ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮಾಜಿ ಕಾರ್ಪರೇಟರ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ವಿಷ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆ ಉಸಿರು ಎಳೆದಿದ್ದಾರೆ.
ಬಿಜೆಪಿಯ ಮಾಜಿ ಕಾರ್ಪರೇಟರ್ ಲಕ್ಷ್ಮಣ್ ಆರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಳದ ಪಾರ್ಕ್ ವೊಂದರಲ್ಲಿ ವಿಷಸೇವಿಸಿದ್ದ ಲಕ್ಷ್ಮಣ್ ನಂತರ ಒದ್ದಾಡಲಿಕ್ಕೆ ಶುರುಮಾಡಿದ್ದಾರೆ. ನಂತರ ಖುದ್ದಾಗಿ ಇವರೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ.
ಯಾರೂ ಇಲ್ಲದ ಕಾರಣ ಅಂಬ್ಯುಲೆನ್ಸ್ ಅವರೇ ಫೊಟೊ ತೆಗೆದು ವಾಟ್ಸಪ್ ಗ್ರೂಪ್ ಗೆ ಹಾಕಿದ್ದಾರೆ. ಇದನ್ನ ಪೊಲೀಸ್ ಅಧಿಕಾರಿಯೊಬ್ಬರು ಗುರುತಿಸಿ ನಂತರ ಇವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗೆ ರಾಷ್ಟ್ರೀಯ ಪಕ್ಷದಲ್ಲಿ ಕಾರ್ಪರೇಟರ್ ಆಗಿದ್ದ ವ್ಯಕ್ತಿಯೋರ್ವ ದುರಂತ ಅಂತ್ಯ ಕಂಡಿದ್ದಾರೆ.
ಲಕ್ಷ್ಮಣ್ ಹೊಸಮನೆ ನಿವಾಸಿಯಾಗಿದ್ದಾರೆ. ರೌಂಡ್ ಅಪ್ ನ್ನ ಪಾರ್ಸಲ್ ಪಡೆದುಕೊಂಡು ಬಂದು ನಿನ್ನೆ ಗೋಪಾಳದ ಪಾರ್ಕ್ ಗೆ ಹೋಗಿ ವಿಷ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ. ಹಣಕಾಸಿನ ವಿಚಾರದಲ್ಲಿ ಲಕ್ಷ್ಮಣ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.