ಡಿವೈಡರ್ ಮೇಲೆ ಹತ್ತಿ ನಿಂತ ಬಸ್



ಸುದ್ದಿಲೈವ್/ಶಿವಮೊಗ್ಗ

ನಗರದ ಹೊಳೆ ಬಸ್ ನಿಲ್ದಾಣದ ಬಳಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ನಿಂತಿದೆ. ಪರಿಣಾಮ ಬಸ್ಸಿನ ಮುಂಭಾಗದ ಬಾಗಿಲು ತೆಗೆಯಲಾಗದೆ ಪ್ರಯಾಣಿಕರು ತುರ್ತು ನಿರ್ಗಮನ ಕಿಟಕಿಯಿಂದ ಇಳಿದಿರುವ ಘಟನೆ ಸಂಭವಿಸಿದೆ. 

ಈ ಸಂದರ್ಭದಲ್ಲಿ ಬಿಬಿ ರಸ್ತೆಯ ನಿವಾಸಿ ಸುಬ್ರಹ್ಮಣ್ಯ ಎನ್ನುವವರು ಟಿವಿಎಸ್ ಎಕ್ಸ್ ಎಲ್ ನಲ್ಲಿ ಪ್ರಯಾಣಿಸುತ್ತಿದ್ದು ಅವರಿಗೂ ಬಸ್ ತಾಗಿದ್ದರಿಂದ ಸಣ್ಣ ಪ್ರಮಾಣದ ಗಾಯಗಳಾಗಿವೆ. ಬಸ್ಸಿನ ಬಾಗಿಲು ನಜ್ಜುಗುಜ್ಜು ಆದರೂ ಸಹ ಚಾಲಕ ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿ ನೇರವಾಗಿ ಕೆಎಸ್ಆರ್ಟಿಸಿ ಡಿಪೋಗೆ ಬಸ್ ಚಾಲನೆ ಮಾಡಿಕೊಂಡು ಹೋಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಚಾಲಕ ಕುಡಿದಿರಬಹುದು ಎಂದು ಪ್ರಯಾಣಿಕರು ಕೆಲವರು ಮಾತನಾಡಿದರೆ ಇನ್ನು ಕೆಲವರು ಚಾಲಕ ಹೊಸಬನಾಗಿದ್ದರಿಂದ ಈ ರೀತಿ ನಡೆದುಕೊಂಡಿರುವುದಾಗಿ ಕೇಳಿ ಬರುತ್ತಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close