ಸುದ್ದಿಲೈವ್/ಶಿವಮೊಗ್ಗ
ವಕ್ಫ್ ವಿಚಾರದಲ್ಲಿ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನಲೆಯಲ್ಲಿ ಎನ್ ಡಿ ಎ ವಿರೋಧಿ ಪಕ್ಷಗಳಲ್ಲಿ ಆತಂಕ ಮೂಡಿಸುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸದ ನಂತರ ಎನ್ ಡಿ ಎ ವಿರೋಧಿ ಮೈತ್ರಿಕೂಟ ವಿರೋಧಿಸಲು ಆರಂಭಿಸಿದೆ. ಸಭೆಯನ್ನ ತಿರಸ್ಕರಿಸಿದೆ. 21 ಸಾವಿರ ಜಮೀನು ವಕ್ಫ್ ಆಸ್ತಿಯನ್ನಾಗಿ ಮಾಡಲು ಸರ್ಕಾರ ಸೂಚನೆ ನೀಡಿದೆ. ಶಾಲಿನಿ ರಜನೀಶ್ ಗೆ ರಾಜೇಂದ್ರ ಕುಮಾರ್ ಕಠಾರಿಯಾರಿಗೆ ಸರ್ಕಾರಿ ಪತ್ರ ಬರೆದು, ರೈತರಭೂಮಿ, ಕೆರೆ, ಗೋಮಾಳ, ಮಠಮಾನ್ಯರ ಆಸ್ತಿಯನ್ನ ಜಾಗವನ್ನ ಸ್ವಾಧೀನ ಪಡಿಸುವ ಯತ್ನ ನಡೆದಿದೆ ಎಂದು ದೂರಿದರು.
ಇದನ್ನ ಮಾಡುವ ಮೂಲಕ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡಾಗುತ್ತಿದೆ. ಲ್ಯಾಂಡ್ ಜಿಹಾದ್ ಮೂಲಕ ತುಷ್ಠೀಕರಣ ಮಾಡಲಾಗುತ್ತಿದೆ. ಭಾರತ ಮತ್ತು ಪಾಕ್ ನ ನಡುವಿನ ಜಾಗ ವಕ್ಫ್ ಆಸ್ತಿ ಆಗಬೇಕಿದೆ. ಅರಣ್ಯ ಭೂಮಿ ವಿಚಾರದಲ್ಲಿ ರೈತರಿಗೆ ಇನ್ನೂ ಹಕ್ಕುಪತ್ರ ನೀಡಬೇಕಿದೆ. ಭೂಮಿ ಸಾಫ್ಟವೇರ್ ನಲ್ಲಿ ರೈತರ ಭೂಮಿ ಖಾತೆಯನ್ನ ಅಪ್ಲೋಡ್ ಮಾಡಲು ಸಮಯವಿಲ್ಲ ಆದರೆ ಸ್ಮಶಾನ ಜಾಗ ಸರ್ಕಾರದ್ದು ಆಗಿರದಿದ್ದರೆ ಖಾಸಗಿಯವರ ಜಾಗ ಪಡೆಯುವ ಯತ್ನ ನಡೆಯುತ್ತಿದೆ.
ಒಂದು ಕಡೆ ಭ್ರಷ್ಠಾಚಾರ, ಹಿಂದೂಗಳ ಜಮೀನು ಕಬಳಿಸುವ ವಿಷಯ, ಅನ್ವರ್ ಮಣಿಪ್ಪಾಡಿಯವರು ಜೆಪಿಸಿ ಮುಂದೆ ಬಂದು 3 ವರೆ ಸಾವಿರ ಕೋಟಿ ಅನ್ಯಾಯ ನಡೆದಿದೆ ಎಂದಿದ್ದಾರೆ. ಭೂಮಿ ಸಾಫ್ಟ ವೇರ್ ಗೆ 7 ತಿಂಗಳ ಒಳಗೆ 319 ಎಕರೆ ಭೂಮಿ ಒಳಪಡಿಸಲಾಗಿದೆ. 1 ಲಕ್ಷ 28 ಸಾವಿರದ ಚದರ ಅಡಿ ಭೂಮಿಯನ್ನ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲಾಗಿದೆ. 3720 ಪ್ರಕರಣಗಳು ದಾಖಲಾಗಿದೆ. ವಕ್ಫ್ ನ್ಯಾಯಾಲಯದಲ್ಲಿ ಚರ್ಚೆಯಾಗಿ 1400 ಪ್ರಕರಣ ತೀರ್ಪಿನ ಹಂತಕ್ಕೆ ತಲುಪಿದೆ. ರೈತರ, ಮಠಮಾನ್ಯರ ಜಮೀನಿನ್ನ ವಕ್ಫ್ ಬೋರ್ಡ್ ಗೆ ಏರಿಸಿರುವ ವಿಷಯ ಸರಿಪಡಿಸಬೇಕಿದೆ ಎಂದರು.
