ಸುದ್ದಿಲೈವ್/ಶಿವಮೊಗ್ಗ
ಹಾಡೋನಹಳ್ಳಿಯ ನಿವಾಸಿ ಗಂಗಾಧರ್ ಕಡೆ ಮನೆಯ ಮುಂದಿನ ಗೋಡೌನ್ ನಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಅಡಿಕೆಯನ್ನು ನ.05 ರಂದು ರಾತ್ರಿ ಕಳ್ಳತನ ಮಾಡಿದ್ದ ಪ್ರಕರಣವನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಮಧಿಸಿದ್ದಾರೆ.
ಅಂದಾಜು ಮೌಲ್ಯ 1,50,000/- ರೂಗಳ 04 ಕ್ವಿಂಟಾಲ್ ತೂಕದ ಒಣ ಅಡಿಕೆಯನ್ನು ಕಳ್ಳತನವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮ್ ರಡ್ಡಿ ಮತ್ತು ಕಾರಿಯಪ್ಪ ಎ, ಜಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ಎಂ, ಮೇಲ್ವಿಚಾರಣೆಯಲ್ಲಿ, ಠಾಣ ಪಿಐ ಸತ್ಯನಾರಾಯಣ ಪಿ.ಐ, ನೇತೃತ್ವದ, ಪಿಎಸ್ಐ ಸ್ವಪ್ನ, ಎಂ ಜಿ ವಗ್ಗಣ್ಣನವರ್, ಹಾಗೂ ಸಿಬ್ಬಂಧಿಗಳಾದ ಹೆಚ್. ಸಿ ವೆಂಕಟೇಶ್, ಪಿಸಿ ಗಣೇಶ್, ಕಾಶಿನಾಥ್, ಶ್ರೀಕಾಂತ್ ಮತ್ತು ಕವನರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತು.
ತನಿಖಾ ತಂಡವು ನ.16 ರಂದು ಪ್ರರಕಣದ ಆರೋಪಿಗಳಾದ 1) ಅನಿಲ್ ಆರ್ @ ಜಾಕ್, 26 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ, 2) ಲೋಕೇಶ್ @ ವಿಜಯ್, 27 ವರ್ಷ, ವಿಠಲಾಪುರ ಭದ್ರಾವತಿ, @3) ಮನೋಜ @ ಮುರಗೋಡು @ ಗರುಡ, 20 ವರ್ಷ, ಬಸವನಗುಡಿ ಶಿವಮೊಗ್ಗ, 4) ನವೀನ್ ಪಿ @ ನುಗ್ಗೆ, 23 ವರ್ಷ, ಹಾಡೋನಹಳ್ಳಿ ಶಿವಮೊಗ್ಗ ಮತ್ತು 5) ಚಂದು ಎಸ್ @ ಸುಣ್ಣ @ ಡ್ಯೂಕ್ ಚಂದು, 20 ವರ್ಷ, ಮಡಿಕೆ ಚೀಲೂರು ಶಿವಮೊಗ್ಗ ರವರುಗಳನ್ನು ಬಂಧಿಸಲಾಗಿದೆ.
ಆರೋಪಿತರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2024ನೇ ಸಾಲಿನಲ್ಲಿ ವರದಿಯಾಗಿದ್ದ ಒಟ್ಟು 03 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ, ಅಂದಾಜು ಮೌಲ್ಯ 7,35,000/- ರೂಗಳ, 15 ಕ್ವಿಂಟಾಲ್ 08 ಕೆಜಿ ತೂಕದ ಒಣ ಅಡಿಕೆ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 1,40,000 /- ರೂಗಳ 2 ದ್ವಿಚಕ್ರವಾಹನಗಳು ಹಾಗೂ ಅಂದಾಜು ಮೌಲ್ಯ 1,50,000/- ರೂಗಳ 1 ಪ್ಯಾಸೇಜರ್ ಆಟೋ ಸೇರಿ ಒಟ್ಟು 10,25,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.