ನಾಡಿದ್ದು ಚುನಾವಣೆ, ಇವತ್ತು ತಹಶೀಲ್ದಾರ್ ವರ್ಗಾವಣೆ, ವರ್ಗಾವಣೆ ಹಿಂದೆ ಇದೆಯಾ ನೌಕರರಲ್ಲೇ ರಾಜಕೀಯ ಲೆಕ್ಕಾಚಾರ?


ಸುದ್ದಿಲೈವ್/ಶಿವಮೊಗ್ಗ

ತಹಶೀಲ್ದಾರ್ ಗಿರೀಶ್ ವರ್ಗಾವಣೆ ಆಗಿದ್ದಾರೆ. ಕರ್ನಾಟಕ ರಾಜ್ಯ ನೌಕರರ ಸಂಘ ಶಿವಮೊಗ್ಗ ಶಾಖೆಯ ಚುನಾವಣೆಗೆ ಇನ್ನು ಎರಡು ದಿನ ಬಾಕಿ ಉಳಿದಿರುವಾಗಲೇ ತಹಶೀಲ್ದಾರ್ ಗಿರೀಶ್ ವರ್ಗಾವಣೆ ಹಲವು ಅನುಮಾನಕ್ಕೆ ಕಾರಣವಾಗಿದೆ. 

 ನ.16 ರಂದು ಶನಿವಾರ ಸಂಘದ ಚುನಾವಣೆ ನಡೆಯಲಿದೆ. ತಹಶೀಲ್ದಾರ್ ಗಿರೀಶ್ ಸಹ ಈ ಚುನಾವಣೆಯಲ್ಲಿ ಕಂದಾಯ ಇಲಾಖೆಯಿಂದ ಸ್ಪರ್ಧಿಸಿದ್ದರು. ನಾಡಿದ್ದು ಚುನಾವಣೆಯ ಹೊಸ್ತಿಲಿನಲ್ಲಿ ಅವರನ್ನ ಮೈಸೂರಿನ ಮೂಡಾ ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದ್ದಾರೆ. 

ತಹಶೀಲ್ದಾರ್ ಗಿರೀಶ್ ಅವರನ್ನ ಇಲ್ಲಿಂದ ವರ್ಗಾವಣೆಗೊಳಿಸಿ ಚುನಾವಣೆ ಗೆಲ್ಲುವ ಹುನ್ನಾರವಿದೆ ಎಂಬ ಅನುಮಾನಗಳಿಗೆ ಈ ವರ್ಗಾವಣೆ ಎಡವು ಮಾಡಿಕೊಟ್ಟಿದೆ. ಅವರ ಸ್ಥಾನಕ್ಕೆ ಈ ಹಿಂದೆ ಹೊಸನಗರ ತಹಶೀಲ್ದಾರ್ ಆಗಿದ್ದ ರಾಜೀವ್ ವರ್ಗಾವಣೆ ಆಗಿದ್ದಾರೆ. ಇವರು ಕುಮಟಾದಿಂದ ಆಗಮಿಸುತ್ತಿದ್ದಾರೆ. 

ಗಿರೀಶ್ ಒಬ್ಬ ಅತ್ಯುತ್ತಮ ಅಧಿಕಾರಿ

ಲೋಕ ಸಭಾ ಚುನಾವಣೆಯ ವೇಳೆ ಡಾ.ನಾಗರಾಜ್ ಎನ್ ಜೆ ಅವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತಹಶೀಲ್ದಾರ್ ಗಿರೀಶ್ ಮೈಸೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಹಿಂದೆ  2019 ರಿಂದ 21 ರವರೆಗೆ ಇದ್ದ ಗಿರೀಶ್ ಆಡಳಿತದಲ್ಲಿ ಸುಧಾರಣೆ ತಂದಿದ್ದರು. ಪತ್ರಕರ್ತರ ಜೊತೆ ಇವರಿಗೆ ಉತ್ತಮ ಬಾಂಧವ್ಯ ಬೆಳಿಸಿಕೊಂಡಿದ್ದರು. ಈಗ ಇವರ ವರ್ಗಾವಣೆ ರಾಜಕೀಯ ಹಿನ್ನೆಲೆಯಲ್ಲಿಯೇ ನಡೆದಿದೆ ಎನ್ನಲಾಗಿದೆ. ಗಿರೀಶ್ ಪ್ರಬಲ ಸ್ಪರ್ಧಿ ಸಹ ಆಗಿ ಚುನಾವಣೆಯಲ್ಲಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close