ಸುದ್ದಿಲೈವ್/ಶಿವಮೊಗ್ಗ
ಕೆಎಸ್ ಆರ್ ಟಿಸಿ ಯವರದ್ದು ಜಾಸ್ತಿಯಾಯಿತು ಎಂದು ಹೇಳಿ ಚಾಲಕನ ಕರ್ತವ್ಯಕ್ಕೆ ಅಡ್ಡಿಪಡಿಸಿ ಆತನ ಮೇಲೆ ಟ್ವಿಸ್ಟ್ ಇಮ್ರಾನ್ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕೆಎಸ್ ಆರ್ ಟಿಸಿಯ ಚಾಲಕ ಮತ್ತು ನಿರ್ವಾಹಕ ರಾಗಿರುವ ಶಂಭುಲಿಂಗ ಬಿನ್ ಲೇಟ್ ನಾಗಪ್ಪ, ಭದ್ರಾವತಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈಗ್ಗೆ 01 ವರ್ಷದಿಂದ ಭದ್ರಾವತಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು.
ಮೊನ್ನೆ ನ.27 ರಂದು ರಾತ್ರಿ 9-00 ಗಂಟೆಗೆ ಭದ್ರಾವತಿ ಯಿಂದ ಹೊರಟು ರಾತ್ರಿ 9-45 ಕ್ಕೆ ಶಿವಮೊಗ್ಗ ಸಿಟಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಸ್ ಬಂದಿದೆ. ವಾಪಸ್ಸು ಭದ್ರಾವತಿಗೆ ರಾತ್ರಿ 10-00 ಗಂಟೆಗೆ ಹೊರಡ ಬೇಕಾಗಿದ್ದರಿಂದ, ಎನ್ ಟಿ ರಸ್ತೆಯಲ್ಲಿರುವ ಕ್ಯಾಂಟೀನ್ ನಲ್ಲಿ ಟೀ ಕುಡಿದುಕೊಂಡು ಬರಲು ಹಯೋಚಿಸಿದ ಚಾಲಕ ಶಂಭುಲಿಂಗರವರು ವಾಪಸ್ ಶಿವಮೊಗ್ಗ ನಿಲ್ದಾಣದ ಪ್ರವೇಶದ್ವಾರದ ಬಳಿ ಇರುವ ಆಟೋ ಸ್ಟಾಂಡ್ ಹತ್ತಿರ. ನಡೆದುಕೊಂಡು ಬರುವಗ ಓರ್ವ ವ್ಯಕ್ತಿ ಏಕಾಏಕಿ ದಾರಿಯನ್ನ ಅಡ್ಡಗಟ್ಟಿ ಕೆ ಎಸ್ ಆರ್ ಟಿ ಸಿ ಯವರದ್ದು ಅತಿಯಾಯಿತು ಎಂದು ಚಾಲಕನ ಯೂನಿಫಾರ್ಮ್ ಹಿಡಿದು ಎಳೆದಾಡಿ, ಯೂನಿಪಾರ್ಮ್ ಶರ್ಟ್ ನ ಬಟನ್ ಗಳನ್ನು ಹರಿದು ಹಾಕಿ, ಎಳೆದಾಡಿ ಹೊಟ್ಟೆ ಮತ್ತು ಬೆನ್ನಿಗೆ ಕೈ ಯಿಂದ ಹಲ್ಲೆ ನಡೆಸಿದ್ದಾನೆ.
ಆಗ ಅಲ್ಲಿದ್ದ ಸಾರ್ವಜನಿಕರು ಗಲಾಟೆ ಬಿಡಿಸಿದ್ದು, ನಂತರ ಹಲ್ಲೆ ಮಾಡಿದವನು ಟ್ವಿಸ್ಟ್ ಇಮ್ರಾನ್ ಎಂದು ಚಾಲಕನಿಗೆ ತಿಳಿದು ಬಂದಿದೆ. ಸಮವಸ್ತ್ರ ದಲ್ಲಿ ಕರ್ತವ್ಯದಲ್ಲಿದ್ದ ಚಾಲಕನ ಸಮಯಕ್ಕೆ ಕರ್ತವ್ಯಕ್ಕೆ ಹೋಗದಂತೆ ತಡೆದು, ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಟ್ವಿಸ್ಟ್ ಇಮ್ರಾನ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.