ಸುದ್ದಿಲೈವ್/ಶಿವಮೊಗ್ಗ
ವಕ್ಫ್‌ಗೆ ಮಠಮಾನ್ಯಗಳ ಜಮೀನು ಸೇರಿಸಿಕೊಳ್ಳುವುದನ್ನ ಮುಂದು ವರೆಸಿದ್ದರೆ ಜಮೀರ್ ಶಿವಮೊಗ್ಗಕ್ಕೆ ಬರಬೇಡಿ ಎಂದಿದ್ದೆ. ಈಗ ಸರ್ಕಾರ ಸುತ್ತೋಲೆ ಬಂದಿದೆ ನೋಟೀಸ್ ನೀಡದಂತೆ ಜಿಲ್ಲಾಧಿಕಾರಿಗೆ ಸೂಚನೆ ಬಂದಿದೆ. ಇದು ನಮ್ಮಹೋರಾಟದ ಫಲವೆಂದು ಶಿವಮೊಗ್ಗ ಶಾಸಕ ಚೆನ್ನಬಸಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರನ್ನ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆತುಂಗ ಹಳೇಯ ಸೇತುವೆಯಿಂದ ಬೈಪಾಸ್ ಸೇತುವೆಯವರೆಗೆ ವಕ್ಫ್ ಗೆ ಹೋಗಲಿದೆ ಎಂಬ ಆತಂಕವಿತ್ತು. ಶಿವಮೊಗ್ಗದ ಬಡವರ ಮನೆ ಹಂಚಲು ಬಾರದ ಸಚಿವ ಜಮೀರ್ ವಕ್ಫ್ ಮೀಟಿಂಗ್ ಗೆ ಬರ್ತೀರ? ಎಂದು ಪ್ರಶ್ನಿಸಿದ ಶಾಸಕರು ಗಡಿಪಾರು ಮಾಡಬೇಕಾದುದ್ದು ಸಚಿವ ಜಮೀರ್ ನ್ನ ಎಂದು ಗುಡುಗಿದರು.
ಸಚಿವ ಜಮೀರ್ ಬಗ್ಗೆ ಗೌರವವಿದೆ. ಬಡವರ ಹಣ ಬಿಡುಗಡೆಗೆ ಸಹಕರಿಸಿದ್ದೀರಿ ಆದರೆ ಬೇಕಾಬಿಟ್ಟಿ ಮಾಡಲು ಬಿಜೆಪಿ ಬಿಡಲ್ಲ ಎಂದ ಶಾಸಕರು ಅರಣ್ಯ ಇಲಾಖೆಯಿಂದ ಬರುವ ನೀರಿಗೆ ಸೆಸ್ ಹಾಕುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಮತ್ತು ಗಾಳಿ ಸಹ ಅರಣ್ಯದಿಂದ ಬರುತ್ತದೆ ಅದಕ್ಕೂ ಸೆಸ್ ಹಾಕ್ತೀರ ಎಂದು ಗುಡುಗಿದರು.
ಹಣವಿಲ್ಲವೆಂದರೆ ಭಿಕ್ಷೆ ಬೇಡಿ, ಶಬರಿಮಲೆ ಮತ್ತು ಪ್ರವಾಸೋದ್ಯಮದಲ್ಲಿ ಭಿಕ್ಚೆ ಬೇಡಿ ಶಬರಿ ಮಲೆಗೆ ಬರುವ ಭಕ್ತರು ನಿಮಗೆ ಭಿಕ್ಷೆ ಹಾಕ್ತಾರೆ ಎಂದು ವ್ಯಂಗ್ಯವಾಡಿದ ಶಾಸಕರು ಇಂತಹ ದುರ್ಬಿದ್ದಿ ಬಿಡಬೇಕು ಎಂದು ಗುಡುಗಿದರು.