ಸುದ್ದಿಲೈವ್/ಶಿವಮೊಗ್ಗ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರಿಶೀಲನಾ ಸಭೆಯು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ದರ ಪಟ್ಟಿ ಹಾಕುವ ಬಗ್ಗೆ, ತಾಯಿಯಂದಿರ ಮರಣದ ಸಂಖ್ಯೆ ಹೆಚ್ಚಳ, ನಕಲಿ ವೈದ್ಯರ ವಿರುದ್ಧದ ಕ್ರಮಕ್ಕೆ ಅಧಿಕಾರಿಗಳ ವೈಫಲ್ಯತೆ, ನೇಮಕಾತಿಗಳ ಬಗ್ಗೆ ಸಚಿವರು ಡಿಹೆಚ್ ಒಗೆ ಖಡಕ್ ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಯಲ್ಲಿ ದರ ಪಟ್ಟಿ ಹಾಕುವ ಕುರಿತಂತೆ ಯಾವ ಆಸ್ಪತ್ರೆಗಳು ಪ್ರವೇಶ ದ್ವಾರದ ರಿಸೆಪ್ಷನ್ ಹಾಲ್ ನಲ್ಲಿ ನೇತು ಹಾಕುತ್ತಿಲ್ಲ ಯಾಕೆ ಎಂದು ಡಿಹೆಚ್ ಒ ಡಾ.ನಟರಾಜ್ ಗೆ ಕೇಳಿದರು. ಇದಕ್ಕೆ ಸಮ್ಜಾಯಿಷಿ ನೀಡಲು ಮುಂದಾದ ಡಿಹೆಚ್ ಒ ಸಚಿವರು ಗರಂ ಆದರು, ಕೆಲವೊಂದು ಆಸ್ಪತ್ರೆಯಲ್ಲಿ ದರಫಲಕ ಹಾಕಲಾಗಿದೆ ಎಂದು ಡಿಹೆಚ್ ಒ ಸಮ್ಜಾಯಿಷಿ ನೀಡಲು ಮುಂದಾದಾಗ ಗರಂ ಆದ ಸಚಿವರು ಎಲ್ಲೂ ಕಡೆ ದರ ಫಲಕ ಹಾಕಿಲ್ಲ. ಎಲ್ಲಡೆ ನೋಟೀಸ್ ನೀಡಿ ಸ್ಪಾಟ್ ಗೆ ಹೋಗಿ ವಿಸಿಟ್ ಮಾಡಿ ದರಪಟ್ಟಿ ಹಾಕಲು ಖಡಕ್ ಸೂಚಿನೆ ನೀಡುವಂತೆ ಹೇಳಿದರು.
ನಂತರ ಡಿಹೆಚ್ ಒ ಮಾತನಾಡಿ, ಜಿಲ್ಲೆಯಲ್ಲಿ ಖಾಯಂ ಸಿಬ್ಬಂದಿಗಳ ಮಾಹಿತಿ ನೀಡಿ, ವೈದ್ಯರು 103 ಇರುವ ಕಡೆ 73 ಭರ್ತಿ ಇದೆ 30 ಖಾಲಿ ಇದ್ದು ಹೊರಗುತ್ತಿಗೆ ಮೇಲೆ ಪಡೆಯಲಾಗಿದೆ. ಚಂದ್ರಗುತ್ತಿ, ಸೊರಬ, ತಾಳಗುಂದ, ಸೊರಬ ಖಾಲಿಯಾಕೆ ಆಯಿತು? ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಸರಿಯಾದ ವೈದ್ಯರನ್ನ ನೇಮಿಸಿ, ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿ ಎಂದರು.
