ಮನೆ ಮರ್ಯಾದೆ ಹೋಗುತ್ತದೆ ಎಂದು ಹೇಳುತ್ತಿದ್ದ ಮಗನೇ ಸುತ್ತಿಗೆಯಿಂದ ಹೊಡೆದು ತಂದೆಯ ಕೊಲೆ!



ಸುದ್ದಿಲೈವ್/ಶಿಕಾರಿಪುರ

ಮಗಳು ಸಂಬಂಧಿಯೊಬ್ಬನನ್ನ ಪ್ರೀತಿಸಿದ್ದಕ್ಕೆ ಹಿಂಸೆ ನೀಡುತ್ತಿದ್ದ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಶಿಕಾರಿಪುರದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. 

ತಂದೆಯನ್ನ ಒಪ್ಪಿಸಲು ಹೋದ ಮಗನ ನಡುವೆ ಜಗಳ ಉಂಟಾಗಿ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಭಾನುವಾರ ಮಧ್ಯಾಹ್ನ ಊಟ ಮಾಡುವ ವೇಳೆ ತಂದೆ ಮಗನ ನಡುವೆ ಜಗಳ ನಡೆದು ಮಗ ಅಪ್ಪನನ್ನ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. 

ಜಗಳದಲ್ಲಿ ತಂದೆ ಮುಸ್ತಾಫ ಬೇಗ್(42) ಸಾವನ್ನಪ್ಪಿದ್ದು ಮಗ ಶಾಹಿದ್ ಬೇಗ್ (22) ನಿಂದ ಈ ಕೃತ್ಯ ನಡೆದಿದೆ. ಮಗಳ ವಿಚಾರದಲ್ಲಿ ಅಪ್ಪನ ಕಿರುಕುಳ ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ. ಅಪ್ಪ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆಯ ವಿವವರ

ತಂದೆ ಮುಸ್ತಫ ಬೇಗ್ ಕಾಂರ್ಪೆಂಟರ್ ಕೆಲಸ ಮಾಡಿಕೊಂಡಿದ್ದು  23 ವರ್ಷದ ಹಿಂದೆ  ಉಮ್ಮೇ ಸಲ್ಮಾ ಎಂಬುವರೊಂದಿಗೆ ಮುಸ್ತಫಾ ಬೇಗ್ ಮದುವೆಯಾಗಿದ್ದು ಶಾಹೀದ್ ಬೇಗ್ ಮತ್ತು ಮತ್ತೊರ್ವ ಮಗಳಿದ್ದು ಇಬ್ಬರು ಮಕ್ಕಳೊಂದಿಗೆ ಚೊಕ್ಕ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. 

ಮಗಳು ಸಂಬಂಧಿಕರ ಮಗನೊಂದಿಗೆ ಪ್ರೀತಿಸುತ್ತಿದ್ದ ವಿಷಯ ಮುಸ್ತಫಾಗೆ ಇಷ್ಟಿರಲಿಲ್ಲ. ಮಗಳ ಪ್ರೀತಿಯ ವಿಷಯ ಗೊತ್ತಾಗುತ್ತಿದ್ದಂತೆ ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹೆಂಡತಿ ಮತ್ತು ಮಗಳ ಶೀಲದ ಮೇಲೆ ಅನುಮಾನ ಪಡುತ್ತಿದ್ದ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ತಂದೆಯೇ ಮಗಳನ್ನ ಹತ್ತಿರಕ್ಕೆ ಕರೆಯುತ್ತಿದ್ದ ಎಂಬ ವಿಷಯವನ್ನ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದ್ದು, ಮನೆಯ ಮರ್ಯಾದೆ ಹೋದರೆ ಮಗಳನ್ನ ಬೇರೆಯಾರೂ ಮದುವೆಯಾಗೊಲ್ಲ ಎಂದು ಮಗ ಶಾಹೀದ್ ಅಪ್ಪನನ್ನ ಜಗಳ ತೆಗೆದಾಗಲೆಲ್ಲ ಸಮಧಾನ ಪಡಿಸುತ್ತಿದ್ದನು. 

ಆದರೆ ಮುಸ್ತಫಾನ ಹಿಂಸೆ ಅತಯಾದಾಗ ಮಗಳು ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು, ಅವಳನ್ನ ತಾಯಿ ಹುಡುಕಿ ಬೆಂಗಳೂರಿನಿಂದ ವಾಪಾಸ್ ಕರೆದುಕೊಂಡು ಬಂದಿದ್ದರು. ಮೊನ್ನೆ ಭಾನುವಾರ ಮಗಳಿಗೆ ನೀನು ಎಷ್ಟು ಹೇಳಿದರೂ ಒಪ್ಪುತ್ತಿಲ್ಲ ಎಂದು ಮಗಳನ್ನ ಹಿಡಿದು ಎಳೆದಿದ್ದು ತಾಯಿಯೇ ಮಗಳನ್ನ ರಕ್ಷಿಸಿ ಸಹೋದರಿ ಮನೆಗೆ ಕರೆದುಕೊಂಡು ಹೋಗಿದ್ದರು. 

ನಂತರ ತಾಯಿ ಮಗನಿಗೆ ಕರೆಮಾಡಿ ತಂದೆ ಎಷ್ಟು ಹೇಳಿದರೂ ಒಪ್ಪುತ್ತಿಲ್ಲ. ಪೊಲೀಸ್ ದೂರು ಕೊಡೋಣ ಎಂದು ತಿಳಿಸಿದ್ದಾಳೆ. ದೂರು ಕೊಟ್ಟರೆ ಮರ್ಯಾದೆ ಹೋಗುತ್ತದೆ. ನಾನು ಅಪ್ಪನ ಬಳಿ ಮಾತನಾಡುತ್ತೇನೆಂದು ಭರವಸೆ ನೀಡಿ ಮದ್ಯಾಹ್ನದ ಊಟದ ವೇಳೆಗೆ ಆಸ್ರಯ ಬಡಾವಣೆಯಲ್ಲಿರುವ ಮನೆಗೆ ಹೋಗಿ ಅಪ್ಪನೊಂದಿಗೆ ಮಾತನಾಡುತ್ತಾನೆ. 

ಮಾತನಾಡಿದರೂ ಒಪ್ಪದ ಹಿನ್ನೆಲೆಯಲ್ಲಿ ಮಗನನ್ನೆ ತಂದೆ ಹೊಡೆಯಲು ಬಂದಿದ್ದು ಮಗ ಸುತ್ತಿಗೆಯಿಂದ ತಙದೆಯನ್ನ ಹೊಡೆದು ಕೊಲೆ ಮಾಡಿರುವುದಾಗಿ ಎಫ್ಐಆರ್ ನಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close