ಸಿ.ಎಸ್ ಷಡಾಕ್ಷರಿ ಮನೆಯ ಮೇಲೆ ದಾಳಿಗೆ ಸಚಿವರ ಸೂಚನೆ


ಸುದ್ದಿಲೈವ್/ಶಿವಮೊಗ್ಗ

ಇಂದು  ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೀಲನಾ ಸಭೆ ನಡೆದಿದೆ. ಸಭೆಯಲ್ಲಿ ಪ್ರಮುಖವಾಗಿ ಶಾಹೀ ಗಾರ್ಮೆಂಟ್ಸ್, ಸಿಎಸ್ ಷಡಾಕ್ಷರಿ ಅವರ ಮನೆ ದಾಳಿ, ಅಬ್ಬಲಗೆರೆ ಕೆರೆಯ ಅಕ್ರಮ ಮಣ್ಣು ತೆಗೆತ ಬಗ್ಗೆ ಈ ಹಿಂದೆ ದೂರಾಗಿರುವ ಬಗ್ಗೆ ಏನು ಕ್ರಮ ಕೈಂಡಿದ್ದೀರಿ ಎಂದು ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಶಾಹೀ ಗಾರ್ಮೆಂಟ್ಸ್ ಪರಿಸರ ಹಾನಿ ಮಾಡಿ ಜಿಲ್ಲಾಡಳಿತದ ಸೂಚನೆಯನ್ನ ನಿರ್ಲಕ್ಷಿಸುತ್ತಿದ್ದಾರೆ. ಅವರೇನು ಮೇಲಿಂದ ಇಳಿದು ಬಂದಿದ್ದಾರಾ? 250 ಎಕರೆ ಜಮೀನು ಹೇಗೆ ಗಾರ್ಮೆಂಟ್ಸ್ ಗೆ ಹೋಯಿತು? ಅವರಿಗೆ ಬೇಕಾದ 10 ಎಕರೆ ಜಮೀನು ಸಾಕಾಗಿದ್ದರೂ ಅವರಿಗೆ ಹೆಚ್ಚಳ ಜಮೀನು ಹೇಗೆ ಹೋಯಿತು ಎಂದು ಗರಂ ಆದರು. 

ಸೀಜ್ ಮಾಡಿ, ಸೀಜ್ ಮಾಡಿ ಎಂದರೆ ಖಡಕ್ ತಪಾಸಣೆ ಮಾಡಿ ಎಂದು,  ಅಲ್ಲಿ ಬೇರೆ 15 ಸಾವಿರ ಜನ ಕೆಲಸ ಮಾಡುವುದರಿಂದ ಕಾರ್ಖಾನೆ ಬಂದ್ ಮಾಡಬೇಡಿ ಸೀರಿಯಸ್ ಆಗಿ ಕ್ರಮ ಜರುಗಿಸಿ. ರೈತರ ಜಮೀನನ್ನ ಒತ್ತುವರಿ ಮಾಡಿದರೆ ಸುಮ್ಮನಿರ್ತೀರಾ ಎಂದು ಗರಂ ಆದರು. ಅವರು ಮಾಡುತ್ತಿರುವ ಪರಿಸಹ ಹಾನಿ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. 

ಉದ್ಯೋಗ ಕೊಟ್ಟಿದ್ದಾರೆ. ಹಾಗಂತ ಕ್ರಮ ಕೈಗೊಳ್ಳದೆ ಇರ್ತೀರಾ? ಎಂದು ಸಚಿವರು ಗರಂ ಆದರು. ಇದಕ್ಕೆ ಪರಿಸರ ಇಲಾಖೆ ಅಧಿಕಾರಿ ಮಾತನಾಡಿ, ಕಾರ್ಖಾನೆಯ ಪಕ್ಕದಲ್ಲಿರುವ ಕೆರೆ ಕಲೂಷಿತಗೊಳ್ಳದಂತೆ ಎಸ್ ಇಟಿಪಿ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. 

