ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ದೈಹಿಕ ಸದೃಢತೆಗಾಗಿ ಎಸ್ಪಿ ನೇತೃತ್ವದಲ್ಲಿ ನಡಿಗೆ ಮತ್ತು ಓಟ



ಸುದ್ದಿಲೈವ್/ಶಿವಮೊಗ್ಗ

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ದೈಹಿಕ ಸದೃಢತೆ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಇಂದು ಬೆಳಗ್ಗೆ  ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಗೋಪಾಳ ಪೋದಾರ್‌ ಶಾಲೆಯಿಂದ ನಡಿಗೆ ಮತ್ತು ಓಟ (Walk and Run) ವನ್ನು ಪ್ರಾರಂಭಿಸಿ ಪುರುದಾಳು ರಸ್ತೆ ಮುಖಾಂತರ ಪುರುದಾಳು ಚೆಕ್ ಡ್ಯಾಮ್ ನ ಹತ್ತಿರ  ಬಂದು ಮುಕ್ತಾಯ ಮಾಡಲಾಯಿತು. 

ನಡಿಗೆ ಮತ್ತು ಓಟ (Walk and Run) ದಲ್ಲಿ  ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ,  ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ, ಕೃಷ್ಣ ಮೂರ್ತಿ ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಶಿವಮೊಗ್ಗ, ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ,  ಗೋಪಾಲಕೃಷ್ಣ ಟಿ ನಾಯಕ್ ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ, ಕೇಶವ್ ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ, ನಾಗರಾಜ್ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ,  ಕೃಷ್ಣಮೂರ್ತಿ ಪೊಲೀಸ್ ಉಪಾಧೀಕ್ಷಕರು, ಸಿ ಇ ಎನ್ ಪೊಲೀಸ್ ಠಾಣೆ ಶಿವಮೊಗ್ಗ ಮತ್ತು ಶಿವಮೊಗ್ಗ ನಗರದ  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close