ಟ್ಯಾಕ್ಸ್ ಪೇಯರ್ ಗಳ ಬಿಪಿಎಲ್ ಕಾರ್ಡ್ ಗಳು ರದ್ದಾಗಿಲ್ಲ ಬದಲಿಗೆ ಎಪಿಎಲ್ ಆಗಿದೆ

 


ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ ರದ್ಧತಿ ಕುರಿತಂತೆ ಬುಗಿಲೆದ್ದಿರುವ ಅಸಮಾಧಾನದ ಬೆನ್ಬಲ್ಲೇ ಶಿವಮೊಗ್ಗದಲ್ಲಿಯೂ ಕಾರ್ಡ್ ರದ್ಧತಿಯಾಗಿದೆ. ಇದರಲ್ಲಿ ಇನ್ ಕಂ ಟ್ಯಾಕ್ಸ್ ಹೊಂದಿರುವ ಜನರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 4.80 ಲಕ್ಷ ಕಾರ್ಡ್ಗಳಿವೆ. ಇವುಗಳಲ್ಲಿ 1 ಲಕ್ಷ ಎಪಿಎಲ್ ಕಾರ್ಡ್ ಹೊಂದಿದ್ದರೆ,  ಉಳಿದ 3.80 ಸಾವಿರ ಬಿಪಿಎಲ್ ಕಾರ್ಡ್ ಗಳಿವೆ. ಇದರಲ್ಲಿ 72 ಜನ ಬಿಪಿಎಲ್ ಕಾರ್ಡ್ ನ್ನ  ಸರ್ಕಾರಿ ನೌಕರರೆ ಪಡೆದಿರುವುದು ಅಚ್ಚರಿಯಾಗಿದೆ.

3.80 ಲಕ್ಷ ಬಿಪಿಎಲ್ ಕಾರ್ಡ್ ನಲ್ಲಿ 53342 ಕಾರ್ಡ್ ಗಳು ಇಲಾಖೆಗೆ ಪರಿಶೀಲನೆಗೆ ಬಂದಿದೆ. ಇದರಲ್ಲಿ 2970 ಜನ ಇನ್ ಕಂ ಟ್ಯಾಕ್ಸ್ ಪೇಯರ್ ಆಗಿದ್ದಾರೆ. 50,877 ಜನ  ತಿಂಗಳ 10 ಸಾವಿರಕ್ಕಿಂತ ಹೆಚ್ಚು ಮಾಸಿಕ ಆದಾಯವನ್ನ ಹೊಂದಿದ್ದಾರೆ. ಅಚ್ಚರಿ ಅಂದರೆ ಬಿಲೋ ಪಾವರ್ಟಿ ಲೈನ್ ಗೆ ಅಳತೆಗೋಲು ಇಲ್ಲದ ಕಾರಣ ಸಧ್ಯಕ್ಕೆ ಇದನ್ನ ಇಷ್ಟಕ್ಕೆ ತಡೆ ಹಿಡಿಯಲಾಗಿದೆ.

53342 ಜನರ ಕಾರ್ಡ್ ನಲ್ಲಿ 43404 ಪರಿಶೀಲಿಸಲಾಗಿದ್ದು, ಈ 2295 ಬಿಪಿ ಎಲ್ ನಿಂದ ಎಪಿಎಲ್ ಗೆ ಪ್ರಮೋಷನ್ ಪಡೆದಿದ್ದಾರೆ. ಇದರಲ್ಲಿ ಡೆತ್ ಆದವರು 93 ಜನ ಎಂದು ಗುರುತಿಸಿ ಅವರ ಕಾರ್ಡ್ ನ್ನ  ರದ್ದು ಪಡಿಸಲಾಗಿದೆ.

ಆದರೆ 2970 ಜನ ಟ್ಯಾಕ್ಟ್ ಪೇಯರ್ ಗಳಲ್ಲಿ 2295 ಜನರ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಆಗಿವೆ. ಉಳಿದವರ ಕಾರ್ಡ್ ಪರಿಶೀಲನೆ ಆಗಬೇಕಿದೆ. ಜಿಲ್ಲೆಯಲ್ಲಿ ಟ್ಯಾಕ್ಸ್ ಪೇಯರ್ ಗಳ ಕಾರ್ಡ್ ರದ್ದು ಮಾಡಿಲ್ಲ ಬದಲಿಗೆ ಎಪಿಎಲ್ ಕಾರ್ಡ್ಗಳನ್ನಾಗಿ ಮಾಡಲಾಗಿದೆ. ಬಿಪಿಎಲ್ ನಿಂದ ಎಪಿಎಲ್ ಗಳಾದ ಕಾರ್ಡ್ ಗಳು ಜಿನೈನ್ ಆಗಿವೆಯಾ ಎಂಬುದು ಹುಟ್ಟಿಕೊಂಡ ಪ್ರಶ್ನೆಯಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close