ಜಮೀನಿಗಾಗಿ ಹಳ್ಳಿಗೆರೆ ಗ್ರಾಮದಲ್ಲಿ ಪ್ರತಿಭಟನೆ



ಸುದ್ದಿಲೈವ್/ಭದ್ರಾವತಿ

ತಾಲೂಕಿನ ಹಳ್ಳಿಗೆರೆ ಗ್ರಾಮದಲ್ಲಿ ಪ್ರತಿಭಟನೆ ದಲಿತ ಸಂಘಟನೆಗಳೊಂದಿಗೆ ನಡೆಸಲಾಗುತ್ತಿದೆ. ಮೂಲ ಜಮೀನುದಾರರಿಗೆ ಜಮೀನು ಬಿಡಿಸಿಕೊಡುವಂತೆ ಕೋರ್ಟ್ ಸೂಚನೆ ನೀಡಿತ್ತು,  

ಇಂದು ತಹಶೀಲ್ದಾರ್ ಗೈರಾದ ಹಿನ್ನೆಲೆ ಪ್ರತಿಭಟನೆ ನಡೆಸಲಾಗಿದೆ.ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.‌

ಹಳ್ಳಿಕೆರೆ ಗ್ರಾಮದ ಸ.ನಂ 14/6 ರಲ್ಲಿ 04-00 ಎಕರೆ ಜಮೀನು  ಸೋಮ್ಲಾನಾಯ್ಕ ಬಿನ್ ಭಜನಾನಾಯ್ಕ ಇವರಿಗೆ ಆರ್.ಆರ್ ನಂ.152 ರಂತೆ ಆದೇಶ ನಂ.ಜಿ.ಡಿ 35/52-53 ದಿನಾಂಕ:-28-11-1956 ರ ರೇತ್ಯಾ ಸಾಗುವಳಿ ಚೀಟಿ ಸಂಖ್ಯೆ 65/56-57 10 ವರ್ಷ ಪರಭಾರೆ ಮಾಡಬಾರದೆಂಬ ನಿಬಂಧನೆಗಳಿಗೆ ಒಳಪಟ್ಟು ದರಖಾಸ್ತಿನಡಿ ಮಂಜೂರಾಗಿತ್ತು. 

ಜಮೀನಿನ ಸಂಬಂಧ ಮಾನ್ಯ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ಪಿ.ಟಿ.ಸಿ.ಎಲ್.ಸಿಆರ್.06/81-82 ರ ದಿನಾಂಕ:-24-01-1986 ರಂತೆ ಆದೇಶವಾಗಿದ್ದು, ಸದರಿ ಆದೇಶದಂತೆ ಅಂದಿನಿಂದ ಇಂದಿನವರೆಗೂ ವಾರಸುದಾರರಿಗೆ ಸದರಿ ಜಮೀನಿನ ಸ್ವಾಧೀನತೆಯನ್ನು ಆದೇಶದಂತೆ ಬಿಡಿಸಿಕೊಟ್ಟಿರುವುದಿಲ್ಲವೆಂದೂ ತಿಳಿಸಿದ್ದು, ಪಿ.ಟಿ.ಸಿ.ಎಲ್ 06/81-82 ದಿನಾಂಕ:-24-01-1986 ಮೂಲ ಮಂಜೂರಿದಾರರ ವಾರಸುದಾರರಾದ ರಾಮಾನಾಯ್ಕ ಬಿನ್ ಸೋಮಾನಾಯ್ಕ ರವರಿಗೆ ಕೊಡಬೇಕಾಗಿಯೂ ಕೋರಿರುತ್ತಾರೆ.

ಈ ಸಂಬಂಧ ಟಿ.ಹೆಚ್ ಹಾಲೇಶಪ್ಪ, ಜಿಲ್ಲಾ ಪ್ರಧಾನ ಸಂಚಾಲಕರು, ಕರ್ನಾಟಕ ದಲಿತಸಂಘರ್ಷ ಸಮಿತಿ, ಜಿಲ್ಲಾ ಸಮಿತಿ, ಶಿವಮೊಗ್ಗ ರವರೂ ಸಹಾ ಪ್ರಸ್ತಾಪಿತ ಜಮೀನಿನ ಸಂಬಂಧ ಮಾನ್ಯ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ಮನವಿ ಮಾಡಿಕೊಂಡಿದ್ದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close