ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಗೋವುಗಳನ್ನ ಸಾಗಿಸಿದ ಪ್ರಕರಣ, ಆರೋಪಿಗಳ ಬಂಧನ


ಸುದ್ದಿಲೈವ್/ಶಿವಮೊಗ್ಗ

ಸಾಗರ ಪೇಟೆಯಲ್ಲಿ ಗೋವುಗಳ ಕಳ್ಳತನವೊಂದು ಮೇ ತಿಂಗಳಲ್ಲಿ ನಡೆದಿತ್ತು.  ಹೈಫೈ ವಾಹನದಲ್ಲಿ ಹಸುಗಳನ್ನ ಕಳ್ಳತನ ಮಾಡಿ ಕಸಾಯಿ ಖಾನೆಗೆ ತೆಗೆದುಕೊಂಡು ಸಾಗಿಸಿದ್ದ ಪ್ರಕರಣವನ್ನ ಪೊಲೀಸರು ಬೇಧಿಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.  ಕೃತ್ಯಕ್ಕೆ ಉಪಯೋಗಿಸಿದ 10,00,000/ರೂ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರ್ ಜಪ್ತಿಮಾಡಲಾಗಿದೆ. 

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎನ್ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ ಈ ವರ್ಷದ ಮೇ27 ರಂದು ದನ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿತ್ತು, ಕಳ್ಳರ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. 

ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮ್ ರೆಡ್ಡಿ,  ಕಾರಿಯಪ್ರವರು ದನ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ ಸಾಗರದ ಡಿವೈಎಸ್ಪಿ ಗೋಪಾಲ ಕೃಷ್ಣ ಟಿ ನಾಯಕ್ ಮಾರ್ಗದರ್ಶನದಲ್ಲಿ ಕಾರ್ಗಲ್ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ, 

ಪಿಎಸ್‌ಐರವರುಗಳಾದ,  ಯಲ್ಲಪ್ಪ ಟಿ ಹಿರೇಗಣ್ಣನ್ನನವರ್‌, ಶ್ರೀ ನಾಗರಾಜ ಟಿ ಎಂ, ರವರ ನೇತೃತ್ವದಲ್ಲಿ ಸಾಗರಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಹೆಚ್.ಸಿ.66 ಶ್ರೀ ಸನಾವುಲ್ಲಾ, ಹೆಚ್.ಸಿ-299 ಶ್ರೀ ಶೇಕ್ ಫೈರೋಜ್, ಸಿಪಿಸಿ 1553 ವಿಕಾಸ್,ಸಿಪಿಸಿ- 1361 ಶ್ರೀ ರವಿಕುಮಾರ್ ಸಿಪಿಸಿ 1660 ಕೃಷ್ಣಮೂರ್ತಿ, ಸಿಪಿಸಿ-1691 ವಿಶ್ವನಾಥ, ರವರನ್ನು ಒಳಗೊಂಡ ತಂಡ ರಚನೆ ಮಾಡಲಾಗಿತ್ತು.  

ಪ್ರಕರಣಗಳಲ್ಲಿ ಆರೋಪಿಗಳಾದ 1) ಮೊಹಮ್ಮದ್ ಸಲ್ಮಾನ್ ತಂದೆ ಮೊಹಮ್ಮದ್ ಅಮ್ಜದ್(19)  ಗುಜರಿ ವ್ಯಾಪಾರ ಕೆಲಸ, ವಾಸ: ಮೆಹಬೂಬ್ ನಗರ 1ನೇ ತಿರುವು,ಬೈಪಾಸ್ ಹತ್ತಿರ ಶಿವಮೊಗ್ಗ ಟೌನ್ 2) ಮೊಹಮ್ಮದ್ ಶಾಹಿದ್ ತಂದೆ ಮೊಹಮ್ಮದ್ ಮುಶೀರ್, 25 ವರ್ಷ,ಮುಸ್ಲಿಂ ಜನಾಂಗ, ಸ್ಟಿಕರ್ ಕಟಿಂಗ್ ಕೆಲಸ,ವಾಸ: ವಾದಿಹುದಾ 2ನೇ ತಿರುವು,ಶಿವಮೊಗ್ಗ ಟೌನ್, ರವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಲಾಗಿದೆ.  

ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 10,00,000/ರೂ ಮೌಲ್ಯದ ಟಯೋಟಾ ಫಾರ್ಚುನರ್ ಕಾರನ್ನು ಅಮಾನತ್ತುಪಡಿಸಿಕೊಂಡು ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಲು ಯಶಸ್ವಿಯಾದ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close