ಸುದ್ದಿಲೈವ್/ಶಿವಮೊಗ್ಗ
ಸರ್ಕಾರದ ಪೀಠೋಪಕರಣ ಹಾನಿ, ಅಧಿಕಾರ, ಹಣ ಮತ್ತು ಆಸ್ತಿ ದುರುಪಯೋಗದ ಆರೋಪದ ಅಡಿ ಹಸೂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ (ಪಿಡಿಒ) ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಸೂಡಿ ಗ್ರಾಪಂ ಪಿಡಿಒ ಮಂಜಮ್ಮನವರು ಕುಂಚೇನಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜನೆಯಾಗಿದ್ದು ಈಗ ಇವರನ್ನ ಅಮಾನತ್ತಿನಲ್ಲಿಡಲಾಗಿದೆ. ಇವರ ವಿರುದ್ದಧ ದೂರೆಂದರೆ ಸರ್ಕಾರದ ಹಣ ದುರುಪಯೋಗ,
ಆಸ್ತಿ ದುರಪಯೋಗ ಮತ್ತು ಅಧಿಕಾರ ದುರ್ಬಳಕೆ ಹಾಗೂ ಸರ್ಕಾರದ ಪೀಠೋಪಕರಣಗಳನ್ನ ಹಾಳು ಮಾಡಿರುವುದನ್ನ ಇಲಾಖಾ ತನಿಖೆಯಲ್ಲಿ ಸಾಬೀತಾಗಿದೆ. ಜಿಪಂ ಮುಖ್ಯಲೆಕ್ಕಾಧಿಕಾರಿ ರಮೇಶ್ ಅವರ ವರದಿಯನ್ನ ಪರಿಶೀಲಿಸಿದ್ದ ತಾಲೂಕ ಪಂಚಾಯತ್ ಇಒ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಹಸೂಡಿ ಗ್ರಾಮಪಂಚಾಯಿತಿಯಲ್ಲಿ 2,15,523 ರೂ. ಹಣ ದುರುಪಯೋಗ ವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದ್ದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.