ಜೆಡಿಎಸ್ ಪಕ್ಷ‌ ಫೀನಿಕ್ಸ್ ಪಕ್ಷಿ ಇದ್ದಹಾಗೆ-ಶಾಸಕಿ ಶಾರದಾ ಪೂರ್ಯನಾಯ್ಕ್



ಸುದ್ದಿಲೈವ್/ಶಿವಮೊಗ್ಗ

ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುತ್ತೇನೆ ಎನ್ನುವ ಶಾಸಕ ಯೋಗೇಶ್ವರ್ ಹೇಳಿಕೆಗೆ  ಶಿವಮೊಗ್ಗದಲ್ಲಿ ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ. ಯೊಗೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕಿ, ಅವರು ಯಾರು? ನಮ್ಮನು ಏನು ಕೊಂಡುಕೊಂಡಿದ್ದೀರಾ? ಎಂದು ಹೇಳಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ನಾಯಕರನ್ನ ನಂಬಿಕೊಂಡು ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೀವಾ ನಾವು? ಅವರನ್ನ ನಂಬಿಕೊಂಡು ನಾವು ರಾಜಕಾರಣ ಮಾಡುತ್ತಿದ್ದೇವಾ? ಅವರ್ಯಾರು ಎಲ್ಲರನ್ನ ಕೊಂಡುಕೊಳ್ಳುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಲು ಎಂದು ಪ್ರಶ್ನಿಸಿದ್ದಾರೆ. 

ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಮಗೆ ಟಾಸ್ಕ್  ಕೊಟ್ಟರೆ ಅವರನ್ನು ಸೆಳೆಯುತ್ತೇವೆ, ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು. ಅವರಿಗೆ ಇದನ್ನೇ ಮಾಡಿ ಅಭ್ಯಾಸ ಹಾಗಾಗಿ ಅವರು ಇದನ್ನೇ ಹೇಳುತ್ತಾರೆ ಎಂದು ಆರೋಪಿಸಿದರು. 

ಎಲ್ಲಿ ಹೋದರೂ ಅದನ್ನೇ ನೆನಪಿಸಿಕೊಳ್ಳುತ್ತಾರೆ. ಅಹಂ ಇರುತ್ತಲ್ಲ ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಯೋಗೇಶ್ವರ್ ಯಾರು ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು?ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಯೋಗೇಶ್ವರ್ ಅವರು ಅವರ ಪಾರ್ಟಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ನಿಂತು ಗೆದ್ದಿರುವರು.ಅವರು ನಮ್ಮ ಬಗ್ಗೆ ಏನು ಹೇಳ್ತಾರೆ? ಎಂದು ಪ್ರಶ್ನಿಸಿದರು.

ಎಲ್ಲರನ್ನ ಅವರದೇ ಲೆಕ್ಕದಲ್ಲಿ ತೆಗೆದುಕೊಂಡು ಹೋದರೆ ರಾಜಕಾರಣದಲ್ಲಿ ಯಾರು ಇರುವುದಿಲ್ಲ. ನಾವು ಒಂದು ತರ ಫೀನಿಕ್ಸ್ ಹಕ್ಕಿ ಇದ್ದ ಹಾಗೆ ಮತ್ತೆ ಎದ್ದು ಬರುತ್ತೇವೆಮತ್ತೆ ನಾವು ಎದ್ದು ಬರುತ್ತೇವೆ ಎನ್ನುವ ದೃಢವಾದ ನಂಬಿಕೆ ನಮ್ಮ ಬಳಿ ಇದೆ. ರಾಜಕಾರಣದಲ್ಲಿ ಜೆಡಿಎಸ್ ಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ನನ್ನ ಪ್ರಕಾರ ಜೆಡಿಎಸ್ ನಲ್ಲೆ ಎಲ್ಲರೂ ಇರುತ್ತಾರೆ ಎನ್ನುವ ನಂಬಿಕೆ ಇದೆ. ಕೆಲವೊಂದು ಸರಿ ಹೇಳಲು ಆಗುವುದಿಲ್ಲ ಓವರ್ ಕಾನ್ಫಿಡೆನ್ಸ್ ಸಹ ಅಲ್ಲ.ಪಕ್ಷದಲ್ಲಿ ಇರುವರೆಲ್ಲರೂ ಗಟ್ಟಿಯಾಗಿ ಪಕ್ಷದಲ್ಲಿ ಇರುತ್ತಾರೆ.

ಮಧು ಬಂಗಾರಪ್ಪ ಸಹ ಜೆಡಿಎಸ್ ಅಲ್ಲಿ ಇದ್ದು ಹೋದವರು. ಎಲ್ಲರನ್ನ ಎಳೆದುಕೊಂಡು ಹೋಗುತ್ತೇವೆ ಎನ್ನುವುದು ತಪ್ಪು. ಅವರ ಬಗ್ಗೆ ಗೌರವವಿದೆ ವಿಶ್ವಾಸವಿದೆ. ಪಕ್ಷದ ವಿಚಾರ ಬಂದಾಗ ಅವರ ಪಕ್ಷ ಅವರಿಗೆ ನಮ್ಮ ಪಕ್ಷ ನಮಗೆ ಎಂದು ತಾಕೀತು ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close