ಜೆಪಿಸಿಯ ಅಧ್ಯಕ್ಷ ಜಗದಾಂಬಿಕ ಪಾಲ್ ವಿಜಯಾಪುರಕ್ಕೆ ಬರ್ತಾ ಇದ್ದಾರೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಆಗಿರುವ ಭ್ರಷ್ಠಾಚಾರದ ಪ್ರಕರಣದಲ್ಲಿ ವಕ್ಫ್ ಬೋರ್ಡ್ ಹಗರಣ ಅತಿ ದೊಡ್ಡದು ಎಂದರು.
ಮೂಡಾ ಪ್ರಕರಣದಲ್ಲಿ ಇಂದು ಲೋಕಾಯುಕ್ತರ ಕಚೇರಿಗೆ ಸಿಎಂ ಹಾಜರಾಗುತ್ತಿದ್ದಾರೆ. ಬಿಜೆಪಿಯ ಒಳಗಿನ ಭಿನ್ನಾಭಿಪ್ರಾಯ ದ ಬಗ್ಗೆ ಮಾತನಾಡಿದ ಸಂಸದರು ಮನೆಯಲ್ಲಿ ಅಣ್ಣತಮ್ಮಂದಿರ ನಡುವೆ ಭಿನ್ನಾಭಿಪ್ರಾಯ ಸಹಜ. ಸರಿಪಡಿಸಿಕೊಳ್ಳಲಾಗುವುದು. ಯತ್ನಾಳ್ ವಿರುದ್ಧ ಯಾವ ದೂರು ಇಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನ ನಾಯಕರು ಬಗೆಹರಿಸಲಾಗುವುದು ಎಂದುರು.
ಅಬಕಾರಿ ವರ್ಗಾವಣೆ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ವಿಚಾರದಲ್ಲಿ ಭ್ರಷ್ಠಾಚಾರ ನಡೆದಿದ್ದು, ಮದ್ಯಮಾರಾಟಗಾರರ ಸಂಘ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಚಿವರ ಮಕ್ಕಳ ಪಾತ್ರ ಇದೆ. ವರ್ಷಕ್ಕೆ 500 ಕೋಟಿ ಹಣ ನೀಡಬೇಕು ಎಂಬುದರ ಬಗ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ಹೆಸರು ಬರೆದು ರುದ್ರಣ್ಣ ಎಂಬ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಆದಷ್ಟು ಬೇಗ ಹಣ ಜಮ ಆಗಲಿದೆ.
ರೈತರ ಬೆಳೆ ವಿಮೆ ಬಗ್ಗೆ ಕರೆ ಮಾಡಿದ್ದಾರೆ. 2023-24 ರಲ್ಲಿ ಹವಮಾನ ವಿಮೆಯಲ್ಲಿ ಬರಗಾಲ ಎದುರಿಸಲಾಗಿತ್ತು. ಕಳೆದ ವರ್ಷದಲ್ಲಿ 50383 ಅಡಿಕೆ, ಮಾವು, ಶುಂಠಿ ಬೆಳೆಗಾರರಲ್ಲಿ 48449 ಬೆಳೆಗಾರರು ಅಡಿಕೆಯವರೆ ಇದ್ದು, ಕೃಷಿ ವಿಮೆ ಕಂಪನಿಗೆ ಹಣಕಟ್ಟಿದ್ದರು. ಜುಲೈ ನಲ್ಲಿ ವಿಮೆ ಸರ್ವೆ ಮಾಡಲಾಗಿತ್ತು. 87 ಸಾವಿರ ಎಕರೆ ಪ್ರಸ್ತಾವನೆ ಆಗಿದೆ. 445 ಕೋಟಿ ವಿಮೆ ಆಗಿದೆ. ರೈತರು ಪ್ರೀಮಿಯಂ ಕಟ್ಟಿರೋದು 23 ಕೋಟಿ ಹಣ ಕಟ್ಟಿದ್ದಾರೆ. ವಿಮಾ ಹಣ ಬೇಗ ಕೃಷಿಕರ ಖಾತೆಗೆ ಹಾಕಲು ಸೂಚಿಸಿರುವೆ. 8-10 ದಿನದ ಒಳಗೆ ಹಣ ಬರಲಿದೆ ಎಂದರು.