ಕದ್ದಿದ್ದ ಹಿಮಾಲಯನ್, ಅಪಾಚೆ, ರಾಯಲ್ ಎನ್ ಫಿಲ್ಡ್ ವಾಹನಗಳನ್ನ ಪತ್ತೆ ಮಾಡಿದ್ದು ಹೇಗೆ?



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಕೇಜ್ ಹಿಂಭಾಗದಲ್ಲಿ ವಾಹನಗಳನ್ನ ಕದ್ದು ನಿಲ್ಲಿಸಿಕೊಂಡಿದ್ದ ವ್ಯಕ್ತಿಯನ್ನ ತಪಾಸಣೆಗೆ ಒಳಪಡಿಸಿದಾಗ ಕದ್ದ ಏಳು ಬೈಕುಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಮೂವರನ್ನ ಬಂಧಿಸಿದ್ದು 9,40,000 ರೂ. ಮೌಲ್ಯದ ಹಣದ ಬೈಕ್ ನ್ನ ವಶಕ್ಕೆ ಪಡೆಯಲಾಗಿದೆ. 

04  ಪಲ್ಸರ್, 01 ಅಪಾಚೆ, 01 ಸ್ಪ್ಲೆಂಡರ್ ಮತ್ತು 01 ರಾಯಲ್ ಎನ್ ಫೀಲ್ಡ್  ಹಿಮಾಲಯನ್ ದ್ವಿಚಕ್ರ ವಾಹನಗಳನ್ನ ಕದ್ದಿರುವ ಬಗ್ಗೆ ಪೊಲೀಸರಿಗೆ ತಪಾಸಣೆ ವೇಳೆಯಲ್ಲಿ ತಿಳಿದು ಬಂದಿದೆ. 

ದಿನಾಂಕಃ 22-11-2024 ರಂದು ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳು ಪುರ್ಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ ಬೈಪಾಸ್ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ, ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಎರಡು ಬೈಕ್ ಗಳನ್ನು ನಿಲ್ಲಿಸಿಕೊಂಡು ನಿಂತಿದ್ದರು.  


ಬೈಕ್ ಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪಿಐ ಸತ್ಯನಾರಾಯಣರ ಮುಂದೆ ಹಾಜರ್ ಪಡಿಸಲಾಗಿದ್ದು ಪಿಐ ಅವರ ಖಡಕ್ ವಿಚಾರಣೆ ವೇಳೆ  ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು 1) ಇಮ್ರಾನ್ @ ಇಮ್ಮು, 2) ಮದನ್ ಕುಮಾರ್ @ ಗುಂಡಾ ಮತ್ತು 3)  ಹರೀಶ ಎನ್  ಎಂದು ತಿಳಿದು ಬಂದಿದೆ.  

ಎರಡೂ ಬೈಕ್ ಗಳನ್ನು ಶಿಕಾರಿಪುರದಲ್ಲಿ ಕಳ್ಳತನ ಮಾಡಿಕೊಂಡು ತಂದಿರುವುದು ಮತ್ತು ಇದೇ ರೀತಿ ಇನ್ನೂ ಹೆಚ್ಚಿನ ಬೈಕ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಆರೋಪಿತರಿಂದ ಕಳ್ಳತನ ಮಾಡಿದ ಬೈಕ್ ಗಳನ್ನು ವಶಪಡಿಸಿಕೊಳ್ಳುವ ಸಂಬಂಧ  ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮಾರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು  ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  ಸುರೇಶ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಬಿ  ಉಪವಿಭಾಗರವರ ರವರ ಮೇಲ್ವಿಚಾರಣೆಯಲ್ಲಿ,  ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ  ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳನ್ನೊಳಗೊಂಡ  ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು ಆರೋಪಿತರಾದ 1) ಇಮ್ರಾನ್ @ ಇಮ್ಮು, 26 ವರ್ಷ, ಮೆಕಾನಿಕ್ ಕೆಲಸ, ಸೀತಾರಾಂಪುರ ಭದ್ರಾವತಿ,  2) ಮದನ್ ಕುಮಾರ್ @ ಗುಂಡಾ, 18 ವರ್ಷ, ವುಡ್ ವರ್ಕ್, ಸೀತಾರಾಂಪುರ ಭದ್ರಾವತಿ ಮತ್ತು 3)  ಹರೀಶ ಎನ್  18 ವರ್ಷ,  ಗಾರೆ ಕೆಲಸ, ಸೀತಾರಾಂಪುರ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯ – 03, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ - 02, ತುಂಗಾನಗರ ಪೊಲೀಸ್ ಠಾಣೆಯ – 01 ಮತ್ತು ಜಯನಗರ ಪೊಲೀಸ್ ಠಾಣೆಯ – 01 ಪ್ರಕರಣ ಸೇರಿದಂತೆ ಒಟ್ಟು 07  ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 9,40,000/-  ರೂ ಗಳ 07 ದ್ವಿ ಚಕ್ರ ವಾಹನ ( 04  ಪಲ್ಸರ್, 01 ಅಪಾಚೆ, 01 ಸ್ಪ್ಲೆಂಡರ್ ಮತ್ತು 01 ರಾಯಲ್ ಎನ್ ಫೀಲ್ಡ್  ಹಿಮಾಲಯನ್) ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close