ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ ಆಧಾರದ ಮೇರೆಗೆ ಅರ್ಜಿ ಆಹ್ವಾನ



 ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಾಜಿ ಸೈನಿಕರುಗಳ ಗಮನಕ್ಕೆ


ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಪೊಲೀಸ್‌ ಇಲಾಖೆಯಿಂದ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು, ಆಸಕ್ತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು  ತಮ್ಮ ಇಚ್ಚೆಯನ್ನು ದಿನಾಂಕ 25-11-2024 ರಂದು ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 01.00 ಘಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.  ಶಿವಮೊಗ್ಗ - 30, ದಾವಣಗೆರೆ - 5 ಮತ್ತು ಚಿತ್ರದುರ್ಗ - 4 ಹುದ್ದೆಗಳು ಖಾಲಿ ಇದ್ದು,  ಒಂದು ವರ್ಷದ ಗುತ್ತಿಗೆ ಅವಧಿಯು ಅವಶ್ಯಕತೆಗೆ ಅನುಗುಣವಾಗಿ ಮುಂದುವರೆಸುವ ಅವಕಾಶವೂ ಸಹ ಇರುತ್ತದೆ ಎಂಬುದನ್ನು ತಮ್ಮ ಮಾಹಿತಿಗಾಗಿ ನೀಡಿದೆ.  ಕರ್ತವ್ಯದ ಅವಧಿಯು 8 ಘಂಟೆಗಳು ಮೂರು ಶಿಫ್ಟ್‌ ಆಗಿದ್ದು, ವೇತನ ರೂ. 28,499/- ಆಗಿರುತ್ತದೆ.  ಆಸಕ್ತರ ಪಟ್ಟಿಯನ್ನು ಈ ಇಲಾಖೆಯ ನಿರ್ದೇಶನಾಲಯಕ್ಕೆ ದಿನಾಂಕ 25-11-2024 ರಂದೇ ನೀಡಬೇಕಾಗಿರುವುದರಿಂದ ಹೆಚ್ಚಿನ ಸಮಯವಕಾಶವಿರುವುದಿಲ್ಲ.

ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ರವರ ಆದೇಶದ ಮೇರೆಗೆ ಮೇಲಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close