ವಿವಿಧ ಬೇಡಿಕೆಗಳನ್ನ‌ ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು ವಿವಿಧ ಬೇಡಿಕೆಯನ್ನ ಈಡೇರಿಸುವಂತೆ ಆಗ್ರಹಿಸಿ ಡಿಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದೆ. 

ರೈತ ಸಂಘ ನ.26 ರಂದು 500 ಜಿಲ್ಲಗಳಲ್ಲಿ ರೈತರ ಕಾರ್ಮಿಕರ ಎಚ್ಚರಿಕಾ ರ‌್ಯಾಲಿ ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದಂತೆ 25 ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ.  ವಕ್ಫ್ ಆಸ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರದ್ದು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟರ್ ನೀತಿಯಿಂದ ರೈತರು, ಕಾರ್ಮಿಕರು, ದುಡಿಯುವ ಜನರ ಜೊತೆಗೆ ಪಟ್ಟಣದಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಬೀದಿಗೆ ಬರುವಂತಾಗಿದೆ ಎಂದು ಆಗ್ರಹಿಸಲಾಗಿದೆ. 

ಕಳಸ ಬಂಡೂರಿ ಯೋಜನೆಗೆ ಅಗತ್ಯ ಕಾನೂನಿಗೆ ಒಪ್ಪಿಗೆ ನೀಡಿ ಕಾಮಗಾರಿಗೆ ಚಾಲನೆ ನೀಡಬೇಕು. ಎಂಎಸ್ ಪಿಯನ್ನ ಮೌಲ್ಯಾಧಾರಿತವಾಗಿ ಕಾನೂನು ಬದ್ಧ ಮಾಡಬೇಕು. ವಿದ್ಯೂತ್ ಖಾಸಗೀಕರಣ ಮಾಡುವುದನ್ನ ತಡೆಯಬೇಕು. ಕೃಷಿ ಐಪಿ ಸೆಟ್ ಗಳಿಗೆ ಆಧಾರ ನಂಬರ್ ಜೋಡಣೆ ಕೈಬಿಡಬೇಕು.

ಕೃಷಿ ಉಪಕರಣಗಳಿಗೆ ಜಿಎಸ್ ಟಿ ರದ್ದುಗೊಳ್ಳಬೇಕು. ರೈತರ ಸಾಲಕ್ಕೆ ಸಿಬಿಲ್ ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು 25  ಹಕ್ಕೋತ್ತಾಯವನ್ನ ಮಾಡುವುದರ ಮೂಲಕ ರೈತ ಸಂಘ ಮನವಿಯಲ್ಲಿ ಒತ್ತಾಯಿಸಿದೆ.  

ದಲಿತ ಸಂಘರ್ಷ ಸಮಿತಿ ಅಂಬೆಡ್ಕರ್ ವಾದ ಸಂಘಟನೆ ಬಿಹಾರದಲ್ಲಿರುವ ಬುದ್ದಗಯಾದ ಮಹಾಬೋದಿ ಮಹಾ ವಿಹಾರದ ಆಡಳಿತವನ್ನ ಬೌದ್ಧರಿಗೆ ನೀಡುವಂತೆ ಆಗ್ರಹಿಸಿ ರೈತ ಸಂಘರ್ಷ ಸಮಿತಿಯೊಂದಿಗೆ ಪ್ರತಿಭಟನೆಗೆ ಇಳಿದಿದೆ. ಸಂವಿದಾನ ಸಮರ್ಪಣಾ ದಿನದ ಪ್ರಯುಕ್ತ ಬೌದ್ಧ ಧಾರ್ಮಿಕ ಹಕ್ಕಿಗಾಗಿ ಸಂವಿಧಾನ ಕಲಂ 3,25,26 ಮತ್ತು 29 ನ್ನ ಜಾರಿಗೊಳಿಸಲು ಅಡ್ಡಿಯಾಗಿರುವ ಬಿ‌ಟಿ ಆಕ್ಟ್ 1949 ರದ್ದುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. 

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಹಾಲೇಶಪ್ಪ, ಆರ್ ಅಶೋಕ್, ಎಂ.ಆರ್, ಶಿವಕುಮಾರ್, ಎಂ ಮಂಜುನಾಥ್, ಜಗ್ಗು, ಎಡಿ ಆನಂದ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close