ಸುದ್ದಿಲೈವ್/ಶಿವಮೊಗ್ಗ
ಎಟಿಎಂ ಕಾರ್ಡ್ ಅದಲು ಬದಲು ಮಾಡಿ 1.28 ಲಕ್ಷ ರೂ. ಲಪ್ಟಾಯಿಸಿರುವ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಜುನಾಥ ಬಡಾವಣೆಯ 68 ವರ್ಷದ ಮಹಿಳೆ ಮಗಳೊಬ್ಬರು ಡಾಕ್ಟರ್ ಆಗಿದ್ದು, ಅವರು ಬೆಂಗಳೂರಿನ ಮಡಿವಾಳ ಎಫ್.ಎಸ್.ಎಲ್ ನಲ್ಲಿ. ಕೆಲ ಮಾಡುತ್ತಿದ್ದಾರೆ. ಅವರನ್ನು ನೋಡಿಕೊಂಡು ಬರಲು ಆಗಾಗ್ಗೆ ಬೆಂಗಳೂರಿಗೆ ಹೋಗಿ ಬರುತ್ತಿದ್ದರು,
ಮೊನ್ನೆ ಮಾರುಕಟ್ಟೆಗೆ ಹೋಗಲೆಂದು ನೆಹರೂ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ, ಆಕೌಂಟ್ ಹೊಂದಿದ್ದು, ಡಿ.10 ರಂದು ಬೆಳಿಗ್ಗೆ, ಸುಮಾರು 11-15 ಗಂಟೆ ವೇಳೆಗೆ ನೆಹರೂ ರಸ್ತೆಯ, ಕಲ್ಯಾಣ್ ಜ್ಯೂವೆಲರಿ ಪಕ್ಕದಲ್ಲಿರುವ ಕೆನಾರ್ ಬ್ಯಾಂಕ್ ವಿ.ಟಿ.ಎಮ್ ನಲ್ಲಿ,, ಹಣ ವಿತ್ ಡ್ರಾ ಮಾಡಲು ಹೋಗಿದ್ದರು. ಹಣ ವಿತ್ ಡ್ರಾ ಮಾಡುವ ವೇಳೆಗೆ ಎ.ಟಿ.ಎಮ್ ಬಳಿ ಇದ್ದ ಒಬ್ಬ ವ್ಯಕ್ತಿ ಎಷ್ಟು ಹಣ ವಿತ್ ಡ್ರಾ ಮಾಡಬೇಕೆಂದು ಸಹಾಯ ಮಾಡುವ ರೂಪದಲ್ಲಿ ಕೇಳಿದ್ದಾನೆ.
ವೃದ್ಧೆ ಆತನ ಕೈಗೆ ಎ.ಟಿ.ಎಮ್ ಕಾರ್ಡ ಕೊಟ್ಟು, 500 ರೂ. ವಿತ್ ಡ್ರಾ ಮಾಡಿಕೊಡಿ ಎಂದು ಕೇಳಿದ್ದಾರೆ. ಆತನು ವಿ.ಟಿ.ಎಮ್ ಮಿಷನ್ ಗೆ ಕಾರ್ಡ ಹಾಕಿ ಅಪರೇಟ್ ಮಾಡಿದ್ದು, ಪಿನ್ ನಂಬರ್ ನ್ನು ಒತ್ತುವಂತೆ ವೃದ್ಧೆಗೆ ಹೇಳಿದ್ದಾನೆ. ಪಿನ್ ನಂಬರ್ ನ್ನ ಮಿಷನ್ ನಲ್ಲಿ ಒತ್ತಿ 500 ರೂ. ಹಣ ಮಿಷನ್ ನಿಂದ ಕೊಟ್ಟಿದ್ದಾನೆ.
ಜೊತೆಗೆ ಎ.ಟಿ.ಎಮ್ ಕಾರ್ಡನ್ನು ವಾಪಸ್ಸು ಕೊಟ್ಟಿರುತ್ತಾನೆ. ನಂತರ ವೃದ್ಧೆ ಮಾರ್ಕೇಟ್ ಗೆ ಹೋಗಿ ಅಲಿಂದ ಮನೆಗೆ ವಾಪಸ್ಸು ಹೋಗಿದ್ದಾರೆ. ಇ ರೀತಿಯ ಮೂಲ ಸದ ಬಗ್ಗೆ ಅರಿವಿಲ್ಲದ ಮಹಿಳೆ ಎರಡು ದಿನ ಹಾಗೆ ಇದ್ದರು. ಎರಡು ದಿನ ನಂತರ ಅವರ ಮೊಬೈಲ್ ಪೋನ್ ನ ಮೆಸೇಜ್ ಚೆಕ್ ಮಾಡಿದಾಗ 1,28,910/- ರೂಗಳು ಹಣ ವಿತ್ ಡ್ರಾ ಆಗಿರುತ್ತದೆ ಎಂದು ತಿಳಿದು ಬಂದಿದೆ.
ಕೂಡಲೇ ಗಾಬರಿಯಿಂದ ವೃದ್ಧೆ ಎ.ಟಿ.ಎಮ್ ಕಾರ್ಡನ್ನು ನೋಡಿದಾಗ ಅವರ ಬಳಿ ಇದ್ದ ಎ.ಟಿ.ಎಮ್ ಕಾರ್ಡ ಅವರದ್ದಾಗಿರಲಿಲ್ಲ. ಈ ವಿಚಾರವನ್ನು ಮಕ್ಕಳ ಬಳಿ ಹೇಳಿಕೊಂಡಿದ್ದಾರೆ. ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋದಾಗ ಸಹಾಯದ ರೂಪದಲ್ಲಿ ಬಂದಿದ್ದ ಯುವಕನಮೇಲೆ ಅನುಮಾನ ಪಟ್ಟು ವೃದ್ಧೆ ರೆಹನಾಬೇಗಂ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.