ಇಂದು ಸಂಜೆ ಬಸ್ ನಿಲ್ದಾಣದ ಬಳಿ ಪಾದಯಾತ್ರೆಗೆ ಭವ್ಯ ಸ್ವಾಗತ-ಶಾಸಕ ಚೆನ್ನಬಸಪ್ಪ

 


ಸುದ್ದಿಲೈವ್/ಶಿವಮೊಗ್ಗ

ನಿರ್ಮಲ ತುಂಗಭದ್ರ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ನ.06 ರಂದು ಶೃಂಗೇರಿಯಲ್ಲಿ ಆರಂಭಗೊಂಡಿದ್ದು, ಇಂದು ಸಂಜೆ ಪಾದಯಾತ್ರೆ ಶಿವಮೊಗ್ಗ ತಲುಪಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಾಸಕ ಚೆನ್ನಬಸಪ್ಪ, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ನೇತೃತ್ವದಲ್ಲಿ ಜನಜಾಗೃತಿ ಮತ್ತು ಜಲಜಾಗೃತಿ ಆಂದೋಲನವನ್ನ ಆರಂಭಿಸಲಾಗಿತ್ತು. ಈಗ ಪರಿವರ್ಣ ಟ್ರಸ್ಟ್ ನೇತೃತ್ವದಲ್ಲಿ ಪಕ್ಷಾತೀತವಾಗಿ ತುಂಗಭದ್ರ ಉಳಿವು ಮನುಕುಲದ ಉಳಿವು ಎಂಬ ಘೋಷಾವಾಕ್ಯದೊಂದಿಗೆ ಹೊರಟಿದ್ದೇವೆ ಎಂದರು.

ಗಂಗೇ ಶುದ್ದೀಕರಣಗೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಮಾಡಿರುವ ಕಾರ್ಯ ಗಮನಾರ್ಹವಾಗಿದೆ. ಅದರಂತೆ ತುಂಗಭದ್ರದ ಶುದ್ದೀಕರಣ ಮಾಡಲಾಗುತ್ತಿದೆ. ಪಾದಯಾತ್ರೆ ಇಂದು ಸಂಜೆ ಶಿವಮೊಗ್ಗ ತಲುಪಲಿದ್ದು ಬಸ್ ನಿಲ್ದಾಣದಲ್ಲಿ ಭವ್ಯ ಸ್ವಾಗತ ನಡೆಯಲಿದೆ.
ಅಲ್ಲಿಂದ ಎಲ್ ಎಲ್ ಆರ್ ರಸ್ತೆ,  ಗೋಪಿ ಸರ್ಕಲ್, ದುರ್ಗಿಗುಡಿ, ನಂತರ ದೈವಜ್ಞ ಕಲ್ಯಾಣ ಮಂಟಪ ತಲುಪಲಿದೆ. ಮೂರು ದಿನಗಳ ವರೆಗೆ ಕಾರ್ಯಕ್ರಮ ನಡೆಯಲಿದೆ. ನಾಳೆ  ಬೆಳಿಗ್ಗೆ  8-30 ಅಂಬೇಡ್ಕರ್ ಭವನದಲ್ಲಿ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಪ್ರಭುದ್ಧರ ಸಭೆ ನಡೆಯಲಿದೆ ಎಂದರು.

ನಾಳೆ ಸಂಜೆ 6 ಗಂಟೆಗೆ ಕೋರ್ಪಳಯ್ಯನ ಛತ್ರದಲ್ಲಿ ತುಂಗಾರತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೂಡ್ಲಿ ಮಠದ ಅಭಿನವ ಶಂಕರಭಾರತಿ ಶ್ರೀಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಸೋಮವಾರ ಎನ್ ಇಎಸ್ ಮೈದಾನದಲ್ಲಿ ಯುವಕರ ಜೊತೆ ಸಮಾವೇಶ ನಡೆಯಲಿದೆ. ಜಾಗೃತಿಗಾಗಿ ಪಾದಯಾತ್ರೆಯಲ್ಲಿ ನಡೆಯಲಿದೆ. ಚಟ್ನಹಳ್ಳಿಯ ವರೆಗೆ ಪಾದಯಾತ್ರೆ ನಡೆಯಲಿದೆ. ಹೊಳಲೂರಿನಲ್ಲಿ ಸೋಮವಾರ ಸಂಜೆ ತಲುಪಲಿದೆ. ಚಟ್ನಹಳ್ಳಿಯಿಂದ ಮುಂದೆ ಬರುವ ಗ್ರಾಮಪಂಚಾಯಿತಿಯವರು ಮುಂದಿನ ಪಾದಯಾತ್ರೆಯನ್ನ ನಡೆಸಲಿದ್ದಾರೆ ಎಂದು ವಿವರಿಸಿದರು.

ಈ ಕಾರ್ಯಕ್ರಮದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನ ಪಾಲ್ಗೊಳ್ಳುವಿಕೆಯೂ ಬಹಳ ಮುಖ್ಯವಾಗಿದೆ.  ಮೂರು ಹಂತದಲ್ಲಿ ಶ್ರೀಶೈಲದ ವರೆಗೆ ಪಾದಯಾತ್ರೆ ನಡೆಸಬೇಕೆಂಬ ಗುರಿಯಿದೆ. ಸಧ್ಯಕ್ಕೆ ಕಿಷ್ಕೆಂದೆ ವರೆಗೆ ಅಭಿಯಾನ ನಡೆಯಲಿದೆ. ಸಚಿವರು, ಸಂಸದರೊಂದಿಗೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ನದಿಯ ಪಾವಿತ್ರತ್ಯತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ನಾಲ್ಕು ಸೇತುವೆಗೆ ಬೇಲಿ

ನಾಲ್ಕು ಬ್ರಿಡ್ಜ್ ಗಳಿಗೆ ಫೆನ್ಸ್ ಹಾಕಲಾಗುವುದು. ನಗರದಲ್ಲಿರುವ ನಾಲ್ಕು ಸೇತುವೆಗಳಿಗೆ ಬೇಲಿ ಹಾಕಲಾಗುವುದು. ಒಂದು ಸೇತುವೆ ಅಭಿವೃದ್ಧಿ ನಡೆಸಬೇಕೆಂಬ ಚಿಂತನೆ ಇದೆ. ನಂತರ ಏನಾಗಲಿದೆ ಎಂಬುದನ್ನ ಚಿಂತಿಸಲಾಗುವುದು.  ನಾಲ್ಕೂ ಸೇತುವೆಗೆ ಬೇಲಿ ಹಾಕಲಾಗುವುದು. ಈಗ ಸಧ್ಯಕ್ಕೆ ಒಂದು ಸೇತುವೆಗೆ ಫೆನ್ಸ್ ಹಾಕಲಾಗಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಶಂಕರ್, ಗಿರೀಶ್ ಪಟೇಲ್, ಶಾಸಕರಾದ ಡಾ.ಧನಂಜಯ ಸರ್ಜಿ, ಮಾಜಿ ಎಂಎಲ್ ಸಿ ರುದ್ರೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close