ಸುದ್ದಿಲೈವ್/ಶಿವಮೊಗ್ಗ
ನಾಳೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಕುರುಬರ ಸಂಘದ ಒಂದುವರೆ ಎಕರೆಯಲ್ಲಿ ಕನಕದಾಸರ ಸಮುದಾಯದ ಭವನಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ. ನಗರಾಭಿವೃದ್ಧಿ ಮತ್ತು ಪಟ್ಟಣ ಸಚಿವ ಭೈರತಿ ಸುರೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಿರಂಜನಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿಸ್ವಾಮಿಗಳು, ಕುರುಬರ ಜಡೇ ದೇವರ ಮಠ ಅಮೋಘ ಸಿದ್ದೇಶ್ವರಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಸದ ಬಿವೈ.ರಾಘವೇಂದ್ರ, ಎಂಎಲ್ ಸಿ ಗಳಾದ ಡಾ.ಧನಂಜಯ ಸರ್ಜಿ, ಬಲ್ಕಿಸ್ ಭಾನು, ಡಿಎಸ್.ಅರುಣ್, ಮಾಜಿ ಡಿಸಿಎಂ ಈಶ್ವರಪ್ಪ, ಎಂಎಡಿಬಿ ಅಧ್ಯಕ್ಷ ಮಂಜುನಾಥ್ ಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ. ಮೈಲಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, 12 ಕೋಟಿ ವೆಚ್ಚದಲ್ಲಿ ಕನಕದಾಸ ಸಮುದಾಯ ಭವನಕ್ಕೆ ತಗುಲಲಿದೆ. ಈಗಾಗಲೇ 3.5 ಕೋಟಿ ಹಣ ಸರ್ಕಾರ ಮತ್ತು ಇತರೆಡೆಯಿಂದ ಹಣ ಬಂದಿದೆ. ಸರ್ಜಿ ಕನ್ವೆಷನಲ್ ಹಾಲ್ ರೀತಿಯ ಸುತ್ತಳತೆಯಲ್ಲಿ ನಿರ್ಮಾಣವಾಗಲಿದೆ. ಎಲ್ಲಾ ಸಮುದಾಯದವರಿಗೂ ಕಾರಗಯಕ್ರಕಮಕ್ಕೆ ಆಗಮಿಸಲು ಕೋರಿದರು ಎಂದರು.
ಸಮುದಾಯ ಭವನದಿಂದ ವಿದ್ಯಾರ್ಥಿಗಳಿಗೆ ವಂಚನೆಯಾಗುವುದಿಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್ ಪ್ರಸನ್ನ ಕುಮಾರ್ ಹಾಸ್ಟೆಲ್ ಗೆ ಬೇಡಿಕೆ ಕಡಿಮೆಯಾಗಿದೆ. ಜಾಗ ಉಳಿಸಿಕೊಂಡು ಸಮುದಾಯ ಕಟ್ಟಲಾಗುತ್ತಿದೆ. ಮೊದಲು ಹಾಸ್ಟೆಲ್ ನಲ್ಲಿ 300-400 ಜನ ಇದ್ದ ವಿದ್ಯಾರ್ಥಿಗಳು ಕೊನೆಯಲ್ಲಿ 12 ಜನಕ್ಕೆ ಉಳಿಯುವಂತಾಯಿತು. ಹಾಗಾಗಿ ಜಾಗ ಉಳಿಸಿಕೊಂಡು ಶೈಕ್ಷಣಿಕ ಉದ್ದೇಶಕ್ಕೂ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮರಿಯಪ್ಪ, ಹೆಚ್ ಪಾಲಾಕ್ಷಿ, ಮಾಲ್ತೇಶ್, ಮಾಜಿ ಪಾಲಿಕೆ ಸದಸ್ಯ ಪ್ರಭು, ಶರತ್ ಮರಿಯಪ್ಪ, ರಮೇಶ್ ಇಕ್ಕೇರಿ, ರಾಮಕೃಷ್ಣ ಮೂಡ್ಲು, ಮೊದಲಾದವರು ಉಪಸ್ಥಿತರಿದ್ದರು.