ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಸಾಗರದ ಅಭಿನಂದನ್ ಕೋಳಿವಾಡ



ಸುದ್ದಿಲೈವ್/ಸಾಗರ 

ಇಲ್ಲಿನ ಸೇವಾಸಾಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಅಭಿನಂದನ್ ಕೋಳಿವಾಡ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡುವ ಮೂಲಕ ದಕ್ಷಿಣ ಭಾರತ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಅಭಿನಂದನ್ ಕೋಳಿವಾಡ ಅವರು ರೋವರ್ ಎಂಬ ವೈಜ್ಞಾನಿಕ ಆವಿಷ್ಕಾರವನ್ನು ಸಿದ್ದಪಡಿಸಿದ್ದಾರೆ. ರೋವರ್ ಮೂಲಕ ಆಕಾಶದ ತಾಪಮಾನ, ಉಷ್ಣತೆ, ವಾತಾವರಣದ ಸ್ಥಿತಿಗತಿ ಇನ್ನಿತರೆ ಪತ್ತೆಹಚ್ಚಲು ಸಾಧ್ಯವಿದೆ. ರೋವರ್ ಎದುರು ಇತರೆ ವಸ್ತು ಬಂದರೆ ಅದು ತನ್ನ ದಿಕ್ಕು ತಪ್ಪಿಸಿಕೊಂಡು ಸ್ವಯಂಪ್ರೇರಿತವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ವೈಜ್ಞಾನಿಕವಾಗಿ ಅತ್ಯಂತ ವಿಶೇಷವಾಗಿ ರೋವರ್ ಸಿದ್ದಪಡಿಸುವ ಮೂಲಕ ಅಭಿನಂದನ್ ಉತ್ತಮ ಸಾಧನೆ ಮಾಡಿದ್ದಾರೆ. ಅಭಿನಂದನ್ ಜನವರಿಯಲ್ಲಿ ಪಾಂಡಿಚೆರಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ರಮೇಶ್ ಕೋಳಿವಾಡ ಮತ್ತು ಅನ್ನಪೂರ್ಣ ಅವರ ಪುತ್ರ ಅಭಿನಂದನ್ ಅವರಿಗೆ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕ ಚರಣ್ ಮಾರ್ಗದರ್ಶನ ಮಾಡಿದ್ದರು. ಅಭಿನಂದನ್‌ಗೆ ಮುಖ್ಯ ಶಿಕ್ಷಕಿ ಪೂರ್ಣಿಮಾ, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close