ಮೆಗ್ಗಾನ್ ನಲ್ಲಿ ನಾಪತ್ತೆಯಾದ ವಾಹನ ಪತ್ತೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ-ಮೂವರು ಅರೆಸ್ಟ್!

 


ಸುದ್ದಿಲೈವ್/ಶಿವಮೊಗ್ಗ

ಬೈಕ್ ಕಳ್ಳತನವಾದರೆ ಕೆಲವರಿಗೆ ವರ್ಷಾನುಗಟ್ಟಲೆ ಆದರೂ ಪತ್ತೆಯಾಗೊಲ್ಲ. ಕೆಲವರ ಅದೃಷ್ಟವೋ ಏನೋ ದೂರು ಕೊಡದೇ ಇದ್ದರೂ ವಾಹನ ಪತ್ತೆಯಾಗುತ್ತೆ. ಪತ್ತೆಯಾಗದುವದಷ್ಟೇ ಅಲ್ಲ, ಆರೋಪಿಗಳು ಪತ್ತೆಯಾಗಿದ್ದಾರೆ.

ಇಂತಹ ಪ್ರಕರಣಗಳು ಅಪರೂಪದಲ್ಲಿ ಅಪರೂಪಗಳು, ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ರಂಗನಾಥ ಪಿ ಎಂಬುವರು ಮಾ.21 ರಂದು ಕೆಎ 14 ಇಎನ್ 9279 ಕ್ರಮ ಸಂಖ್ಯೆಯ ಹೀರೋ ಇಗ್ನೇಟರ್ ವಾಹನದಲ್ಲಿ ಮೆಗ್ಗಾನ್ ಗೆ ಬಂದು ತಮ್ಮ ಸಂಬಂಧಿಕರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು.

ಮೆಗ್ಗಾನ್ ಹತ್ತಿರ ಎಲ್ಲರೂ ವಾಹನ ನಿಲ್ಲಿಸುವ ಜಾಗದಲ್ಲಿ ವಾಹನ ನಿಲ್ಲಿಸಿ ಆರೋಗ್ಯ ವಿಚಾರಿಸಿಕೊಂಡು ಬಂದ ರಂಗನಾಥ್ ಗೆ ಗಾಬರಿಯಾಗಿತ್ತು‌. ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಇರಲಿಲ್ಲ. ರಂಗನಾಥ್ ವಾಟರ್ ಪ್ರೂಫಿಂಗ್ ಮಾಡುವುದರಿಂದ ಕೆಲಸ ಮೇರೆಗೆ ತೀರ್ಥಹಳ್ಳಿಗೆ ಹೋಗಿದ್ದರು.

ನ.26 ರಂದು ಚಿಕ್ಕಮಗಳೂರಿನ‌ ಪೊಲೀಸರು ಕರೆ ಮಾಡಿ ರಂಗನಾಥ್ ಗೆ ಠಾಣೆಗೆ ಬರಲು ತಿಳಿಸಿದ್ದಾರೆ. ಪತ್ತೆಯಾದ ದ್ವಿಚಕ್ರವಾಹನ ನಿಮ್ಮದೋ ಅಲ್ಲವೋ ಎಂಬುದನ್ನ ಪರಿಶೀಲಿಸುವಂತೆ ತಿಳಿಸಿದ್ದರು. ಅದರಂತೆ ಠಾಣೆಗೆ ಹೋದ ರಂಗನಾಥ್ ಇಂಜಿನ್ ಮತ್ತು ಚಾಸಿ ನಂಬರ್ ಪರಿಶೀಲಿಸಿ ಈ ವಾಹನ ನನ್ನದೆ ಎಂದಿದ್ದರು.

ಪತ್ತೆಯಾಗಿದ್ದು ಹೇಗೆ?
ಮೂಲತಃ ಹೊಳೆಹೊನ್ನೂರು ನಿವಾಸಿ ಮತ್ತು ಚಿಕ್ಕಮಗಳೂರಿನ  ಹಾಲಿ ನಿವಾಸಿ ಖಯ್ಯೂಮ್ ಪಾಶ, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೊಲ್ಲೇನ ಹಳ್ಳಿ ನಿವಾಸಿ ನವೀನ್ ಕುಮಾರ್ ಎಂಟಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಂಪಾಪುರ ಗ್ರಾಮದ ನಿವಾಸಿ ದಿನೇಶ್ ಮೂವರು ಸೇರಿ ಈ ವಾಹನವನ್ನ ಮೆಗ್ಗಾನ್ ನಿಂದ ಕಳವು ಮಾಡಿ ಚಿಕ್ಕಮಗಳೂರಿನ ಕಡೂರಿನ ಸರಸ್ವತಿ ಗ್ರಾಮದಲ್ಲಿ ನಿಲ್ಲಿಸಿ ಹೋಗಿದ್ದರು.

ಇವರನ್ನ ಜೂನ್ ತಿಂಗಳ ಕೊನೆಯಲ್ಲಿ ಚಿಕ್ಕಮಗಳೂರಿನ ಪೊಲೀಸರು ಬಂಧಿಸಿದ್ದಾರೆ.   ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೆಗ್ಗಾನ್ ನಲ್ಲಿ ನಾಪತ್ತೆಯಾದ ದ್ವಿಚಕ್ರವಾಹನ‌ ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close