ಹೊನ್ನಾಪುರದ ಬಳಿ ಓಮ್ನಿ ವಾಹನ ಬೆಂಕಿಗೆ ಆಹುತಿ



ಸುದ್ದಿಲೈವ್/ಶಿವಮೊಗ್ಗ

ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಮಾರುತಿ ಓಮ್ನಿ ವಾಹನವೊಂದು ಬೆಂಕಿ ಹೊತ್ತಿಕೊಂಡು ಉರಿದಿದೆ. ಐದು ಜನರಲ್ಲಿ ಓರ್ವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. 

ಶಿವಮೊಗ್ಗದ ಇಮಾಮ್ ಬಾಡಾ ನಿವಾಸಿಯಾಗಿರುವ ಮೊಹಮದ್ ಸನಾ ಉಲ್ಲಾ ಎಂಬುವರು ತಮಗೆ ಪರಿಚಯವಿರುವರನ್ನ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದ ಕಾರಣ ಮಂಗಳೂರಿಗೆ ಹೋಗಿ ವಾಪಾಸ್ ಶಿವಮೊಗ್ಗಕ್ಕೆ ಬರುವಾಗ ಹೊನ್ನಾಪುರದ ಬಳಿ ಮಾರುತಿ ಓಮ್ನಿ ಬೆಂಕಿ ಹತ್ತಿಕೊಂಡಿದೆ. 

ಐದು ಜನರಿದ್ದ ವಾಹನದಲ್ಲಿ ಓರ್ವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ಕಳುಹಿಸಲಾಗಿದೆ. ಬೆಂಕಿಗೆ ಕಾರಣ ಸ್ಪಷ್ಟವಾಗಿ ತಿಳಿದು ಬರಬೇಕಿದೆ. ಮಾಹಿತಿ ಪ್ರಕಾರ ಮಾರುತಿ ಓಮ್ನಿಯನ್ನ ಗ್ಯಾಸ್ ನಲ್ಲಿ ಓಡಿಸುತ್ತಿದ್ದ ಸನಾಉಲ್ಲಾ ಇಂದು ಪೆಟ್ರೋಲ್ ಗೆ ಸ್ವಿಚ್ ಓವರ್ ಮಾಡಿಕೊಂಡಿದ್ದರು. 

ಈ ಸ್ವಿಚ್ ಓವರ್ ಶಾರ್ಟ್ ಆಗಲು ಕಾರಣವೆಂದು ಮೂಲಗಳು ತಿಳಿಸಿವೆ. ತುಂಗ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ವಂದಿಗಳು ಬೆಂಕಿಯನ್ನ ಆರಿಸಿದ್ದಾರೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close