ಇದಕ್ಕೂ ಗರಂ ಆದ ಸಚಿವರು ವರದಿ ಬಂದಿದೆ. ಇಲಾಖೆ ಕಣ್ಣು ಮುಚ್ಚಿಕೊಂಡಿದೆಯಾ? ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಾನು ಅಧಿಕಾರಿಯಾಗಿ ಬಂದು  6 ತಿಂಗಳಾಗಿದೆ ಎಂದು ಸಮ್ಜಾಯಿಷಿ ಕೊಡಲು ಮುಂದಾದರು. ಇದಕ್ಕೂ ಗರಂ ಆದ ಸಚಿವರು  ನಾನು ಸಚಿವನಾಗಿ ಬಂದು ಇಂದಿಗೆ, ಒಂದುವರೆ ವರ್ಷ ಆಗಿದೆ ನಾನು ಸಂಬಂಧವಿಲ್ಲವೆಂದು ಕೈತೊಳೆದುಕೊಳ್ಳಬಹುದಾ? ಮೊದಲು ಕ್ರಮ ಜರುಗಿಸಿ ಎಂದು ಗರಂ ಅದರು. 

ಅಬ್ಬಲಗೆರೆ ಕೆರೆಯ ಮಣ್ಣನ್ನ ಹಿಂದಿನ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ‌ ಷಡಾಕ್ಷರಿಯವರು  ಆಗಿದ್ದಾರೆ ಎಂದ ಮಾತ್ರಕ್ಕೆ  ಕ್ರಮ ಕೈಗೊಳ್ಳದಿದ್ದರೆ ಸಿಎಂ ಗಮನಿಸುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕು. ಅವರು ವಾಸವಿರುವ ಮನೆ ಪಿಡಬ್ಲೂಡಿಯಿಂದ ಕೊಡಲಾಗಿದೆ. ಅವರು  ಜೆಡ್ ಪ್ಲಸ್ ಮಾದರಿಯಲ್ಲಿ  ಕ್ವಾಟ್ರಸ್ ಮನೆಯನ್ನ  ಕಟ್ಟಿಸಿಕೊಂಡಿದ್ದಾರೆ ಬೇರೆಯವರಿಗೂ ಹಾಗೆ ಅವಕಾಶ ಕೊಡ್ತೀರಾ ಎಂದ ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಮನೆ ನಿರ್ಮಾಣಕ್ಕೆ ಭ್ರಷ್ಠಾಚಾರದ ಹಣ ಬಳಕೆ ಆಗಿದೆ ಎಂಬ ಮಾಹಿತಿ ನನಗೆ ಇದೆ. ಪಿಡಬ್ಲೂಡಿ ಮನೆಗೆ 17 ಲಕ್ಷ ಖರ್ಚಾಗಿದೆ ಎಂದು ಪಿಡಬ್ಲೂಡಿ ತಿಳಿಸಿದೆ. ಆದರೆ ಎರಡು ಕೋಟಿಯಲ್ಲಿ ಮನೆ ಕಟ್ಟಲಾಗಿದೆ. ಮನೆ ರೈಡ್ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಎಸ್ಪಿ ಕಚೇರಿ ಹಿಂಭಾಗದಲ್ಲಿ  ಹೊಸ ಜಿಲ್ಲಾಡಳಿತ ಭವನ ಆರಂಭಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು. ಹೊಸ ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಇಲಾಖೆ ಅಲ್ಲೇ ಬರಲಿದೆ. ಅದಕ್ಕೆ ತಗಲುವ ವೆಚ್ಚ ತಿಳಿಸಲು ಡಿಸಿಗೆ ಸಚಿವರು ತಿಳಿಸಿದರು. ಪಿಡಬ್ಲೂಡಿ ಯಿಂದ ಅರ್ಕಿಟೆಕ್ಟ್ ಮುಂದಿನ ವಾರ ಬರಲಿದ್ದಾರೆ. 10 ದಿನಗಳಲ್ಲಿ ಅನುದಾನ ಎಷ್ಟು ಬೇಕು ಎಂಬುದು ತಿಳಿಯಲಿದೆ ಎಂದು ಡಿಸಿ ತಿಳಿಸಿದರು. 

