಿಂದ ಭೂಮಿ ಕಳೆದುಕೊಂಡಿದ್ದಾರೆ ಎಂದು ದೂರಿದರು. 

ಸ್ವತಂತ್ರ್ಯ ಪೂರ್ವದ ರೈತರ ಸಮಸ್ಯೆಯನ್ನ‌ಬಗೆಹರಿಸಲಿಲ್ಲ. ಸ್ವಾಮಿನಾಥನ್ ವರದಿಯನ್ನ ರಾಜಕೀಯ ಪಕ್ಷಗಳು ಒಪ್ಪಲಿಲ್ಲ. ರೈತರ ಮರಣ ಶಾಸನ ಬರೆಯಲುಬಂದಂತೆ ಗೋಚರಿಸುತ್ತಿದ್ದಾರೆ. ಗ್ಯಾರೆಂಟಿಗಳನ್ನ ಕೊಡಲಿ ಆದರೆ ರೈತರ ಸಮಸ್ಯೆಯನ್ನ ಬಗೆಹರಿಸಬೇಕೆಂದು ಆಹ್ರಹಿಸಿದರು. 

ಕಳೆದ ವರ್ಷ ಬರದಿಂದ ರೈತ ಕಂಗಾಲಾದರೆ, ಈವರ್ಷಮಳೆಯಿಂದ ಇದುವರೆಗೂ ಕಟಾವ್ ಮಾಡುತ್ತಿಲ್ಲ. ರೈತರ ಸಮಸದಯೆಯನ್ನ ಬಗೆಹರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಸಂಘ ಪ್ರತಿಭಟಿಸಲಿದೆ ಎಂದರು. 

ಡಿ.21 ರಂದು ಎನ್ ಡಿ ಸುಂದರೇಶ್ ಅವರ ನೆನಪಿನ ಕಾರ್ಯಕ್ರಮ ನಡೆಯಲಿದೆ. ಶುಂಠಿ ಮತ್ತುಬಾಳೆಕಾಯಿ ಪೆಚ್ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸಿ ಆದೇಶ ಹೊರಡಿಸಬೇಕು. ಭತ್ತಕ್ಕೆ ನ್ಯಾಯಯುತ ಬೆಲೆ ನಿಗದಿ ಪಡಿಸಬೇಕು. 

ವಕ್ಫ್ ಬೋರ್ಡ್ ರೈತರ ಪಹಣಿಯಲ್ಲಿ ತರಲಾಗಿದೆ. ಸಂಪೂರ್ಣ ರದ್ದುಪಡಿಸಬೇಕು. ಕಳೆದ 75 ವರ್ಷದಿಂದ 10 ಲಕ್ಷ ರೈತರು ಬಗರ್ ಹುಕುಂ ಮಾಡಿಕೊಂಡು ಬರುತ್ತಿದ್ದು ಅವರ ಜಮೀನು ಸಕ್ರಮಗೊಳಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close