ಸುದ್ದಿಲೈವ್/ಶಿವಮೊಗ್ಗ
ಪುರುಷರು ಕೂಡ ವಿಶಿಷ್ಟ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕಾಗಿ ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸಬೇಕು ಎಂದು ಅಂತರರಾಷ್ಟಿçಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಕುಮಾರ್ ಹೊನ್ನೆಗುಂಡಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ವಿಷಯದಲ್ಲಿ ನಮ್ಮ ಸಮಾಜ ಹೆಚ್ಚು ಒತ್ತನ್ನು ಕೊಡುತ್ತದೆ. ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಆದರೆ, ಪುರುಷರು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಪಡುವ ಹಿಂಸೆ ಅನೇಕ ಬಾರಿ ದಾಖಲಾಗುವುದೇ ಇಲ್ಲ. ಪುರುಷ ಸಂಬಂಧಿತ ಚರ್ಚೆಗಳು ಗಮನಕ್ಕೆ ಬರುವುದಿಲ್ಲ. ಅವರು ಕೂಡ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯನ್ನು ಗಮನಹರಿಸುತ್ತಿದ್ದು, ಇದಕ್ಕಾಗಿ ರಾಷ್ಟಿçಯ ಪುರುಷರ ಆಯೋಗವನ್ನು ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದರು.
ಪುರುಷರನ್ನು ಶೋಷಣೆ ಮತ್ತು ಹಿಂಸೆಯಿಂದ ರಕ್ಷಿಸಲು ಅತ್ಯಾಚಾರ ಸೇರಿದಂತೆ ಅನೇಕ ಘಟನೆಗಳಲ್ಲಿ ಪುರುಷರ ಮೇಲೆ ತಪ್ಪನ್ನು ಹೊರಿಸುವುದು ಸ್ವಾಭಾವಿಕವಾಗಿದೆ. ಅಂತಹವರಿಗೆ ನ್ಯಾಯ ಒದಗಿಸುವುದು ಮತ್ತು ಪುರುಷರ ಹಾಗೂ ಅವರ ಕುಟುಂಬದ ಮೂಲಭೂತ ಹಕ್ಕುಗಳನ್ನು ಕಾಪಾಡುವುದು, ಸುಳ್ಳು ದೂರುಗಳನ್ನು ಪರಿಶೀಲಿಸುವುದು, ಆಕಸ್ಮಾತ್ ಮಹಿಳೆಯರು ಕೊಟ್ಟ ದೂರು ಸುಳ್ಳೆಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವುದು, ಮಹಿಳೆಯರಷ್ಟೇ ಸಮಾನ ನ್ಯಾಯವನ್ನು ಪುರುಷರಿಗೂ ಕೊಡುವುದು, ಆಯೋಗ ರಚನೆಯ ಉದ್ದೇಶ ಎಂದರು.
ಸಂಸ್ಥೆಯ ಸ್ಥಾಪಕ ಮತ್ತು ರಾಷ್ಟಿçಯ ನಿರ್ದೇಶಕ ಅಬ್ದುಲ್ ರಜಾಕ್ ಮಾತನಾಡಿ, ಪುರುಷರಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರು ಕೂಡ ಇದರಿಂದ ನ್ಯಾಯ ಪಡೆಯಬಹುದಾಗಿದೆ. ಮತ್ತು ಪುರುಷರು ಕೂಡ ತಮ್ಮ ಕಿರುಕುಳ ದೂರುಗಳನ್ನು ದಾಖಲಿಸಲು ಅನುಕೂಲವಾಗುತ್ತದೆ. ಈ ಎಲ್ಲಾ ಹಿನ್ನಲೆಯಲ್ಲಿ ರಾಷ್ಟಿçಯ ಪುರುಷರ ಆಯೋಗವನ್ನು ರಚನೆ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಷ್ಟಿçಯ ಪ್ರಧಾನ ಕಾರ್ಯದರ್ಶಿ ಅಫ್ತಾಬ್ ಫರ್ವೀಜ್, ರಾಜ್ಯಾಧ್ಯಕ್ಷ ನವೀನ್ ಎಸ್., ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಧಿಕ್ ಜೆ., ನಿರ್ದೇಶಕ ಮೊಹಮ್ಮದ್ ಅಯಾನ್ ಮತ್ತಿತರರು ಇದ್ದರು