ಸೋಗಾನೆಯಲ್ಲಿ ಫುಡ್ ಪಾರ್ಕ್ ನಿರ್ಮಾಣ ವಿಚಾರದಲ್ಲಿ ಅಧಿಕಾರಿಗಳು ಮಾತನಾಡಿ, 47½ ಲಕ್ಷ ರೂ ಅನುದಾನ ದೊರೆತಿದೆ.  ನಬಾರ್ಡ್ ನಿಂದ ಡಿಪಿಆರ್ ಮಾಡಲಿದ್ದಾರೆ. ಯಾವಾಗ ಬೇಕಾದರೂ ಆಗಲಿದ್ದಾರೆ. ಅಗ್ರಿಕಲ್ಚರ್ ಇಲಾಖೆಯಲ್ಲಿ ನಿರ್ಮಾಣವಾಗಲಿದೆ. ಫುಟ್ ಪಾರ್ಕ್ ಗೆ ಸಿಎಂ ಅನೌನ್ಸ್ ಮಾಡಿದ ಮೇಲೆ ಯಾಕೆ ತಡವೆಂದು ಸಚಿವರು ಕಳವಳ ವ್ಯಕ್ತಪಡಿಸಿದರು. 

ಇದಕ್ಕೆ ಹಣ ಇಟ್ಟಿರಲಿಲ್ಲ. ಇಲಾಖೆಯಿಂದ ಹಣ ಬಿಡುಗಡೆ ಮಾಡಿಕೊಳ್ಳಲು ನಿಮ್ಮ ಜವಬ್ದಾರಿ ಇಲ್ವಾ ಎಂದು ಅಧಿಕಾರಿಗಳನ್ನ  ಕ್ಲಾಸ್ ತೆಗೆದುಕೊಂಡ ಸಚಿವರು,  ತಡಮಾಡಬಾಡಿ ಹಣ ಕರ್ಚಾಗದಿದ್ದರೆ ಮತ್ತೆ ಹಣ ಬಿಡುಗಡೆ ಆಗೊಲ್ಲವೆಂದರು.

ನೈಟ್ ಲ್ಯಾಂಡಿಂಗ್ ಆರಂಭ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಇಲ್ಲವಾದ ಕಾರಣ ವಿಮಾನಗಳ ಹಾರಾಟಕ್ಕೆ ತೊಂದರೆ ಉಂಟಾಗಿತ್ತು. ಇದಕ್ಕೆ ಇಂದು ನಡೆದ ಸಭೆಯಲ್ಲಿ ಜನವರಿಯಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭವಾಗಲಿದೆ. ಇದಕ್ಕೆ ಹಣ ಇಡಲಾಗುತ್ತಿದೆ. 660 ಕೋಟಿ ರೂ. ಹಣ ಕುಡಿಯುವ ನೀರು ಯೋಜಬೆಯನ್ನ ಶಿರಾಳಕೊಪ್ಪ, ಆನವಟ್ಟಿ ಮತ್ತು ಸೊರಬಕ್ಕೆ ಹಣ ಇಡಲಾಗುತ್ತಿದೆ. ಚಂದ್ರಗುತ್ತಿ ದೇಗುಲದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಕ್ತಾ ಇದೆ. ಶೀಘ್ರದಲ್ಲಿಯೇ ಅಭಿವೃದ್ಧಿ ಪಡಿಸಲಾಗುವುದು ಎಂದರು. 

ಅಲ್ಲಮಪ್ರಭು ಹುಟ್ಟಿದ ಸ್ಥಳ ಮತ್ತು ಪಾರ್ಕ್ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲು ಸೂಚನೆ

ಶಿವಮೊಗ್ಗದ ಅಲ್ಲಮ ಪ್ರಭು ಪ್ರೀಡಂ ಪಾರ್ಕ್  ಅಭಿವೃದ್ಧಿಗೆ ಮತ್ತು ಬಳ್ಳಿಗಾವಿಯಲ್ಲಿ ಅಲ್ಲಮಪ್ರಭು ಹುಟ್ಟಿದ ಸ್ಥಳದ ಅಭಿವೃದ್ಧಿಗೆ ಹಣದ ಅನುದಾನಕ್ಕೆ ಜನವರಿ ಒಳಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಲಾಗಿದೆ. ಫ್ರೀಡಂ‌ಪಾರ್ಕ್ ಗೆ 5 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close