ಬಿಹಾರ್ Vs ಹೈದ್ರಾಬಾದ್, ತಮಿಳುನಾಡು Vs ನಾಗಲ್ಯಾಂಡ್, ಕೇರಳ Vs ಹರಿಯಾಣ ನಡುವಿನ ಪಂದ್ಯಾವಳಿ ಏನಾಯಿತು? ಡಿಟೇಲ್ ಇಲ್ಲಿದೆ



ಸುದ್ದಿಲೈವ್/ಶಿವಮೊಗ್ಗ

ನಗರದ ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡಮಿಯ ಮೈದಾನ ಮತ್ತು ಜೆಎನ್ ಎನ್ ಸಿಇ ಕಾಲೇಜಿನಲ್ಲಿ ನಡೆಯುತ್ತಿರುವ 15 ವರ್ಷದೊಳಗಿನ ಬಾಲಕಿಯರ ಕ್ರಿಕೆಟ್ ಮ್ಯಾಚ್ ರೋಚಕತೆಯಲ್ಲಿ ಅಂತ್ಯಗೊಂಡಿದೆ. 

ಮೈದಾನದ 1 ಅಂಕಣದಲ್ಲಿ ನಡೆದ  ಬಿಹಾರ್ ಮತ್ತು ಹೈದ್ರಾಬಾದ್ ನಡುವಿನ 35 ಓವರ್ ಗಳ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಬಿಹಾರ್ ತಂಡ 88 ರನ್ ಗಳನ್ನ ಕಲೆ ಹಾಕಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಬಿಹಾರ್ ತಂಡ 34.3 ಓವರ್ ಗಳಿಗೆ 88 ರನ್ ಗಳಿಗೆ ಆಲ್ ಔಟ್ ಆದ ಬೆನ್ನಲ್ಲೇ ಬೆನ್ನುಹತ್ತಿದ ಹೈದರಾಬಾದ ತಂಡ 10.3 ಓವರ್ ನಲ್ಲಿ 90 ರನ್ನ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಇದರಿಂದ 9 ವಿಕೆಟ್ ಗಳ ಭರ್ಜರಿ ಜಯಗಳಿಸಿತು‌ 

ಜೆಎನ್ ಸಿಇ ಮೈದಾನದಲ್ಲಿ ನಡೆದ ನಾಗಲ್ಯಾಂಡ್ ಮತ್ತು  ತಮಿಳುನಾಡಿನ ಪಂದ್ಯಾವಳಿಯಲ್ಲಿ ನಾಗಲ್ಯಾಂಡ್ ತಂಡ 11.3 ಓವರ್ ಗಳಿಗೆ 12 ರನ್ ಗಳಿಸಿ ಆಲ್ ಓಟ್ ಆಗಿತ್ತು. ಇದನ್ನ ಬೆನ್ನುಹತ್ತಿದ ತಮಿಳುನಾಡು ತಂಡ ಒಂದೇ ಓವರ್ ನಲ್ಲಿ 13 ರನ್ ಬಾರಿಸಿ 10 ವಿಕೆಟ್ ಗಳ ಅಮೋಘ ಜಯ ಸಾಧಿಸಿತು. 

ಕೆಎಎಸ್ಸಿಎ ಮೈದಾನ-2 ರಲ್ಲಿ ನಡೆದ ಕೇರಳ ಮತ್ತು ಹರಿಯಾಣ ನಡುವಿನ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ 35 ಓವರ್ ಗಳಿಗೆ 158-4 ರನ್ ಗಳಿಸಿತ್ತು. ಇದನ್ನ ಬೆನ್ನುಹತ್ತಿದ ಕೇರಳ ತಂಡ 34.4 ಬಾಲ್ ಗೆ 98 ರನ್ ಗಳಿಸುವಷ್ಟರಲ್ಲಿ ಆಲ್ ಔಟ್ ಆಗಿದೆ. ಇದರಿಂದ ಹರಿಯಾಣ 60 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close