ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾರ್ಯದರ್ಶಿಯಾದ ಮಹಿಳೆಗೆ ದೇವಸ್ಥಾನಕ್ಕೆ ದಂಡ ಕಟ್ಟುವಂತೆ ಒತ್ತಾಯ-ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ

 


ಸುದ್ದಿಲೈವ್/ಆನವಟ್ಟಿ

ಹಾಲು ಉತ್ಪಾದಕರ ಸಂಘಕ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಾರಣ ಗ್ರಾಮದ ದೇವಸ್ಥಾನಕ್ಕೆ ದಂಡಕಟ್ಟ ಕಟ್ಟುವಂತೆ ಬಲವಂತಪಡಿಸಿದ ಗ್ರಾಮಸ್ಥರ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಈ ಘಟನೆ ಸಂಬಂಧ ಸೊರಬ ತಾಲೂಕು ಆನವಟ್ಟಿ ಹೋಬಳಿಯ ಗಂಗವಳ್ಳಿ ಗ್ರಾಮದ ಬಸವನಗೌಡ, ಚೆನ್ನಬಸಪ್ಪ, ನಿಂಗಪ್ಪ ಗೌಡ, ಪಾಲಾಕ್ಷಪ್ಪ, ಸತೀಶ್,  ಬಸವರಾಜ, ಮಂಜನಗೌಡ, ಸುರೇಶ ಬಿನ್ ಚಿನ್ನಪ್ಪ  ಸುರೇಶ ಬಿನ್ ಚನ್ನಬಸಪ್ಪ, ಬಸವನಗೌಡ ಸೇರಿದಂತೆ 30 ಜನರ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಂಗವಳ್ಳಿಯ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಕಾರ್ಯದರ್ಶಿಯಾಗಿ ಆಡಳಿತ ಮಂಡಳಿಯವರು ಮೂರು ತಿಂಗಳ ಹಿಂದೆ  ಸುಮಾರು 25 ವರ್ಷದ ಯುವತಿಯನ್ನ ನೇಮಿಸಿದ್ದರು.‌ ಯಾವಾಗ ನೇಮಕವಾಯಿತೋ ಆವಾಗಿನಿಂದ ಬಸವನಗೌಡ, ಚೆನ್ನಬಸಪ್ಪ ನ ತಂಡದವರು ಗ್ರಾಮದ ಆಂಜನೇಯನಿಗೆ 8 ಲಕ್ಷ ರೂ. ಹಣ ದಂಡಕಟ್ಟುವಂತೆ ದುಂಬಾಲು ಬಿದ್ದಿದ್ದಾರೆ.

ಈ ಸಂಬಂಧ ಯುವತಿ ಗ್ರಾಪಂ ನ ಹಂಚಿಯವರಿಗೆ ದೂರನ್ನ ನೀಡಿದಾಗ ಅಂಗನವಾಡಿಯಲ್ಲಿ ಗ್ರಾಮಸ್ಥರಿಗೆ ಲಂಚದ ಬಗ್ಗೆ ಬುದ್ದಿವಾದವನ್ನೂ ಹೇಳಲಾಗಿತ್ತು. ಅಕ್ಟೋಬರ್ ನಲ್ಲಿ  ಇದೇ ಬಸವನಗೌಡನ ತಂಡ ಮತ್ತೆ ಯುವತಿ ಬಳಿ ಬಂದು ಹಣಕೊಡದಿದ್ದರೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಳಿ ಪೇಪರ್ ಮೇಲೆ ಸಹಿ ಪಡೆದಿರುವುದಾಗಿ ಹಾಗೂ ಹಣ ಕಟ್ಟದಿದ್ದರೆ ಬೆಂಕಿ ಹಚ್ಚಿ ಕೊಲ್ಲುವ ಧಮ್ಕಿಯನ್ನ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ನ.15 ರಂದು ಡೈರಿಯಲ್ಲಿ ಮಹಿಳೆಯರು  ಲೆಕ್ಕ ನೀಡುವ ಸಂದರ್ಭದಲ್ಲಿ ಗ್ರಾಮಸ್ಥ ಬಸವನಗೌಡ ಮತ್ತು ತಂಡ ಹಾಲಿನ‌ ಡೈರಿಯ ಕಟ್ಟೆಯ ಮೇಲೆ ಕುಳಿತು ದೇವಸ್ಥಾನಕ್ಕೆಬಂದು ಕೊಡಿ ಲೆಕ್ಕ ಬೇಡ ಎಂದು ಕೇಕೆ ಹಾಕಿದ್ದಾರೆ. ಅಲ್ಲಿಗೆ ಬರೊಲ್ಲ ಎಂದಿದ್ದಕ್ಕೆ 8 ಲಕ್ಷ ದಂಡ ಕಟ್ಟು ಇಲ್ಲ ಈಗ ಚೀಲ ಮಾಡಿದ 72 ಚೀಲದ ಫುಡ್ ಹಣ ಕಟ್ಟು ಎಂದು ಆಗ್ರಹಿಸಿದ್ದಾರೆ.

ಸಂಜೆಯಾದ ಕಾರಣ ಮಹಿಳೆಯರ ಲೆಕ್ಕ ಪಡೆದು ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆಗೆ ಅಡ್ಡಬಂದು ದಂಡಕಟ್ಟುವಂತೆ ಮುಗಿಬಿದ್ದಿದ್ದಾರೆ. ಇವರಿಂದ ತಪ್ಪಿಸಿಕೊಂಡು ಬಂದ ಯುವತಿ ಮನೆಯಲ್ಲಿ ಆದ ಅವಮಾನವನ್ನ  ಹೇಳಿ ನೇಣಿಗೆ ಪ್ರಯತ್ನಿಸಿದ್ದಾಳೆ. ತಕ್ಷಣವೇ ಯುವತಿಯ ತಾಯಿ ಆಕೆಯನ್ನ ಶಿರಾಳಕೊಪ್ಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close