ಸುದ್ದಿಲೈವ್/ಶಿವಮೊಗ್ಗ
ಆಸ್ತಿ ವಿಚಾರದಲ್ಲಿ ಯುವಕನಿಗೆ ಚಾಕು ಇರಿಯಲಾಗಿದೆ. ಚಾಕು ಇರಿತಕ್ಕೊಳಗಾದ ಯುವಕನ ಚಿಕ್ಕಪ್ಪರಾದ ಕುಮಾರ ಯಾನೆ ಕರಾಟೆ ಕುಮಾರ, ಪತ್ನಿ ಶ್ರೀಲೇಖಾ ಹಾಗೂ ಮಗಳ ವಿರುದ್ಧ ಎಫ್ಐಆರ್ ಆಗಿದೆ. ಇರಿತಕ್ಕೊಳಗಾದ ಯುವಕನನ್ನ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ತಿ ವಿಚಾರದಲ್ಲಿ 19 ವರ್ಷದ ಯುವಕ ಶ್ರೀರಂಗ ಎಂಬಾತನು ಭಾನುವಾರ ರಾತ್ರಿ 10-30 ಕ್ಕೆ ತಂದೆ ಶಿವಮೂರ್ತಿ ಹಾಗೂ ತಂದೆಯ ಸ್ನೇಹಿತನಾದ ಜಾನ್ ಪಾಲ್ @ ಜಾನಿ ರವರೊಂದಿಗೆ ಎಲ್,ಎಲ್,ಆರ್ ರಸ್ತೆಯ ಗೌರವ ಲಾಡ್ಜ್, ಎದುರಿನ ರಸ್ತೆಯಬದಿಯಲ್ಲಿ ನಿಂತುಕೊಂಡು ಮಾತನಾಡುತ್ತಿದ್ದನು.
ಇದೇ ವೇಳೆ ಸ್ಥಳಕ್ಕೆ ಬಂದ ತಂದೆಯ ಸಹೋದರ ಕುಮಾರ್ @ ಕರಾಟೆ ಕುಮಾರ ಮತ್ತು ಅವರ ಪತ್ನಿ ಶ್ರೀಲೇಖಾ ಹಾಗೂ ಮಗಳು ಬಂದು, ಪಿತ್ರಾರ್ಜಿತ ಆಸ್ತಿಯ ಪಾಲಿನ ವಿಚಾರವಾಗಿ ಜಗಳ ತೆಗೆದಿದ್ದಾರೆ.
ತಂದೆಯವರು ಆಸ್ತಿಯ ವಿಚಾರವನ್ನು ಸದ್ಯ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಅದರ ತೀರ್ಪಿನ ನಂತರ ಸರಿ ಮಾಡಿಕೊಳ್ಳೋಣ ಎಂದಿದ್ದಾರೆ. ಆಗ ಚಿಕ್ಕಪ್ಪನಾದ ಕುಮಾರ್ ನನಗೆ ಸೇರಬೇಕಾದ ಪಾಲನ್ನು ಕೇಳಿದರೆ ಕೊಡಲು ಸತಾಯಿಸುತ್ತಿದ್ದೀರಾ ಎಂದು ಹೇಳಿ ಶಿವಮುರ್ತಿ ಅವರಿಗೆ ಯಾವುದೋ ಒಂದು ಹರಿತವಾದ ಆಯುಧದಿಂದ (ಚಾಕು) ಚುಚ್ಚಲು ಮುಂದಾಗಿದ್ದಾನೆ.
ಅಪ್ಪನಿಗೆ ಏನೋ ಮಾಡ್ತಾ ಇದ್ದಾನೆ ಎಂದು ಅಡ್ಡ ಬಂದ ಮಗ ಶ್ರೀರಂಗನಿಗೆ ಚಾಕು ಇರಿತವಾಗಿದೆ. ಬಲಭಾಗದ ಹಿಂಭಾಗದ ಕಿಬೊಟ್ಟೆಯ ಹತ್ತಿರ ಚಾಕು ಇರಿಯಲಾಗಿದೆ. ತಂದೆ ಶಿವಮೂರ್ತಿ ಅವರ ಮೇಲೂ ಕುಮಾರ್ ಹಲ್ಲೆ ಮಾಡಿ ಎದೆಗೆ ಮುಷ್ಟಿಯಿಂದ ಗುದ್ದಿದ್ದಾನೆ. ಅವಾಚ್ಯ ಶಬ್ದಗಳಿಂದ ಬೈದು ಇದೇ ರೀತಿ ನಡೆದುಕೊಂಡರೆ ಮುಂದೆ ಇನ್ನು ಹೊಡೆಯುತ್ತೇನೆ ಎಂದು ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ.
ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅವರ ಮಗಳು ಚಾಕು ತೋರಿಸಿ ಗತಿ ಕಾಣಿಸುವುದಾಗಿ ಹೆಸರಿಸಿರುವುದಾಗಿ ದೂರಿನಲ್ಲಿ ದೂರಲಾಗಿದೆ. ತಂದೆಯ ಸ್ನೇಹಿತ ಜಾನ್ ಪಾಲ್ ರವರು ಮತ್ತು ಅಲ್ಲಿದ್ದ ಜನ ಗಲಾಟೆ ಬಿಡಿಸಿ ಶ್ರೀರಂಗ ಮತ್ತು ತಂದೆ ಶಿವಮೂರ್ತಿಯವರನ್ನ ಮೊದಲು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಕಡೆದುಕೊಂಡು ಹೋಗಿದ್ದಾರೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಸರ್ಜಿಸೂಪರ್ ಸ್ಪೆಷಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಕು ಇರಿತಕ್ಕೊಳಗಾದ ಯುವಕನ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.