ಸುದ್ದಿಲೈವ್/ತೀರ್ಥಹಳ್ಳಿ
ಸಾಮಾಜಿ ಜಾಲತಾಣದಲ್ಲಿ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷರ ಪೋಸ್ಟ್ ಗೆ ಅವ್ಯಾಚ್ಯ ಪದಗಳನ್ನ ಬಳಸಿ ಕಾಮೆಂಟ್ ಮಾಡಿರುವ ವಿರುದ್ಧ ತೀರ್ಥಹಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾರ್ವಜನಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ವಿನಾಯಕ ಎಂಬುವರು ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರದ ರೈಲು ವ್ಯವಸ್ಥೆಯ ಬಗ್ಗೆ ಅದಾನಿ ಎಂಬ ಹೆಸರನ್ನು ನಮೂದಿಸಿ ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಗೆ ಅನಂತ್ ಮಾಲೋಡ್ ಎಂಬ ವ್ಯಕ್ತಿಯು ಈ ಮೊದಲು ಇಟಲಿಗೆ ಮಾರಿದ್ರಲ್ಲ ಇಟಲಿಯಿಂದ ವಾಪಾಸ್ ಬರಲ್ಲ ಎಂದು ಫೇಸ್ ಬುಕ್ ನಲ್ಲಿ ಅವ್ಯಾಚ್ಯ ಶಬ್ದಗಳನ್ನ ಬಳಸಿ ಪ್ರತಿಕ್ರಿಯಿಸಿದ್ದರು. ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಪರೋಕ್ಷವಾಗಿ ವಿನಾಯಕರ ತಂದೆ ತಾಯಿಯರಿಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ಬೈದು ನಿಂದಿಸಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.