ನಿಮ್ಮ ಆಧಾರ್ ನಂಬರ್ ನಲ್ಲಿ ಅಕ್ರಮ ಹಣದ ವರ್ಗಾವಣೆ ಆಗಿದೆ ಸಿಬಿಐಗಳು ನಾವೆಂದು ವಂಚಿಸಿದ ಪ್ರಕರಣ ಇಬ್ಬರು ಉತ್ತರ ಭಾರತೀಯರು ಅರೆಸ್ಟ್



ಸುದ್ದಿಲೈವ್/ಶಿವಮೊಗ್ಗ

ವೀಡಿಯೋ ಕಾಲ್ ಮೂಲಕ ಸಿಬಿಐ ಅಧಿಕಾರಿಗಳು ಎಧು ಹೆದರಿಸಿ ಆಧಾರ್ ಕಾರ್ಡ್ ನ ಸಂಖ್ಯೆಯಿಂದ ದೊಡ್ಡಮೊಟ್ಟದ ಹಣದ ಅಕ್ರಮ ನಡೆದಿದಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಸೀಜ್ ಆಗಿದೆ ಎಂದು ಲಕ್ಷಾಂತರ ರೂ. ವಂಚಿಸಿದ ಘಟನೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ದೂರಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ದಿನಾಂಕಃ 27-09-2024  ರಂದು ಗೋಪಾಳದ ಎಲ್.ಎಸ್ ಆನಂದ್ (72) ರವರಿಗೆ, ಅಪರಿಚಿತ ವ್ಯಕ್ತಿಯು ವೀಡಿಯೋ ಕಾಲ್ ಮಾಡಿ ಸಿ.ಬಿ.ಐ ಅಧಿಕಾರಿ ಎಂದು ಹೇಳಿ  ನಿಮ್ಮ ಆದಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದ್ದು ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.  

ನೀವು ಇದರಿಂದ ಹೊರ ಬರಬೇಕಾದರೇ  ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ತಿಳಿಸಿ ಪಿರ್ಯಾದಿಯವರಿಂದ ಒಟ್ಟು 41 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ  ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮ್ ರಡ್ಡಿ ಮತ್ತು  ಕಾರಿಯಪ್ಪ ಎ, ಜಿ ಮಾರ್ಗದರ್ಶನದಲ್ಲಿ, ಸಿಇಎನ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ಡಿ ಮೇಲ್ವಿಚಾರಣೆಯಲ್ಲಿ, ಪಿಐ  ಮಂಜುನಾಥ ಪಿ.ಐ ರವರ ನೇತೃತ್ವದಲ್ಲಿ ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು  ಶರತ್ ಕುಮಾರ್ ಬಿ.ಎಸ್ ಸಿಪಿಸಿ ರವರುಗಳನ್ನು  ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ. 

ತನಿಖಾ ತಂಡವು ದಿನಾಂಕ: 12-11-2024 ರಂದು ಪ್ರರಕಣದ  ಆರೋಪಿಗಳಾದ 1) ಮೊಹಮ್ಮದ್  ಅಹಮದ್, 45 ವರ್ಷ, ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು 2) ಅಭಿಶೇಕ್ ಕುಮಾರ್ ಶೇಟ್, 27 ವರ್ಷ, ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ   ಇವರನ್ನು ಬಂಧಿಸಿ ಒಟ್ಟು 23,89,751/- ರೂ ಹಣವನ್ನುಅಮಾನತ್ತುಪಡಿಸಿಕೊಳ್ಳಲಾಗಿದೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close