ಆಟೋ ಮೀಟರ್ ಅಳವಡಿಸದಿದ್ದರೆ 112ಗೆ ಕರೆ ಮಾಡಿ





ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಆಟೋ ಮೀಟರ್ ಅಳವಡಿಕೆ ಕುರಿತು ಎಸ್ಪಿ ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ನಗರದ ಆಟೋಗಳು ಕಡ್ಡಾಯ ಆಟೋ ಮೀಟರ್ ಅಳವಡಿಕೆ ಕುರಿತು ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. 


ಈ ಕುರಿತು ಆಟೋ ಮೀಟರ್ ಅಳವಡಿಕೆ ಬಗ್ಗೆ ನ.15 ರಿಂದ ಡಿ.15 ರವರೆಗೆ ಒಂದು ತಿಂಗಳು ಡ್ರೈವ್ ನಡೆಸಲಾಗಿತ್ತು.  ಆಟೋ ಮೀಟರ್ ಅಳವಡಿಕೆ ಮಾಡದಿರುವ ಆಟೋಗಳ ವಿರುದ್ಧ ಒಂದು ತಿಂಗಳಲ್ಲಿ 528 ಪ್ರಕರಣ ದಾಖಲಾಗಿದೆ. 2,40,900 ರೂ. ದಂಡವನ್ನ ವಿಧಿಸಲಾಗಿದೆ. 

ಸಾರ್ವಜನಿಕರು ಆಟೋವನ್ನ ಬಾಡಿಗೆ ಪಡೆಯುವಾಗ ಖಡ್ಡಾಯವಾಗಿ ಮೀಟರ್ ಅಳವಡಿಕೆ ಬಗ್ಗೆ ಪರಿಶೀಲಿಸಿಕೊಳ್ಳತಕ್ಕದ್ದು, ಒಂದು ವೇಳೆ ಆಟೋ ಚಾಲಕ ಮೀಟರ್ ಅಳವಡಿಕೆ ಮಾಡದಿದ್ದರೆ 112 ಗೆ ಕರೆ ಮಾಡಲು ಎಸ್ಪಿ ಅವರು ಮನವಿ ಮಾಡಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close