ಸುದ್ದಿಲೈವ್/ಶಿವಮೊಗ್ಗ
ವೀರಗಾರನ ಬೈರನಕೊಪ್ಪದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದ ನಂತರ ತಮಡಿಹಳ್ಳಿ, ಪುರದಾಳು, ಸಿರಿಗೆರೆ, ಮಲೆಶಂಕರ, ಬೆನವಳ್ಳಿ, ಆಲದೇವರ ಹೊಸೂರು ಭಾಘಳಲ್ಲಿ ತಣ್ಣಗಿದ್ದ ಆನೆಗಳ ಹಾವಳಿ ಮುಂದು ವರೆದಿದೆ.
ಶೆಟ್ಟಿಹಳ್ಳಿ ಅಭ್ಯಯಾರಣ್ಯ ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲೂಕಿನ ಹಲವು ಗ್ರಾಮದಲ್ಲಿ ಮೊನ್ನೆ ರಾತ್ರಿ ಕಾಡಾನೆಗಳು ದಾಳಿ ಮಾಡಿದ್ದು, ಬೆಳೆ ನಾಶ ಮಾಡಿವೆ. ತಾಲೂಕಿನ ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು, ಅಡಿಕೆ ಗಿಡಗಳನ್ನು ಮುರಿದು, ಕಿತ್ತು ಬಿಸಾಡಿವೆ.
2-3 ಆನೆಗಳು ಕಾಣಿಸಿಕೊಂಡು, ಜೋಳ ಹಾಗೂ ಭತ್ತದ ಗದ್ದೆಯಲ್ಲಿ ಹಗಲು ವೇಳೆಯಲ್ಲಿ ಆನೆಗಳು ಓಡಾಡುವುದನ್ನು ರೈತರು ವಿಡಿಯೋ ಸಹ ಮಾಡಿದ್ದಾರೆ. ಆಡಿನಕೊಟ್ಟಿಗೆಯ ಗಿರೀಶ್, ಹೊನ್ನಪ್ಪ, ಸಂತೋಷ್ ಎಂಬುವರ ಜಮೀನಿನಲ್ಲಿ ಆನೆಗಳು ದಾಳಿ ಮಾಡಿದ್ದು, ಬೆಳೆಯನ್ನು ಹಾಳು ಮಾಡಿವೆ.
ಇನ್ನು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ರೈತರು, ಅರಣ್ಯ ಇಲಾಖೆಗೆ ದೂರು ಸಲ್ಲಿಸುತ್ತಿದ್ದರೂ, ಇಲಾಖೆಯು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಮೃತಪಟ್ಟಿದ್ದರೂ, ಸಮಸ್ಯೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರೈತರು ದೂರಿದ್ದಾರೆ.
ಲಯನ್ ಸಫಾರಿಯ ಪಕ್ಕದಲ್ಲಿರುವ ಬೆನವಳ್ಳಿಯಲ್ಲಿ ಎರಡು ಕಾಡಾನೆಗಳು ಪ್ರತ್ಯೇಕ್ಷವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಬೆನವಳ್ಳಿಯ ಅಡಿಕೆ ತೋಟದಲ್ಲಿ ಕಾಡಾನೆಗಳು ಪತ್ರಕ್ಷವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವನ್ಯ ಜೀವಿ ಇಲಾಖೆಯ ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ್, ಆಡಗೋಡಿಯಿಂದ ಈಗಾಗಲೇ ಕಾಡಾನೆಗಳ ಡ್ರೈವ್ ಆರಂಭವಾಗಿದೆ.
ಡ್ರೈವ್ ಗಾಗಿ ಈ ಬಾರಿ ಸಕ್ರಬೈಲಿನ ಆನೆಗಳನ್ನ ಬಖಸಲಾಗಿಲ್ಲ. ಬದಲಿಗೆ ಸಿಬ್ವಂದಿಗಳಿಂದಲೇ ಡ್ರಂ ಬಾರಿಸಿಕೊಂಡು ನಡೆದಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.