ಸುದ್ದಿಲೈವ್/ಭದ್ರಾವತಿ
ಮುಸ್ಲೀಂ ಯುವತಿಯೊಬ್ಬಳು ಬೇರೆ ಜಾತಿಯೊಬ್ಬನ ಜೊತೆ ಓಡಾಡುವ ಕುರಿತಂತೆ ವಿಚಾರಿಸಲು ಹೋದವರ ವಿರುದ್ಧವೇ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 14 ಜನರ ವಿರುದ್ಧ ದೂರು ದಾಖಲಾಗಿದೆ.
ಅರೆಬಿಳಚಿಯಲ್ಲಿ ಯುವತಿಯೋರ್ವಳು ಇತರೆ ಜಾತಿಯ ಯುವಕನ ಜೊತೆ ಓಡಾಡುವ ವಿಷಯದಲ್ಲಿ ಮಕ್ಬೂರ್ ಪಾಶ, ತೋಹಿದ್, ರಫೀಕ್ ತಸೀನಾ, ತಾಂಜೀಯಾ, ಕಲೀಂ, ಸುನ್ನು, ನಸ್ರುಲ್ಲಾ, ಅಬ್ದುಲ್, ಜಿಶಾನ್, ರಿಜ್ವಾನ್, ಅಬ್ಜುಲ್ಲಾ, ಅಬಾಸ್ ಅಲಿ ಅಕ್ಬರ್ ಡೌಟ್ ಕ್ಲಿಯರ್ ಮಾಡಿಕೊಳ್ಳಲು ಹೋದವರ ವಿರುದ್ಧ ಎಫ್ಐಆರ್ ಆಗಿದೆ.
ವಿಷಯ ಕೇಳಲು ಹೋಗಿದ್ದ 14 ಜನರು ಬೇರೆ ಜಾತಿಯವನ ಜೊತೆ ಓಡಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಯುವತಿ ಮತ್ತು ಅವರ ತಾಯಿ ನಾವು ಯಾರ ಜೊತೆ ಓಡಾಡಿಲ್ಲ ನಮ್ಮ ವಿರುದ್ದವೇ ಇಲ್ಲಸಲ್ಲದ ಆರೋಪ ಯಾಕೆ ಮಾಡ್ತೀರ ಎಂದು ಕೇಳಿದ್ದಾರೆ.
ಮಸೀದಿ ಕಮಿಟಿಯವರು ಕರೆಯುತ್ತಿದ್ದಾರೆ ಬನ್ನಿ ಎಂದಿದ್ದಾರೆ. ಮಸೀದಿ ಕಮಿಟಿ ಎದಯರು ಹೋದಾಗ ಅರ್ಜಿ ಕೊಡಿ ತೀರ್ಮಾನಿಸೋಣ ಎಂದು ಭರವಸೆ ನೀಡಿರುತ್ತಾರೆ. ಅದರಂತೆ ಯುವತಿ ಮತ್ತು ಯುವತಿ ತಾಯಿಯವರು ಅಕ್ಬರ್ ಅವರ ಮನೆಗೆ ಹೋದಾಗ ಅಲ್ಲೇ ಇದ್ದ 13 ಜನರು ಹಲ್ಲೆ ನಡೆಸಿರುವ ಆರೋಪವನ್ನ ಯುವತಿ ಮಾಡಿದ್ದಾರೆ.
ಈ 14 ಜನರು ಯುವತಿಗೆ ದೈಹಿಕ ಮತ್ತು ಕೊಲೆ ಯತ್ನ ಮಾಡಿದ್ದು, ಮಸೀದಿ ಕಮಿಟಿಯವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರೂ ಬಗೆಹರಿಸದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.