ಮಾಣಿ ಜಲಾಶಯದಲ್ಲಿ ನೀರುಪಾಲಾದ ಕೆಪಿಸಿ ಭದ್ರತೆ ಪಡೆಯ ಶೋಧಕಾರ್ಯಕ್ಕೆ ಈಶ್ವರ್ ಮಲ್ಪೆ!



ಸುದ್ದಿಲೈವ್/ಶಿವಮೊಗ್ಗ

ನಾಲ್ಕು ದಿನದಿಂದ ಕಾಣೆಯಾಗಿರುವ ಕೆಪಿಸಿ ಭದ್ರತಾ ಸಿಬ್ಬಂದಿಯ ಶೋಧಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕು ದಿನದ ಹುಡುಕಾಟಕ್ಕು ಸುಳಿವು ಸಿಗದಂತಾಗಿದೆ. 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿಯ ಮಾಣಿ ಜಲಾಶಯದ  70 ಅಡಿ ಆಳದಲ್ಲಿ ಶೋಧಕಾರ್ಯ ನಡೆದಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ಯಡೂರು ಬಳಿಯ ಮಾಣಿ  ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು ದಿನದಿಂದ ನಾಪತ್ತೆಯಾದ್ದಾರೆ. 

ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಹೊರಟ ಭರತ್ ವಾಪಾಸ್ ಮನೆಗೆ ಬಂದಿರಲಿಲ್ಲ.ಮಾಣಿ ಡ್ಯಾಂ ಸಮೀಪ ಭರತ್ ಬೈಕ್ ಕಂಡುಬಂದಿದ್ದು ಜಲಾಶಯ ವ್ಯಾಪ್ತಿಯಲ್ಲಿ ಶೋಧ ಕಾರ್ಯ ತೂವ್ರಗೊಂಡಿದೆ. ತೀರ್ಥಹಳ್ಳಿ ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕೂಡ ಶೋಧಕಾರ್ಯ ಆರಂಭಿಸಿದ್ದಾರೆ. 


ಜಲಾಶಯದ ಬುಡದಲ್ಲಿ 70 ಅಡಿಗೂ ಹೆಚ್ಚು ಆಳವಿದ್ದು ಶೋಧಕಾರ್ಯವೊಂದು ಸವಾಲಗಿದೆ. ಭರತ್ ಕೆಪಿಸಿಯ ವಾರಾಹಿ ಮಾಣಿ ಡ್ಯಾಂನಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಭರತ್ ಗೆ 9 ವರ್ಷದ ಗಂಡು ಮಗು ಇದ್ದು, ಪತ್ನಿ ಪೂರ್ಣೇಶ್ವರಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close