ಹೊಸನಗರ ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾ ಬಲೆಗೆ


ಸುದ್ದಿಲೈವ್/ರಿಪ್ಪನ್ ಪೇಟೆ

ಪ್ರಕರಣ ನಡೆಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೊಸನಗರ ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.  

ಹೊಸನಗರ ತಾಲೂಕು ರಿಪ್ಪನ್ ಪೇಟೆ  ಕೆರೆಹಳ್ಳಿ ಗ್ರಾಮದ ನಿವಾಸಿ, ಅಂಜನ್‌ಕುಮಾರ್ ರವರು ಸೆಪ್ಟೆಂಬರ್-2022 ರಲ್ಲಿ ರಾಜಕೀಯ ಮತ್ತು ರಬ್ಬರ್ ಮರ ಲೀಜ್ ವಿಚಾರವಾಗಿ ಹೊಸನಗರ ತಾಲ್ಲೂಕು ಗವಟೂರು ಗ್ರಾಮದಲ್ಲಿ  ಗಣಪತಿ ಹಾಗೂ ಇತರರೊಂದಿಗೆ ಜಗಳವಾಗಿತ್ತು. ಈ ಬಗ್ಗೆ ಎರಡು ಕಡೆಯಿಂದ ಪ್ರಕರಣ ದಾಖಲಾಗಿದ್ದು, ರಿಪ್ಪನ್‌ಪೇಟೆ ಪೊಲೀಸ್‌ನವರು ಎರಡೂ ಕೇಸ್‌ನಲ್ಲಿ ತನಿಖೆ ಪೂರೈಸಿ, ಹೊಸನಗರದ ಸೀನಿಯ‌ರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದರು.  

ದೂರು ನೀಡಿದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವೇಳೆ ಈ ಕೇಸ್‌ನ್ನು ರವಿ.ಕೆ ಸಹಾಯಕ ಸರ್ಕಾರಿ ಅಭಿಯೋಜಕರು,  ವಾದ ಮಾಡಿದ್ದರು. ಆದರೆ, ದಿನಾಂಕ: 28-10-2024 ರಂದು ಅಂಜನ್ ಕುಮಾರ್ ಸ್ನೇಹಿತನೊಂದಿಗೆ ಹೊಸನಗರ ಕೋರ್ಟ್‌ಗೆ ಹೋಗಿ, ಎಪಿಪಿ ರವಿ ರವರನ್ನು ಭೇಟಿ ಮಾಡಿದಾಗ, ರವಿ, ಎಪಿಪಿ ರವರು ಕೇಸ್ ರಾಜಿ ಮಾಡಿಕೊಳ್ಳುವಂತೆ ತಿಳಿಸಿರುತ್ತಾರೆ.  ಕೇಸ್ ನಡೆಸಿದರೆ 05 ವರ್ಷ ಆಗುತ್ತದೆ. ಆ ಸಮಯದಲ್ಲಿ ಬಂದು ಹೋಗುವ ಖರ್ಚು, ಊಟ ತಿಂಡಿ ಖರ್ಚು ಆಗುತ್ತದೆ. ತಾನು ಕೇಸ್ ಮುಗಿಸಿಕೊಡುತ್ತೇನೆ. ಕೇಸ್ ಮುಗಿಸಿಕೊಡಬೇಕಾದರೆ 5,000/- ರೂ ಕೊಡಬೇಕು ಎಂದು ಹೇಳಿ,  1,000/- ರೂ ಹಣವನ್ನು ತೆಗೆದುಕೊಂಡಿದ್ದರು. 

ಇಂದು ಕೇಸ್ ಇದ್ದುದ್ದರಿಂದ  ಬೆಳಿಗ್ಗೆ ಸುಮಾರು 10-30 ಗಂಟೆಗೆ ಹೊಸನಗರ ಕೋರ್ಟ್ ಆವರಣದಲ್ಲಿಯೇ ಇದ್ದ ಎಪಿಪಿ ರವಿ ರವರ ಛೇಂಬರ್‌ಗೆ ಹೋದ ಅಂಜನ್ ಕುಮಾರ್ ಗೆ ಪುನಃ  ಮೂರು ಸಾವಿರ ರೂ. ಕೊಡು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 

ಈ ಸಂಭಾಷಣೆಯನ್ನು ಅಂಜನ್ ಕುಮಾರ್ ತನ್ನ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ರವಿ, ಎಪಿಪಿ, ಹೊಸನಗರ ರವರು ಕೇಸ್ ಅನ್ನು ಮುಗಿಸಿಕೊಡಲು 3 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಹಣಕೊಡಲು ಮನಸ್ಸಿಲ್ಲ ಅಂಜನ್ ಕುಮಾರ್ ಲೀಕಾಯುಕ್ತ ಪೊಲೀಸ್ ಆಣೆಯಲ್ಲಿ ದೂರು ನೀಡಿದ್ದರು.‌ಇಂದು ಹಣ ಪಡೆಯುವಾಗ ಎಪಿಪಿ ರವಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಾರೆ.‌  

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಕಾಶ್  ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ  ಪ್ರಕಾಶ್,  ಹೆಚ್.ಎಸ್ ಸುರೇಶ್, ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಟೀಕಪ್ಪ ಸಿ.ಹೆಚ್.ಸಿ, ಸುರೇಂದ್ರ ಸಿ.ಹೆಚ್.ಸಿ,  ಪ್ರಶಾಂತ್ ಕುಮಾರ್, ಸಿ.ಪಿ.ಸಿ, ಚೆನ್ನೇಶ್, ಸಿ.ಪಿ.ಸಿ ಆದರ್ಶ್ ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ,  ಪ್ರಕಾಶ್ ಬಾರಿಮರದ ಸಿ.ಪಿ.ಸಿ  ಪುಟ್ಟಮ್ಮ.ಎನ್. ಮ.ಪಿ.ಸಿ, ಅಂಜಲಿ, ಮ.ಪಿ.ಸಿ ಗಂಗಾಧರ ಎ.ಪಿ.ಸಿ, ಜಯಂತ್ ಎ.ಪಿ.ಸಿ ಮತ್ತು ಗೋಪಿ ಎ.ಪಿ.ಸಿ, ತರುಣ್ ಎ.ಪಿ.ಸಿ ರವರು ಕಾರ್ಯಾಚರಣೆಯಲ್ಲಿ ಹಾಜರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close