ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಬಾರಂದೂರು ಗ್ರಾಮ ಪಂಚಾಯಿತಿಯ 1 ನೇ ಡಿವಿಜನ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.
ಕಿರಣ್ ಕುಮಾರ್ ಜಿ ಅವರು ಅತಿ ಕಿರಿಯ ಗ್ರಾಮಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ತಮ್ಮ ಎದುರಾಳಿ ಜೆಡಿಎಸ್ ಅಭ್ಯರ್ಥಿ ತೀರ್ಥಕುಮಾರ್ ಅವರ ವಿರುದ್ಧ 217 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಕಿರಣ್ ಕುಮಾರ್ ಜಿ ಅವರಿಗೆ 481 ಮತಗಳು ಲಭಿಸಿದ್ದು, ತೀರ್ಥಕುಮಾರ್ ಅವರಿಗೆ 264 ಮತಗಳನ್ನ ಪಡೆದಿದ್ದಾರೆ. ಬಿಜೆಪಿಯ ಮಧು ಜಯರಾಂ ಅವರು 31 ಮತಗಳನ್ನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ನ.13 ರಂದು ಬಾರಂದೂರು ಗ್ರಾಮ ಪಂಚಾಯಿತಿ ಉಪ ಚುನಾವಣೆ ನಡೆದಿತ್ತು. ನಿನ್ನೆ ನ.26 ರಂದು ಮತ ಎಣಿಕೆ ನಡೆದಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.