ಸುದ್ದಿಲೈವ್/ಶಿವಮೊಗ್ಗ
ದೀಪಾವಳಿಯ ಬೋನಸ್ ಹಣವನ್ನ ಪಡೆದು ಮನೆಗೆ ಹೋಗುವ ವೇಳೆ ನಾಲ್ವರು ಅಪರಿಚಿತರು ಬಂದು ಯುವಕನ ಜೇಬಿಗೆ ಕೈ ಹಾಕಿ ಹಣಕಿತ್ತುಕೊಂಡು ಹೋದ ಘಟನೆ ಪುರಲೆಯಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ನಲ್ಲಿರುವ ಎಸ್. ವಿ. ಹೂವಿನ ಮಂಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ 35 ವರ್ಷದ ವ್ಯಕ್ತಿಗೆ ಹೂವಿನ ಅಂಗಡಿಯ ಮಾಲೀಕರು ದೀಪಾವಳಿ ಹಬ್ಬದಲ್ಲಿ ಕೆಲಸ ಮಾಡಿದ ಕೂಲಿ ಬಾಬ್ತಾದ 10800/- ರೂಗಳನ್ನು ಕೊಟ್ಟಿದ್ದರು.
ಹಣ ಪಡೆದು ರಾತ್ರಿ 10-30 ಕ್ಕೆ ಅಂಗಡಿ ಬಾಗಿಲ ಬೀಗ ಹಾಕಿಕೊಂಡು ಬಜಾಜ್ ಡಿಸ್ಕವರಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನ ಪುರಲೆ ಗ್ರಾಮ ಕೆರೆ ಏರಿಯ ಮೇಲಿರುವ ಆಲದ ಮರದ ಬಳಿಯಲ್ಲಿ ಅಪರಿಚಿತರಿಬ್ವರು ಹೋಗುತ್ತಿದ್ದ ಬೈಕನ್ನ ಅಡ್ಡಗಟ್ಟಿ ನಿಲಿಸಿದ್ದಾರೆ.
ಕೊಡಲೇ ಇನ್ನಿಬ್ಬರು ಅಲದ ಮರದ ಕಡೆಯಿಂದ ಬಂದವರು 35 ವರ್ಷದ ವ್ಯಕ್ತಿಯ ಶರ್ಟ್ ಜೇಬಿಗೆ ಕೈ ಹಾಕಿ ಬಲವಂತದಿಂದ ಜೇಬಿನಲ್ಲಿದ್ದ 10800/- ಹಣವನ್ನು ಕಿತ್ತು ಕೊಡಿದ್ದಾರೆ. ಇನ್ನೇನಿದೆ ತೆಗಿ ಎಂದು ಜೋರು ಮಾಡುತ್ತಿದ್ದಂತೆ ವ್ಯಕ್ತಿ ಬೈಕಿನ ಸಹಾಯದಿಂದ ಸ್ಥಳದಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದಾರೆ.
ಈ ಪುರಲೆ ರಸ್ತೆ ಹೈವೆ ರಸ್ತೆಯಾದುದರಿಂದ ಉದ್ದೇಶ ಪುರಕವಾಗಿ ಈ ವ್ಯಕ್ತಿಯನ್ನೇ ಟಾರ್ಗೆಟ್ ಮಾಡಿ ಹಣ ಕಿತ್ತುಕೊಢು ಹೋದ ಘಟನೆ ಕುತೂಹಲ ಮೂಡಿಸಿದೆ. ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಹಣ ಕಿತ್ತುಕೊಂಡು ಹೋದ ಅರಿಚಿತ 4 ಜನರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.