ಇಡೀ ಹಿಂದೂ ಸಮಾಜವೇ ಗೋ ಸಂರಕ್ಷಣೆಯ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ ದೇವರಾಜ್ ಅರಳಿಹಳ್ಳಿ



ಸುದ್ದಿಲೈವ್/ರಿಪ್ಪನ್ ಪೇಟೆ

ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಸಾರ್ವಜನಿಕ ಗೋಪೂಜೆಯನ್ನು ನೆರವೇರಿಸಲಾಯಿತು.   

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ್ ಅರಳಿಹಳ್ಳಿ ರವರು ಸಮಸ್ತ ಹಿಂದೂ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಕೋರುತ್ತಾ ಸಂಘಟನೆಯ ಕಾರ್ಯಕರ್ತರು ಹಲವಾರು ಗೋ ರಕ್ಷಣೆ ಮತ್ತು ಗೋಹತ್ಯೆ ವಿರುದ್ಧ ಜಿಲ್ಲೆಯಲ್ಲಿ ಕಾನೂನಾತ್ಮಕವಾದ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು. 

ಇಲ್ಲಿಯವರೆಗೂ ಕಟುಕರ ಪಾಲಾಗಬೇಕಾಗಿದ್ದ ಸಾವಿರಾರು ಗೋವುಗಳ ರಕ್ಷಣೆ ಮಾಡಲಾಗಿದೆ. ನೂರಾರು ಪ್ರಕರಣಗಳು ದಾಖಲಾಗಿವೆ. ಗೋ ರಕ್ಷಣೆ ಬರೀ ಹಿಂದೂ ಸಂಘಟನೆಗಳ ಜವಾಬ್ದಾರಿ ಮಾತ್ರ ಅಲ್ಲ ಇಡೀ ಹಿಂದೂ ಸಮಾಜವೇ ಗೋ ರಕ್ಷಣೆಯ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಹತ್ಯೆ ವ್ಯಾಪಕ ಗೋಮಾಂಸದ ದಂಧೆ ವಿಚಾರವಾಗಿ ಕೆಲವು  ಭ್ರಷ್ಟರು ಭಾಗಿಯಾಗಿರುವುದರಿಂದ  ಸಂಪೂರ್ಣ ಗೋ ಹತ್ಯೆ ಗೋಮಾಂಸದ ಹೋಟೆಲ್ ಗಳು ನಿಲ್ಲುತ್ತಿಲ್ಲ. 

ಗೋ ಮಾಂಸದ ದಂಧೆಗೆ ಬೆಂಬಲವಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧವು ಸಹ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಸಜ್ಜಾಗುತ್ತಿದ್ದೇವೆ. ಸಂಘಟನೆಯ ಕಾರ್ಯಕರ್ತರು ಗೋ ರಕ್ಷಣೆಯ ವಿಚಾರವಾಗಿ  ಹಿಂದೂ ಸಮಾಜವನ್ನು  ಜಾಗೃತಗೊಳಿಸಬೇಕಾಗಿದೆ.  ಹಿಂದೂ ಜಾಗರಣ ವೇದಿಕೆ  ಜಿಲ್ಲೆಯಲ್ಲಿ ಸಂಪೂರ್ಣ ಗೋಹತ್ಯೆ ನಿಲ್ಲುವವರೆಗೂ ಕಾನೂನಾತ್ಮಕವಾದ ಹೋರಾಟವನ್ನು ಮುಂದುವರಿಸುತ್ತದೆ ಎಂದು ಹೇಳಿದರು. 

ಗೊ ಪೂಜಾ ಸಂಭ್ರಮಾಚರಣೆಯ ಸಮಯದಲ್ಲಿ ಸಂಘಟನೆಯ ಜಿಲ್ಲಾ ಪ್ರಮುಖರಾದ  ದೇವರಾಜ್ ಕುಶನ್, ಸಂಜಯ್ ಕೆಂಚನಾಲ, ಕಾರ್ಯಕರ್ತರುಗಳಾದ ಮಂಜುನಾಥ್ ಆಚಾರ್,  ರಂಜನ್,  ಈಶ್ವರ್ ಶೆಟ್ಟಿ,  ಗಣೇಶ್, ಗುರು, ಉದಯ, ಶಶಿಕುಮಾರ್, ಶ್ರೀನಿವಾಸ್ ಆಚಾರ್, ರಾಘವೇಂದ್ರ, ಫ್ಯಾನ್ಸಿ ರಮೇಶ,  ಲೋಹಿತ, ಮಧುಸೂದನ್. ರಿಪ್ಪೆನ್ ಪೇಟೆಯ ಗ್ರಾಮಸ್ಥರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close