ಟೀ ಮೈಮೇಲೆ ಬೀಳಿಸಿಕೊಂಡಿದ್ದ ಮಗು ಸಾವು


ಸುದ್ದಿಲೈವ್/ಹೊಸನಗರ

ಪಕ್ಕದ ಮನೆಯಲ್ಲಿಸಾವಾಗಿದ್ದು ಸಾವಿಗೆ ಬಂದವರಿಗೆ ಚಹ ಮಾಡುವ ವೇಳೆ ಮೈಮೇಲೆ ಬಿದ್ದ ಪರಿಣಾಮ ಮಗುವೊಂದು  ಎರಡು ವರ್ಷದ ಮಗು ಕೊನೆ ಉಸಿರು ಎಳೆದಿರುವ ಘಟನೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದಲ್ಲಿ ರಾಜೇಶ್ ಹಾಗು ಅಶ್ವಿನಿ ದಂಪತಿ ಪುತ್ರ ಅಥರ್ವ (2) ಎಂಬು ಮಗುವಿನ ಮೇಲೆ ಅ.24 ರಂದು ಟೀ ಬಿದ್ದಿತ್ತು. ಕಳೆದ ವಾರ ರಾಜೇಶ್ ಅವರ ನೆರೆಮನೆಯಲ್ಲಿ ಸಾವು ಸಂಭವಿಸಿತ್ತು. ಸತ್ತವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಟೀ ರೆಡಿ ಮಾಡಲು  ಅಶ್ವಿನಿ ಮುಂದಾಗಿದ್ದರು. 


ಟೀ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡು ಅಥರ್ವ  ಗಾಯಗೊಂಡಿತ್ತು. ಗಾಯಗೊಂಡ ಮಗುವಿಗೆ ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮಗು ಸಾವುಕಂಡಿದೆ. ಇದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close