ಪ್ರೇಕ್ಷಕರ ಮನಗೆದ್ದ ಬಾಕ್ಸ್ ಕ್ರಿಕೆಟ್


ಸುದ್ದಿಲೈವ್/ಶಿವಮೊಗ್ಗ

ಸಿಹಿಮೊಗ್ಗೆ ಕ್ರೀಡ ಹಾಗೂ ಸಾಂಸ್ಕೃತಿಕ ಕ್ಲಬ್ ಗೋಪಾಳ, ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಶಿವಮೊಗ್ಗ ಸ್ಮಾರ್ಟ್ ಶಿವಮೊಗ್ಗ ದೆವಲಪರ್ಸ್ ಅಂಡ್ ಬಿಲ್ಡರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಗೋಪಾಳದ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ಕ್ರಿಕೆಟ್ ಹಬ್ಬ ನಡೆಯಿತು. ಈ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ  ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

 ರಾಷ್ಟ್ರ ಹಾಗೂ ರಾಜ್ಯದಿಂದ ಆಹಾನಿತ 44 ತಂಡಗಳು ಭಾಗವಹಿಸಿದ್ದವು. ಹೊರ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ತಂಡಗಳು ಭಾಗವಹಿಸಿದ್ದವು. 

 ಫೈನಲ್ ನಲ್ಲಿ ಜೈ ಕರ್ನಾಟಕ ಬೆಂಗಳೂರು ಹಾಗೂ ಎನ್ ಎಸ್ ಸಿ ಮಲ್ಪೆ ತಂಡಗಳ ನಡುವೆ ಫೈನಲ್ ಹಣಾಣಿ ಅತ್ಯಂತ ಬಿರುಸಿನಿಂದ ನಡೆಯಿತು. ರೋಚಕವಾದ ಪಂದ್ಯದಲ್ಲಿ ಎನ್ ಎಸ್ ಸಿ ಮಲ್ಪೆ ತಂಡವು ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿತು. ಈ ಮೂಲಕ 1,77,777 ರೂಪಾಯಿಗಳು ನಗದು ಬಹುಮಾನ ಹಾಗೂ 6 ಅಡಿ ಎತ್ತರದ ಟ್ರೋಫಿಯನ್ನು ಗೆದ್ದುಕೊಂಡಿತು.

 ದ್ವಿತೀಯ ಬಹುಮಾನವನ್ನು ಜೈ ಕರ್ನಾಟಕ ಬೆಂಗಳೂರು ತಂಡವು ಗೆದ್ದುಕೊಂಡಿತು ಈ ಮೂಲಕ 77777 ನಗದು ಬಹುಮಾನವನ್ನು ಹಾಗೂ ಐದು ಅಡಿಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

 ತೃತಿಯ ಬಹುಮಾನವನ್ನು ಜೈ ಕರ್ನಾಟಕ ಜೂನಿಯರ್ಸ್ ತಂಡವು ಗೆದ್ದುಕೊಂಡಿತು ಈ ಮೂಲಕ 37777 ನಗದು ಬಹುಮಾನ ಹಾಗೂ 3 ಅಡಿ ಟ್ರೋಫಿಯನ್ನು ಗೆದ್ದುಕೊಂಡಿತು.

ಸರಣಿ ಸರ್ವೋತ್ತಮರಾಗಿ ಎನ್ ಎಸ್ ಸಿ ಮಲ್ಪೆಯ ಆಲ್ರೌಂಡರ್ ಆಟಗಾರ ಸಾಗರ ಆಚಾರ್ಯ ಯಮಹ ಎಫ್ ಝೆಡ್ ಬೈಕ್ ಅನ್ನು ಗೆದ್ದುಕೊಂಡರು. ಈ ಪಂದ್ಯಾವಳಿಗಳಿಗೆ ಮುಖ್ಯ ಅತಿಥಿಗಳಾಗಿ ಸಂಸದರದ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ರವರು ವಿಧಾನ ಪರಿಷತ್ ಸದಸ್ಯರಾದ ಬಲಕೀಶ್ ಭಾನು ರವರು ಸೂಡ ಅದ್ಯಕ್ಷರಾದ ಸುಂದರೇಶ್ ರವರು ಎಂ ಶ್ರೀಕಾಂತ್ ರವರು ಕೆ ಇ ಕಾಂತೇಶ್ರವರು   H  C ಯೋಗೀಶ್ ರವರು ಆರ್ ಪ್ರಸನ್ನ ಕುಮಾರ್ ರವರು ಹಾಗೂ ಇನ್ನಿತರ ಗಣ್ಯರು ಆಗಮಿಸಿದ್ದರು.

 ತಮ್ಮ 55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಆಯೋಜಕರಾದ ತರುಣ್ ಶೆಟ್ಟಿ, ನಿಶ್ಚಲ್ ಶೆಟ್ಟಿ, ವಿನ್ಸೆಂಟ್ ರೊಡ್ರಿಗಸ್, ಚಿರಂಜೀವಿ ಬಾಬು, ಯೋಗೀಶ್, ಗೌಡ,  ಗೀತೇಂದ್ರ ಗೌಡ, ಸೈಫು, ಕಾಶಿಫ್,ಲೋಹಿತ್,  ಪ್ರದೀಪ್ ಕಾವಾಡ್,  ಪ್ರದೀಪ ಹಾಗೂ ಇತರರು ಅತ್ಯುತ್ತಮವಾಗಿ ಯಶಸ್ವಿಯಾಗಿ ಪಂದ್ಯಕೂಟವನ್ನು ಆಯೋಜನೆ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close