ಮಹಿಳಾ ಅಧಿಕಾರಿಯ ಆರೋಗ್ಯದಲ್ಲಿ ಏರುಪೇರು, ಕರ್ತವ್ಯ ಮೆರೆದ ಡಾ.ಸರ್ಜಿ


 


ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಘಟನೆ ನಡೆದಿದೆ. 

ಮಹಿಳಾ ಅಧಿಕಾರಗಳ ದಿಡೀರ್ ಅನಾರೋಗ್ಯವು ಸಭೆಯಲ್ಲಿ ಕೊಂಚ ಗಾಬರಿ ಹುಟ್ಟಿಸಿದ್ದು ನಿಜ, ಆದರೆ  ಸಭೆಯಲ್ಲಿದ್ದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಹಾಗೂ ಮೆಗ್ಗಾನ್ ಅಧೀಕ್ಷಕ  ಡಾ ತಿಮ್ಮಪ್ಪ ನೆರವಿಗೆ ಧಾವಿಸಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಜಿಪಂ ಸಭೆ ಇಂದು ಸಭೆ 1 ಗಂಟೆಯ ನಂತರ ಆರಂಭವಾಗಿದೆ. ಬೆಳಿಗ್ಗೆಯಿಂದಲೂ ಕಾಯುತ್ತಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಭೆಯ ನಡುವೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಸಭೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಡಿಸಿ ಗುರುದತ್ತ ಹೆಗಡೆ, ಮೊದಲಾದವರು ಅವರ ಬಳಿ ದಾವಿಸಿದ್ದಾರೆ. ಸಭೆಯ ಮುಂಭಾಗದಲ್ಲಿದ್ದ   ಡಾ.ಧಜಯ ಸರ್ಜಿ  ಆರೈಕೆ ಮಾಡಿ ಸಭೆಯಲ್ಲಿಯೇ ಕೂರಲು ಸೂಚಿಸುವ ಮೂಲಕ ವೈದ್ಯರ ಕರ್ತವ್ಯ ಮೆರೆದಿದ್ದಾರೆ. 

ನಂತರ ಸುಧಾರಿಸಿಕೊಂಡ ಅಧಿಕಾರಿಗಳನ್ನ ಹೊರಗೆ ಕರೆದೊಯ್ಯಲಾಯಿತು. ನಂತರ ಡಿಸಿಯವರು ಅಧಿಕಾರಿಗಳ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸುವ ಮೂಲಕ ಸಭೆಯನ್ನ‌ ಮುನ್ನಡೆಸಿದ್ದಾರೆ. ಇಲ್ಲೂ ಸಹ ಮಾಧ್ಯಮಗಳಿಗೆ ಫೊಟೊ ವಿಡಿಯೋ ತೆಗೆಯಲು ನಿಯಂತ್ರಿಸಲಾಯಿತು. ಆದರೆ ಮಹಿಳಾ ಅಧಿಕಾರಿಯ ಆರೋಗ್ಯದ ಕಾಳಜಿ ಹಿನ್ನಲೆಯಲ್ಲಿ ಸುದ್ದಿಲೈವ್ ಸುದ್ದಿ ಮಾಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close