ಕಂಗುವ-ಧಮ್ ಇಲ್ಲದ ಕಥೆಯಲ್ಲಿ ಸಾಹಸಮಯ ದೃಶ್ಯಗಳು

 


ಸುದ್ದಿಲೈವ್/ಶಿವಮೊಗ್ಗ

ಪ್ಯಾನ್ ಇಂಡಿಯಾ ಆಗಿ ಹೊರ ಬಂದಿರುವ ತಮಿಳು ನಟ ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ ಯೋಗಿ ಬಾಬು ಅಭಿನಯದ ಸಿನಿಮಾ ಕಂಗುವ ದೇಶಾದ್ಯಂತ ಬಿಡುಗಡೆಯಾಗಿದೆ. ಆದರೆ ಯಾವುದೇ ರಿವೂವ್ ಗಳು ಸಿನಿಮಾ ಬಿಗ್ ರೆಸ್ಪಾನ್ಸ್ ಪಡೆದುಕೊಂಡಿದೆ ಎಂದು ಹೇಳುವಲ್ಲಿ ಸಿನಿಮಾ ಸೋತಿದೆ.

ಸಿನಿಮಾದಲ್ಲಿ 1000 ವರ್ಷದ ಹಳೆಯ ಘಟನೆಯನ್ನ ನೈಜ ಘಟನೆಯೊಂದಿಗೆ ಹೆಣೆದಿರುವುದೇ  ಸಿನಿಮಾವಾಗಿದೆ. ಮಗುವಿನ 1070 ನೇ ಇಸವಿಯಲ್ಲಿ  ನಡೆದ ಘಟನೆಯಲ್ಲೂ ರಿವೇಂಜ್ ಪಡೆಯಲಾಗಿದ್ದು ಪ್ರಸ್ತುತ 2024ನೇ ವರ್ಷದಲ್ಲಿ ಮಾಡ್ರನೈಜ್ ಆಗಿ ಬಂದ ನಾಯಕ ಮಗುವನ್ನ ರಕ್ಷಿಸುವುದೇ ಸಿನಿಮಾವಾಗಿದೆ.

ಸೂರ್ಯ ಮತ್ತು ಬಾಬಿ ಡಿಯೋಲ್ ತೆರೆಯ ಮೇಲೆ ಸೊಗಸಾಗಿ ಅಭಿನಿಯಿಸಿದ್ದಾರೆ. ನೆಗೆಟಿವ್ ಪಾರ್ಟ್ ಎಂದರೆ ಕಥೆಯಲ್ಲಿ ಯಾವುದೇ ಧಮ್ ಇಲ್ಲ. ಆದರೆ ಸಾಹಸಮಯವಾಗಿ ತೆಗೆಯಲಾಗಿದೆ. ಒಬ್ಬನ ಸಾಹಸಮಯವನ್ನೇ ಸಿನಿಮಾದಲ್ಲಿ ಅಬ್ಬರಿಸಲಾಗಿದೆ.

ಜೈಭೀಮ್, ಗಜನಿ, ಪಿತಾಮಗನ್ ಕಾಕ್ಕ-ಕಾಕ್ಕದಂತ ಸಿನಿಮಾವನ್ನ ನೀಡಿರುವ ಸೂರ್ಯ ಕಂಗುವ ಸಿನಿಮಾ ನೀಡಿರುವುದು ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಚಿತ್ರ ಒಂದು ಲೆಕ್ಕದಲ್ಲಿ ಮಖಾಡೆ ಮಲಗಿದೆ. ಚೆನ್ನೈನಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಸಿನಿಮಾದ ಕಲೆಕ್ಷನ್ ನಲ್ಲೂ ಕುಸಿತಗೊಂಡಿದೆ. 

'ಕಂಗುವ' ಹೈಲೈಟ್ ಎಂದರೆ ಅದು ಸೂರ್ಯ ಹಾಗೂ ಬಾಬಿ ಡಿಯೋಲ್. ಸೂರ್ಯ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡು, ಎರಡಕ್ಕೂ ಜೀವ ತುಂಬಿದ್ದಾರೆ. ಬಾಬಿ ಡಿಯೋಲ್ ಪಾತ್ರ, ವಸವಿನ್ಯಾಸ ಹೆಚ್ಚು ಗಮನಸೆಳೆಯುತ್ತದೆ. ಯೋಗಿ ಬಾಬು, ದಿಶಾ ಪಟಾನಿ ಮೊದಲ ಹದಿನೈದು ನಿಮಿಷ, ಕೊನೆಯ ಎರಡು ನಿಮಿಷಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಹೆಚ್ಚು ಪಾತ್ರಗಳನ್ನು ಸೃಷ್ಟಿಸಿ, ಅವುಗಳಿಗೆ ಕಥೆಯಲ್ಲಿ ಜಾಗ ನೀಡಲಾಗಿದೆ. ಸಾಹಸ ದೃಶ್ಯಗಳಿಗೆ ದೇವಿಶ್ರೀ ಪ್ರಸಾದ್ ಹಿನ್ನೆಲೆ ಸಂಗೀತ ರೋಮಾಂಚನಗೊಳಿಸುತ್ತದೆ. ವೆಟ್ರಿ ಪಳನಿಸ್ವಾಮಿ ಎರಡೂ ಕಾಲಘಟ್ಟದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನು ಕ್ರೈಮ್ಯಾಕ್ಸ್‌ನಲ್ಲಿ ಹೊಸ ಪಾತ್ರವೊಂದು ಪರಿಚಯಿಸಿದ್ದು, ಇದು ಪ್ರೇಕ್ಷಕರಿಗೆ ಮುಂದಿನ ಭಾಗ ವೀಕ್ಷಿಸಲು ಕೌತುಕ ಹೆಚ್ಚಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close