ಪಾರ್ಕಿಂಗ್ ವ್ಯವಸ್ಥೆಗೆ ಸಂಘನೆಗಳು ಪೊಲೀಸ್ ಇಲಾಖೆಗೆ ಮನವಿ ಕೊಡಬೇಕಾ?



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಿಸುವಲ್ಲಿ ಸಂಚಾರಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಂಚಾರಿ ನಿಯಂತ್ರಿಸುವ ಬದಲು ದಂಡವೇ ಮಾನದಂಡ ಎಂಬ ನಿಲುವಿಗೆ ಇಲಾಖೆ ಅಂಟಿಕೊಂಡಂತಿದೆ. ಇದೇ ಮುಂದುವರೆದರೆ ಜನರೇ ಇಲಾಖೆಯ ವಿರುದ್ಧ ತಿರುಗಿಬೀಳುವ ಅಪಾಯವಿದೆ. 

25 ಸಾವಿರ ದಂಡ ಪೀಕಿಸಿದೆ, 15 ಸಾವಿರ ದಂಡ ಪೀಕಿಸಿದೆ ಎಂಬ ಫೋಸ್ ಕೊಟ್ಟು ಪತ್ರಿಕೆಗೆ ಹಾಕಿಸಿಕೊಳ್ಳುವ ಸಬ್  ಇನ್ ಸ್ಪೆಕ್ಟರ್ ಗಳ ಮನಸ್ಥಿತಿಯೂ ಅದೇ ರೀತಿ ಮುಂದುವರೆದಿದೆ. ಕೆಲ ಏರಿಯಾಗಳಲ್ಲಿ ದಂಡ ಹಾಕುವುದು ಬಿಟ್ಟರೆ ಮತ್ತೊಂದು ಏರಿಯಾವೇ ಗೊತ್ತಿಲ್ಲವೆಂಬಂತೆ ಇಲಾಖೆ ವರ್ತಿಸುತ್ತಿದೆ ಎಂಬ ಕೂಗು ಸಹ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಆಟೋದರವನ್ನ ಮಾತ್ರ ನಿಯಂತ್ರಿಸುವಲ್ಲಿಯೂ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಮೀಟರ್ ಅಳವಡಿಕೆ ಸಾಧ್ಯವಾಗುವುದಾದರೆ ಶಿವಮೊಗ್ಗದಲ್ಲಿ ಯಾಕೆ ಸಾಧ್ಯವಿಲ್ಲವೆಂಬ ಪ್ರಶ್ನೆ ಇಲಾಖೆ ಮುಂದೆ ಹಾಗೆಯೇ ಉಳಿಯಲಿದೆ. 

ಇವೆಲ್ಲದರ ಫೈಫಲ್ಯತೆಯ ಮಧ್ಯೆ ಮಲೆನಾಡ ಕೇಸರಿ ಪಡೆ ನಗರದ ಹಲವೆಡೆ ಪಾರ್ಕಿಂಗ್ ಸಮಸ್ಯೆ ನಿವಾರಿಸುವಂತೆ ಕೋರಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಮನವಿ ಮಾಡಿದೆ. ವಿಶ್ವೇಶ್ವರಯ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಆಗಿರುವ ಬಗ್ಗೆ ದೂರು ಸಲ್ಲಿಸಿದೆ. 


ನಗರದ ವಿಶ್ವೇಶ್ವರಯ್ಯ ರಸ್ತೆಯ (ವೀರಭದ್ರ ಟಾಕೀಸ್ ಮುಂಭಾಗ ಇರುವ) ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್‌ನಲ್ಲಿರುವ ದ್ವಿಚಕ್ರ ವಾಹನ ಗ್ಯಾರೇಜ್ ರವರಿಂದ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮಾರ್ಗಗಳಲ್ಲಿ ರಿಪೇರಿಗೆ ಬಂದ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ಪಕ್ಕದಲ್ಲೇ ಇರುವ ಫರ್ನಿಚರ್ ಅಂಗಡಿಯವರು ಫರ್ನಿಚರ್‌ಗಳನ್ನು ಪಾದಚಾರಿ ಮಾರ್ಗದಲ್ಲಿ ಇಡುವುದರಿಂದ ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೇ ಮುಖ್ಯರಸ್ತೆಯಲ್ಲಿಯೇ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. 

ಇಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಮಕ್ಕಳು ಮತ್ತು ವಯೋವೃದ್ಧರು ಮುಖ್ಯರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತಾವು ಈ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕು. ಹಾಗೂ ಈ ಮಾರ್ಗದಲ್ಲಿ ನೋ-ಪಾರ್ಕಿಂಗ್ (NO PARKING) ಇರುವ ಜಾಗಗಳಲ್ಲಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. 

ಹಾಗೂ ಈ ರಸ್ತೆಯು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಬಾರೀ ವಾಹನಗಳ ಓಡಾಟ ನಿಷೇಧವಿದ್ದರೂ ಇಲ್ಲಿ ಬಾರೀ ವಾಹನಗಳ ಓಡಾಟ ನಿತ್ಯ ನಡೆಯುತ್ತಿರುವುದು ಕಂಡುಬರುತ್ತಿದೆ. ಇಲ್ಲಿದ್ದ ಬಾರೀ ವಾಹನಗಳ ಓಡಾಟ ನಿಷೇದದ ಫಲಕವು ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭದಲ್ಲಿ ಕಣ್ಮರೆಯಾಗಿದೆ. ಇದರಿಂದ ಲಾರಿ ಬಸ್ ಗಳ ಸಂಚಾರವೂ ಇಲ್ಲಿ ತಡೆಯಲಾಗುತ್ತಿಲ್ಲವೆಂದು ಮನವಿ ಸಲ್ಲಿಸಿದೆ.  

ಇದು ಮಾತ್ರವೇ ಅಲ್ಲ, ಈ ಹಿಂದೆ ಅಮೀರ್ ಅಹಮದ್ ವೃತ್ತದಿಂದ ಜ್ವರಾರಿ ಮೆಡಿಕಲ್ ಸ್ಟೋರ್ ನ ವರೆಗೆ ಪಾರ್ಕಿಂಗ್ ಮಾಡುವಂತಿಲ್ಲ ಎಂಬ ಆದೇಶವನ್ನ ಪೊಲೀಸ್ ಇಲಾಖೆಯಿಂದಲೇ ಮುರಿದುಬಿದ್ದಿದೆ. ನೆಹರೂ ರಸ್ತೆಗಳಲ್ಲಿ ಡಬ್ಬಲ್ ರಸ್ತೆಗಳಿದ್ದರೂ ಸುಗಮ ಸಂಚಾರ ಕಷ್ಟವಾಗಿದೆ. ದುರ್ಗಿಗುಡಿ ಏಕಮುಖ ಸಂಚಾರವಿದ್ದರೂ ದ್ವಿಮುಖ ಸಂಚಾರಿಯಾಗಿ ಪರಿವರ್ತನೆಗೊಂಡಿದೆ. 

ಸ್ಮಾರ್ಟ್ ಸಿಟಿಗಳ ಅವಾಂತರದಿಂದ ರಸ್ತೆಗಳು ಪಾದಾಚಾರಿಗಳು ಗುಂಡಿಗಳಾಗಿವೆ. ವಾಹನ ಸಂಚಾರರಿಗೆ ಸುಗಮ ವಾಹನ ಸಂಚಾರ ಮಾಡಿಕೊಡಬೇಕೆಂಬ ಯೋಜನೆಗಳು ಇಲ್ಲದೆ ಸಂಚಾರಿ ಪೊಲೀಸರು ಮಾತ್ರ ವಾಹನ ಅಡ್ಡಗಟ್ಟಿ ದಂಡ ಹಾಕುವಲ್ಲಿ ಬ್ಯುಸಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close