ತಜ್ಞ ವೈದ್ಯರ ಕೊರತೆ ಇದೆ. 33 ಜನ ಬೇಕಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು. ಜನವರಿಯಲ್ಲಿ ಖಾಲಿಯಿರುವನ್ನ ನೇಮಿಸಲಾಗುವುದು. ಶೇ.40 ರಷ್ಟು ನೇಮಕಾತಿಗಳನ್ನ ಹಂತಹಂತವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಸಚಿವರು ತಿಳಿಸಿದರು. ಎನ್ ಹೆಚ್ ಎಂ ನಿಂದ ಮತ್ತು ಪ್ರಕ್ಟೀಸ್ ನಿಂದ ಇಬ್ವರನ್ನ ನೇಮಿಸಿಕೊಳ್ಳಲು ಸಚಿವರು ತಿಳಿಸಿದರು. ಸೊರಬದ ಕಡೆಯಾರೂ ಮುಂದೆ ಬರ್ತಾ ಇಲ್ಲಾ ಎಂದು ಡಿಹೆಚ್ ಒ ತಿಳಿಸಿದರು.
ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಖಾಲಿ ಇದ್ದಾರೆ ಎಂದು ಡಿಹೆಚ್ ಒ ಸಭೆಗೆ ತಿಳಿಸಿದರು. ಈ ಎರಡು ಹುದ್ದೆಗಳಿಗೆ ರಾಜ್ಯದಲ್ಲಿಯೇ ಸಮಸ್ಯೆ ಎಂದು ಸಚಿವರು ತಿಳಿಸಿದರು. ಆಶಾ ಕಾರ್ಯಕರ್ತರು ಸಹ 33 ಜನ ಖಾಲಿ ಇದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಸಿಬ್ಬಂದಿಯಲ್ಲಿ ಕಡಿಮೆ ವೈದ್ಯಾದಿಕಾರಿಗಳು ಬರ್ತಾ ಇಲ್ಲ. ತಜ್ಞವೈದ್ಯರು ಸಹ ಖಾಲಿ ಇರುವ ಕಡೆ ಬಂದಿಲ್ಲ ಎಂದು ಡಿಹೆಚ್ ಒ ತಿಳಿಸಿದರು.
ಜಿಲ್ಲೆಯಲ್ಲಿ ಕೋಣಂದೂರು ಮತ್ತು ಚಂದ್ರಗುತ್ತಿ ಆಸ್ಪತ್ರೆಯನ್ನ ಪಿಹೆಚ್ ಸಿ ಯಿಂದ ಸಿಹೆಚ್ ಸಿಗೆ, ಭದ್ರಾವತಿ ಮತ್ತು ಸಾಗರ ತಾಲೂಕ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಮೆಗ್ಗಾನ್ ಆಸ್ಪತ್ರೆಗೆ ಡಿಎಸ್ ಗೆ ಕೇಳಿದ ಸಚಿವರು ಮೆಗ್ಗಾನ್ ಸರಿಯಿದ್ದರೆ ವೆನ್ ಲಾಕ್ ಗೆ ಯಾಕೆ ಬರ್ತಾರೆ ಎಂದು ಗರಂ ಆದರು. ಕೆಲ ಸಿಬ್ಬಂದಿಗಳ ಕೊರತೆ ಇದೆ. ಆಂಕೋಲಜಿ ಇಲ್ಲ, ಕೀಮೋ ಥೆರಪಿ ಇಲ್ಲ ಎಂದು ಅಧಿಕ್ಷಕ ಡಾ.ತಿಮ್ಮಪ್ಪ ಮತ್ತು ಡಿಎಸ್ ಸಿದ್ದನಗೌಡ ವಿವರಣೆ ನೀಡಿದರು.
