ಬೋನಿಗೆ ಬಿದ್ದ ಕರಡಿ



ಸುದ್ದಿಲೈವ್/ಭದ್ರಾವತಿ

ಭದ್ರಾವತಿ ಉಪ ವಿಭಾಗದ ಅರಣ್ಯ ಸಿಬ್ಬಂದಿಗಳು, ಮತ್ತೊಂದು ಕರಡಿಯನ್ನು ಸೆರೆಹಿಡಿದಿದ್ದಾರೆ ಇಲ್ಲಿನ ಹೊಳೆ ಹೊನ್ನೂರು ಭಾಗದಲ್ಲಿ ಡಣಾಯಕಪುರ ಗ್ರಾಮದಲ್ಲಿ ಕಾಲಭೈರವೇಶ್ವರ ದೇವಸ್ಥಾನಕ್ಕೆ ಬಂದಿದ್ದ ಐದು ವರ್ಷದ ಹೆಣ್ಣು ಕರಡಿ ಬೋನಿನಲ್ಲಿ ಸರಿಯಾಗಿದೆ. ಆದರೆ ಈ ಕರಡಿಯ ಬಗ್ಗೆ ಹೆಚ್ಚು ವಿವರ ಲಭ್ಯವಿಲ್ಲ.

ಈ ಹಿಂದೆಯೂ ಹೊಳೆಹೊನ್ನೂರಿನ ತಟ್ಟೇಹಳ್ಳಿ ಭಾಗದಲ್ಲಿ ಚೌಡೇಶ್ವರಿ ದೇವಸ್ಥಾನದ ಬಳಿಗೆ ಬಂದ ಕರಡಿಯನ್ನು ಸೆರೆಹಿಡಿದು ಲಕ್ಕವಳ್ಳಿ ಅರಣ್ಯ ವ್ಯಾಪ್ತಿಗೆ ಬಿಡಲಾಗಿತ್ತು. ಅದೇ ರೀತಿ ಈ ಕರಡಿಯನ್ನ ಲಕ್ಕವಳ್ಳಿ ಅರಣ್ಯ ಪ್ರದೇಶಕ್ಕೆ ಬೋನಿಗೆ ಬಿದ್ದ ಕರಡಿಯನ್ನ ಬಿಡಲಾಗಿದೆ. 

ಕಳೆದ ಎರಡು ವಾರಗಳಿಂದಲೂ ಕರಡಿ ಓಡಾಟದ ಬಗ್ಗೆ ಈ ಭಾಗದ ಜನರು ಆತಂಕಗೊಂಡಿದ್ದರು ವಲಯ ಅರಣ್ಯ ಅಧಿಕಾರಿ ದುಗ್ಗಪ್ಪ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿಗಳು ವಾರದಿಂದ ಕರಡಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.

ಅಂತೂ ಕರಡಿ ಬುಧವಾರ ಬೆಳಗ್ಗೆ ಸೆರೆಯಾಗಿದೆ ಪದೇ ಪದೇ ಈ ಭಾಗದಲ್ಲಿ ಕರಡಿಗಳ ಓಡಾಟ ಸಾಮಾನ್ಯವಾಗಿದೆ. ಕರಡಿ ಹಿಂಡು ಸುಮಾರು ಹತ್ತರಿಂದ ಹದಿನೈದು ಕಿಲೋಮೀಟರ್ ದೂರ ನಿರಾತಂಕವಾಗಿ ಓಡಾಡುತ್ತವೆ. 

ಹಿಂದೆಯೂ ಕೂಡ ಈ ಭಾಗದಲ್ಲಿ ಕರಡಿಯನ್ನು ಸೆರೆ ಹಿಡಿಯಲಾಗಿತ್ತು ಅದು ದೇವಸ್ಥಾನದ ಸುತ್ತಲ ಆಹಾರ ಅರಸಿ ಬಂದಿತ್ತು ಎನ್ನಲಾಗಿದೆ. ಈ ಕರಡಿಗೂ ಕೂಡ ಇದೇ ತರಹ ದೇವಸ್ಥಾನ ಸಮೀಪ ಬರುತ್ತಿತ್ತು ಎಂಬ ಸಂದೇಹವಿದೆ. ಸೆರೆಹಿಡಿದ ಕರಡಿಯನ್ನು ಪುನಃ ಲಕ್ಕವಳ್ಳಿ ಅರಣ್ಯ ವ್ಯಾಪ್ತಿಗೆ ಬಿಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close