ಸುದ್ದಿಲೈವ್/ಶಿವಮೊಗ್ಗ
ಸಿಟಿ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಮುಂದಿನ ಐದು ವರ್ಷಕ್ಕೆ ಚುನಾವಣೆ ನಡೆದಿದ್ದು, ಇಂದೇ ಫಲಿತಾಂಶ ಪ್ರಕಟವಾಗಿದೆ. ಆದರೆ ಒಂದು ನಿರ್ದೇಶಕರ ಸ್ಥಾನಕ್ಕೆ ಪೈಪೋಟಿ ಮುಂದುವರೆದಿದೆ.
ಮರಿಯಪ್ಪ, ಎಂ.ರಾಕೇಶ್, ದುರ್ಗಿಗುಡಿ ಮಹೇಶ್, ಉಮಾಶಂಕರ್ ಉಪಾಧ್ಯಾಯ, ಚಾಲುಕ್ಯ ಸೂರಿ (ಬಿಸಿಎಂ ಬಿ), ಕೆ.ರಂಗನಾಥ್, ಸಿ ಹೊನ್ನಪ್ಪ, ಘನ್ ಶಾಮ, ಎಸ್ ಪಿ ಶೇಷಾದ್ರಿ, ಜಿ. ರಾಜು, ಮಹಿಳಾ ಮೀಸಲಿಂದ ರೇಖಾ ಚಂದ್ರಶೇಖರ್ ಅವರು ಗೆದ್ದಿದ್ದಾರೆ.
ಇವರೆಲ್ಲಾ ಹಳೆಯ ನಿರ್ದೇಶಕರಾಗಿದ್ದು, ಈ ಬಾರಿಯು ಜಯಗಳಿಸಿದ್ದಾರೆ. ಶಿವರಾಜ್ ಗೆ ಪೈಪೋಟಿ ನೀಡಿದ ಜಿ. ಚಂದ್ರಶೇಖರ್ ಮತ ಎಣಿಕೆಯಲ್ಲಿ ನಾಲ್ಕು ಓಟು ಅಂತರದಿಂದ ಗೆಲವು ಸಾಧಿಸಿದ್ದಾರೆ. ಆದರೆ ತಿರಸ್ಕೃತ ಮತಪತ್ರಗಳನ್ನ ಪರಿಷ್ಕರಿಸುವಂತೆ ಶಿವರಾಜ್ ಒತ್ತಾಯಿಸಿದ್ದರಿಂದ, ಚುನಾವಣೆ ಅಧಿಕಾರಿಗಳು ಏನು ಮಾಡಲಿದ್ದಾರೆ ಕಾದು ನೋಡಬೇಕಿದೆ.
ನಾಲ್ಕು ಹೊಸಮುಖಗಳಲ್ಲಿ, ಜನರಲ್ ನಲ್ಲಿ ಎಸ್ ಎನ್ ಮಹೇಶಣ್ಣ, ಮಹಿಳಾ ಮೀಸಲಿನಲ್ಲಿ ಪ್ರೇಮ ಚಂದ್ರಶೇಖರ್, ಎಸ್ ಟಿ ಲೋಕೇಶ್, ಬಿಸಿಎಂ ಎನಿಂದ ಪ್ರಸನ್ನ ಗೆದ್ದಿದ್ದಾರೆ. ಅಧಿಕೃತ ಘೋಷಣೆ ಒಙದೇ ಬಾಕಿ ಇದೆ.