ವಕ್ಫ್ ವಿರುದ್ಧ ಪ್ರತಿಭಟಿಸಿದ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ



ಸುದ್ದಿಲೈವ್/ಶಿವಮೊಗ್ಗ

ವಕ್ಫ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುತ್ತಿಗೆ ಯತ್ನ ನಡೆಸಿತು. ಮತ್ತಿಗೆ ಹಾಕಿದ ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು. 

ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನು ವಶಕ್ಕೆ ಪಡೆಯುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಜಿಲ್ಲಾ ಬಿಜೆಪಿ ಪ್ಲಾಕಾರ್ಡ್ ಹಿಡಿದು  ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಎಂಎಲ್ ಸಿ ಧನಂಜಯ ಸರ್ಜಿ, ಕಾಂಗ್ರೆಸ್ ದಸರಾಹಬ್ಬಕ್ಕೆ ಮೂಡಾ ಹಗರಣದ ಗಿಫ್ಟ್ ನೀಡಿದರೆ,  ದೀಪಾವಳಿಗೆ ವಕ್ಫ್ ಭಾಗ್ಯ ನೀಡಿದೆ.  ಕಾಂಗ್ರೆಸ್ ಅಭಿವೃಧ್ಥಿ ಹೀನ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಇರಬಾರದು. ಸಿದ್ದರಾಮಯ್ಯ ಸ್ವಾಭೀಮಾನವಿದ್ದರೆ ರಾಜೀನಾಮೆ ನೀಡಬೇಕು. ಮೊಹಮ್ನದ ಬಿನ್ ತೊಘಲಕ್ ತರ ಆಡುತ್ತಿರುವ ಜಮೀರು ಸುಮ್ಮನೆ ಇದ್ದರೆ ಒಳ್ಳೆಯದು ಎಂದು ಗುಡುಗಿದರು. 

ಅಬ್ಬರಿಸಿ ಬೊಬ್ಬರಿದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಡುಪಿಯ ಶಿವಪುರ, ಹೊನ್ನಾಳಿಯ ಹನಗವಾಡಿ ಈಗಸಗಲೇ ಇಸ್ಲಾಮ್ ನಗರಗಳಾಗಿವೆ. ಶಿವಮೊಗ್ಗದಲ್ಲಿ ಏನೇನು ಆಗಲಿದೆ ಕಾದು ನೋಡಬೇಕಿದೆ. ಸಿದ್ದರಾಮಯ್ಯ ನಿಮಗೆ ತಾಕತ್ತಿದ್ದರೆ,ಮಾನಮರ್ಯಾದೆ ಇದ್ದರೆ ಜಮೀರ್ ನನ್ನ ಸಂಪುಟದಿಂದ ಕಿತ್ತುಬಿಸಾಕಿ ಎಂದು ಗುಡುಗಿದರು. 

ರಾಜೀನಾಮೆ ನೀಡಿದ ನಂತರ ರಾಜ್ಯ ಸರ್ಕಾರಕ್ಕೆ ಎರಡನೇ ಬೇಡಿಕೆ ಇಟ್ಟ ಮೇಘರಾಜ್ ಎರಡನೇ ಬೇಡಿಕೆಯನ್ನ  1974 ಕಾಯ್ದೆಗೆ ತಿದ್ದುಪಡಿ ತಂದು 2013 ಗೆಜೆಟ್ ನ್ನ ವಾಪಾಸ್ ಪಡೆಯಬೇಕು. ಉಪಚುನಾವಣೆ ಮುಗಿದ ನಂತರ ನೋಟೀಸ್ ಗೆ ಜೀವಬರಲಿದೆ. ಹಾಗಾಗಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿಗೆ ಸಿದ್ದರಾಮಯ್ಯ ಬೆಂಬಲಿಸಬೇಕು ಎಂದರು. 

ನಂತರ ಡಿಸಿ ಕಚೇರಿಗೆ ಮುನ್ನಗ್ಗಲು ಹೊರಟ ಬಿಜೆಪಿ ನಾಯಕರನ್ನ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕರಾದ ಚೆನ್ನಬಸಪ್ಪ, ಡಿ.ಎಸ್ ಅರುಣ್, ಮಾಜಿ ಶಾಸಕ ಅಶೋಕ್, ಸುರೇಖಾ ಮುರಳೀಧರ್, ಅಣ್ಣಪ್ಪ, ಹರಿಕೃಷ್ಣ ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close