ಮೂರು ದಿನಗಳವರೆಗೆ ಗೋಪಾಳದ ಮೈದಾನದಲ್ಲಿ ಬಾಕ್ಸ್ ಕ್ರಿಕೆಟ್ ಕಲರವ



ಸುದ್ದಿಲೈವ್/ಶಿವಮೊಗ್ಗ

ನೀವೇಲ್ಲರೂ ರಾಷ್ಟ್ರೀಯ, ಅಂತರಾಷ್ಟ್ರೀಯ, ಗಲ್ಲಿಗಳಲ್ಲಿ ಆಡುವ ಕ್ರಿಕೆಟ್ ಮ್ಯಾಚ್ ನೋಡಿದ್ದೀರಿ. ಆದರೆ 30 ಗಜದ ಬಾಕ್ಸ್ ಕ್ರಿಕೆಟ್ ನೋಡಿದ್ದೀರಾ? ದಾಂಡಿಗನ ಕೈಚಳಕದಿಂದ ರನ್ ಕದಿಯುವ ಚಾಕಚಕ್ಯತೆ ನೋಡಿದ್ದೀರಾ? ಬಾಲಿನ ಮೊದಲ ಪಿಚ್ 30 ಗಜ ಹೊರಕ್ಕೆ ಬಿದ್ದರೆ ಔಟ್ ಆಗುವ ನಿಯಗಳೊಂದಿಗೆ ನಡೆಯುವ ಆಟ ಹೇಗಿರುತ್ತೆ ಎಂದು ಆನಂದಿಸಿದ್ದೀರಾ? 

ಅಂತಹದ್ದೊಂದು ಕ್ರಿಕೆಟ್ ನ್ನ ಆನಂದಿಸುವ ಸೌಭಾಗ್ಯ ಶಿವಮೊಗ್ಗದವರಿಗೆ ಮೂರು ದಿನಗಳ ವರೆಗೆ ಉಣಬಡಿಸಲು ಸಿದ್ದವಾಗಿ ನಿಂತಿವೆ  ಗೋಪಾಳದ ಸಿಹಿಮೊಗ್ಗೆ ಕ್ರೀಡಾ  ಮತ್ತು ಸಾಂಸ್ಕೃತಿಕ ಕ್ಲಬ್, ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಸ್ಮಾರ್ಟ್ ಶಿವಮೊಗ್ಗ ಡೆವೆಲಪರ್ಸ್ ಮತ್ತು ಬಿಲ್ಡರ್ಸ್ ಸಂಘಟನೆಗಳು. 

30 ಗಜದ ಬಾಕ್ಸ್  ಕ್ರಿಕೆಟ್ ಪಂದ್ಯಾವಳಿಗಳು ನಗರದ ಗೋಪಾಳದ ಮೈದಾನದಲ್ಲಿ ನಡೆಯಲಿದೆ.  ರಾಷ್ಟ್ರೀಯ ಮಟ್ಟದ ಲೀಗ್ ಕ್ರಿಕೆಟ್ ನ 14 ನೇ ಬಾಕ್ಸ್ ಕ್ರಿಕೆಟ್ ನಡೆಯಲಿದೆ. ದೊಡ್ಡ ಮೈದಾನದ ಕೊರತೆಯಿಂದಾಗಿ 90 ನೇ ದಶಕದಲ್ಲಿ ಸಣ್ಣ ಮೈದಾನದಲ್ಲಿ 6 ತಂಡಗಳಿಂದ  ಆರಂಭಗೊಂಡ ಕ್ರಿಕೆಟ್ ಆಟ ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ ಎಂದು ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು. 

ನ‌.15, 16  ಮತ್ತು 17 ರಂದು ಗೋಪಾಳ ಮೈದಾನದಲ್ಲಿ ಬೆಳಿಗ್ಗೆ 9 ರಿಂದ  ರಾತ್ರಿ 9 ಗಂಟೆಯ ವರೆಗೆ ಪಂದ್ಯಾವಳಿಗಳು ನಡೆಯಲಿದೆ. ನ.14 ರಂದು  ಉದ್ಘಾಟನೆ ನಡೆಯಲಿದೆ. ದಾಂಡಿಗನು ಬೀಸಿದ ಚೆಂಡು 30 ಗಜ ಹೊರಗೆ ಚಿಮ್ಮಿದರೆ ಔಟ್, ಇದು ಟೆನ್ನಿಸ್ ಬಾಲ್ ಆಟವಾಗಿದ್ದು ಒಂದು ತಂಡದಲ್ಲಿ 9 ಜನರಿದ್ದು 6 ಓವರ್ ಪಂದ್ಯಾವಳಿಯಾಗಿರುತ್ತದೆ ಎಂದರು. 

ದಾಂಡಿಗರ ಕೈಚಳಕ ನೋಡಲು ಈ ಪಂದ್ಯಾವಳಿ ನೋಡಬೇಲು. ಈ ಪಂದ್ಯಾವಳಿಯಲ್ಲಿ 44 ತಂಡ ಭಾಗಿಯಾಗುತ್ತಿದ್ದು, ಹೊರ ರಾಜ್ಯದಿಂದ 6 ತಂಡ ಆಗಮಿಸುತ್ತಿದ್ದಾರೆ. ರಾಜ್ಯದಿಂದ 18 ತಂಡ ತನ್ನ ಭಾಗಿಯಾಗಲಿದ್ದು, ಶಿರಸಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಿಂದ 20 ತಂಡ ಭಾಗಿಯಾಗಲಿದೆ ಎಂದರು. 

ಇದೇ ವೇಳೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರ ಹುಟ್ಟುಹಬ್ಬವನ್ನೂ ಆಚರಿಸಲಾಗುತ್ತಿದೆ. ಕ್ರಿಕೆಟ್ ಪಂದ್ಯಾವಳಿ ಅವರ ಹುಟ್ಟು ಹಬ್ಬದ ಹೆಸರಿನಲ್ಲಿಯೇ ನಡೆಯಲಿದೆ.  ಪಂದ್ಯಾವಳಿಗಳಿಗೆ ಉಚಿತ ಪ್ರವೇಶವಿದೆ. ಪ್ರಥಮ ಬಹುಮಾನ 1,77,777 ಹಣ ಮತ್ತು 6 ಅಡಿ ಟ್ರೋಫಿ,  ದ್ವಿತೀಯ ಬಹುಮಾನ 77,777 ಹಣ ಮತ್ತು 5 ಅಡಿ ಟ್ರೋಫಿ, ಮೂರನೇ ಬಹುಮಾನ 37,777 ಹಣ ಮತ್ತು 3 ಅಡಿ ಟ್ರೋಫಿಗಳಿವೆ



ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಮೌಲಾನಾ ಅಬ್ದುಲ್ ರೆಹಮಾನ್ ದಾಯಿ, ಸ್ಟೀಫನಗ ಅಲ್ಬುಕರ್ಕ್ ನ.14 ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ಶಾಸಕ ಚೆನ್ನಬಸಪ್ಪ, ಶಿರಸಿಯ ಶಾಸಕ ಭೀಮಣ್ಣ ಟಿ ನಾಯ್ಕ್, ಕೆ.ಬಿ.ಪ್ರಸನ್ನ ಕುಮಾರ್, ಎಂಎಲ್ ಸಿ ಬಲ್ಕಿಸ್ ಭಾನು, ಸೂಡಾ ಅಧ್ಯಕ್ಷ ಸುಂದರೇಶ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close