ತಾಯಂದಿರ ಮರಣಗಳು ಶಿವಮೊಗ್ಗದಲ್ಲಿ ಇದೆ. ಯಾಕೆ ಹೆಚ್ಚಿಗೆ ಎಂದು ಕೇಳಿದರು. ಇದನ್ನ ಸರಿಪಡಿಸಬೇಕು. ಇದರ ಪ್ರಮಾಣ ಕಡಿಮೆಯಾಗಬೇಕು. 12 ಜನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಂದಿರು ಸತ್ತಿದ್ದಾರೆ. ಡಿಸಿ ಮಾತಾನಾಡಿ ಚಿಕ್ಕಮಗಳೂರು ದಾವಣಗೆರೆ ಜಿಲ್ಲೆ ಹೆಚ್ಚಾಗಿ ಬರ್ತಾರೆ, ನಮ್ಮ ಜಿಲ್ಲೆ ಕಡಿಮೆ ಇದೆ. ನಮ್ಮಬಜಿಲ್ಲೆಯಿಂದ 6 ಇದ್ದರೆ ಹೊರಗಡೆ ಜಿಲ್ಲೆಯಿಂದ 8 ಜನ ಸತ್ತಿದ್ದಾರೆ ಎಂದರು.
ಹೊರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಜೊತೆ ಮಾತನಾಡಲು ಸೂಚಿಸಿದರು. ಸಿಸರಿಯನ್ ಹೆರಿಗೆಗಳು ಜಿಲ್ಲೆಯಲ್ಲಿ ಒಟ್ಟು 3713 ಹೆರಿಗೆ ಆದರೆ ಇದರಲ್ಲಿ 2399 ಆಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಆದರೆ ಸರಿಯಾಗಿ ನಡೆಸುತ್ತಿಲ್ಲವೆಂದು, ಅದಕ್ಕೆ ಕಡಿವಾಣ ಹಾಕಬೇಕು. ಖಾಸಗಿ ಆಸ್ಪತ್ರೆಗೆ ಕರೆಯಿಸಿ ಸೂಚನೆ ನೀಡಿ. ಸಹಜ ಹೆರಿಗೆಯಾಗುವಂತೆ ಕ್ರಮ ಕೈಗೊಳ್ಳಿ ಎಂದರು.
ಇದನ್ನ ಆಸಕ್ತಿ ವಹಿಸಿ ನೀವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕ್ರಿಯೇಟಿವ್ ಆಗಿ ವರ್ಕ್ ಮಾಡಬೇಕು. ಡಾಕ್ಟರ್ ಕರ್ತವ್ಯದಲ್ಲಿ ಸಹಾನುಭೂತಿ ಇರಬೇಕು. ಜನರ ಆರೋಗ್ಯ ಹೇಗೆ ನೋಡಿಕೊಳ್ಳಬೇಕು ಎಂದು ಗಮನ ಹರಿಸಿ. ಸಮಸ್ಯೆಗಳು ಎಲ್ಲೆಡೆ ಸಹಜ ಎಂದು ಬುದ್ದಿವಾದ ಹೇಳಿದರು.
ಡೆಂಗ್ಯೂ ಪ್ರಕರಣದಲ್ಲಿ ಇಬ್ಬರು ಸಾವಾಗಿದೆ. ನಕಲಿ ವೈದ್ಯರ ಬಗ್ಗೆ ಕ್ರಮ ಕೈಕೊಂಡಿದ್ದೀರಾ ಎಂದು ಸಚಿವರು ಕೇಳಿದರು. ನಕಲಿ ವೈದ್ಯರು ಆಯುರ್ವೇದಿಕ್ ವೈದ್ಯರ ಬಗ್ಗೆ ಕ್ರಮಜರುಗಿಸಿಲ್ಲವೇಕೆ ಎಂದು ಡಿಹೆಚ್ ಒಗೆ ಕೇಳಿದರು. ಅದರ ಬಗ್ಗೆ ಆಕ್ಷನ್ ತೆಗೆದುಕೊಳ್ಳಲು ಸಚಿವರು ಸೂಚಿಸಿದರು. ಯಾವ ಪ್ರಕರಣಗಳು ದಾಖಲಾಗಿಲ್ಲ ಎಂದರೆ ಯಾವ ಕ್ರಮವೂ ಆಗಿಲ್ಲ ಎಂದು ಸಭೆಗೆ ಸಚಿವರು ಕೇಳಿದರು.