ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ರಾಜ್ಯ ಸೀನಿಯರ್ಸ್ ಮಹಿಳೆಯರ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಕುಮಾರಿ ಅಧಿತಿ ಆರ್ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 4 ರಿಂದ 16 ವರವಿಗೂ ಹರಿಯಾಣದಲ್ಲಿ ಬಿಸಿಸಿಐ ವತಿಯಿಂದ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸೀನಿಯರ್ಸ್ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗಳಿಗೆ, ಶಿವಮೊಗ್ಗದ ಅಧಿತಿ. ಆರ್ ಆಡಲಿದ್ದಾರೆ.
ಅಂತರಾಷ್ಟ್ರೀಯ ಕ್ರೀಡಾಪಟು ವೇದಾ ಕೃಷ್ಣಮೂರ್ತಿ ಕರ್ನಾಟಕ ತಂಡವನ್ನು ಮುನ್ನಡೆಸಲಿರುವರು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
15 ಜನರನ್ನ ಒಳಗೊಂಡ ತಂಡ ಹೀಗಿದೆ.
ವೃಂದ ದಿನೇಶ್, ಶುಭ ಸತೀಶ್, ವೇದ ಕೃಷ್ಣಮೂರ್ತಿ(ನಾಯಕಿ), ಸಹನ ಎಸ್ ಪವಾರ್, ಪ್ರತ್ಯೂಶ ಕುಮಾರ್ (ವಿ), ಪುಷ್ಪ ಕಿರೆಸೂರು, ಪ್ರತ್ಯುಷ ಸಿ, ಅದಿತಿ ರಾಜೇಶ್, ಪೂಜಾ ಕುಮಾರಿ ಎಂ, ಮೊನಿಕಾ ಸಿ ಪಟೇಲ್, ರೋಶನಿ ಕಿರಣ್, ಸೌಮ್ಯ ವರ್ಮ, ನಮಿತ ಡಿಸೋಜಾ, ಅನನ್ಯ ಹೆಗಡೆ, ದಿವ್ಯ ಜ್ಞಾನಾನಂದ ಆಯ್ಕೆಯಾಗಿದ್ದಾರೆ.